• April 24, 2026
  • Last Update April 23, 2026 5:51 pm
  • Brahmavara

ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ.ಪೂಜಾರಿಗೆ 625 ಅಂಕಗಳು

ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ.ಪೂಜಾರಿಗೆ 625 ಅಂಕಗಳು

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ದಿ :

ಕುಂದಾಪುರ, ಎ.23: ಎಸ್‌ಎಸ್‌ಎಲ್‌ಸಿ. ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ.ಪೂಜಾರಿಗೆ 625ಅಂಕಗಳನ್ನು ರಾಜ್ಯದ ಟಾಪರ್‌ಗಳಲ್ಲಿ ಓರ್ವರಾಗಿದ್ದು ಉಡುಪಿ ಜಿಲ್ಲೆಗೆ ಇವರು ಪ್ರಥಮ ಸ್ಥಾನಿಯಾಗಿದ್ದಾರೆ.


ರಾಜ್ಯದಲ್ಲಿ ಈ ಬಾರಿ ಒಟ್ಟು 7 ಮಂದಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಪ್ರೀತಮ್ ಬಿದ್ಕಲ್‌ಕಟ್ಟೆ ನಿವಾಸಿ ಗಣಪತಿ ಪೂಜಾರಿ ಹಾಗೂ ನಾಗರತ್ನ ಪೂಜಾರಿ ದಂಪತಿ ಪುತ್ರನಾಗಿದ್ದು ಗಣಪತಿ ಪೂಜಾರಿ ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಖಾಸಗಿ ಬಸ್ಸಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ಗುರಿ ಇದ್ದಲ್ಲಿ ಸಾಧನೆ ಸಾಧ್ಯ- ಪ್ರೀತಮ್
ನನ್ನ ಕೈ ಬರಹದ ಅಕ್ಷರಗಳ ಬಗ್ಗೆ ಸಂದೇಹವಿದ್ದು ಒಂದೆರಡು ಅಂಕಗಳು ಹೋಗಬಹುದೆಂದು ಯೋಚಿಸಿದ್ದೆ. ನನ್ನ ತಂದೆ ನನಗೆ ಪೋನ್ ಮಾಡಿ 625 ಅಂಕಗಳು ಬಂದಿದೆ ಎಂದು ತಿಳಿಸಿದಾಗ ತುಂಬಾ ಸಂತೋಷವಾಯಿತು.ಮನೆಯಲ್ಲಿ ಪೋಷಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ನನಗೆ ತುಂಬಾ ಸಹಕಾರ ನೀಡಿದ್ದರಿಂದ ನನಗೆ 625ಅಂಕಗಳನ್ನು

ಪಡೆಯಲು ಸಾಧ್ಯವಾಗಿದೆ. ಯಾರು ಸ್ಪಷ್ಟವಾದ ಗುರಿ ಇರಿಸಿಕೊಳ್ಳುತ್ತಾರೋ ಅವರಿಗೆ ಫಲಿತಾಂಶ ಪಡೆಯಲು ಸಾಧ್ಯವಿದೆ. ಒಂದು ವಾರ ಇರುವಾಗ ಓದಿಕೊಳ್ಳುತ್ತೇನೆ ಎಂದರೆ ಸಾಧ್ಯವಿಲ್ಲ. ಆಯಾಯ ದಿನದ ಪಾಠವನ್ನು ಆಯಾಯ ದಿನವೇ ಸರಿಯಾಗಿ ಓದಿಕೊಳ್ಳಬೇಕು. ಸ್ಪಷ್ಠವಾದ ಗುರಿ ಹಾಗೂ ಸರಿಯಾ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದು ಪ್ರೀತಮ್ ನುಡಿದಿದ್ದಾರೆ.

administrator

Related Articles

You cannot copy content of this page