• May 10, 2026
  • Last Update May 7, 2026 4:06 pm
  • Brahmavara

ಅ.2ರಂದು ವೆಂಕಟರಮಣ ಭಜನಾ ಮಂಡಳಿ ವತಿಯಿಂದ ವಿದುಷಿ ದೀಕ್ಷಾರವರಿಗೆ ಸನ್ಮಾನ

ಅ.2ರಂದು ವೆಂಕಟರಮಣ ಭಜನಾ ಮಂಡಳಿ ವತಿಯಿಂದ ವಿದುಷಿ ದೀಕ್ಷಾರವರಿಗೆ ಸನ್ಮಾನ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಸೆ.3೦: ಅಕ್ಟೋಬರ್ 2ರಂದು ಸಂಜೆಗಂಟೆ 5.೦೦ಕ್ಕೆ ಅಗ್ರಹಾರ ವೆಂಕಟರಮಣ ಭಜನಾ ಮಂಡಳಿ ವತಿಯಿಂದ ಭರತನಾಟ್ಯ ಕಲಾವಿದೆ ವಿದುಷಿ ದೀಕ್ಷಾ ರಾಹುಲ್‌ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಚಾಂತಾರು ಅಗ್ರಹಾರ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವೆಂಕರಮಣ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀ ಅಶೋಕ್ ನಾಯರಿ ನಿಡಂಪಳ್ಳಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಕಾಶಿ ವಿಶ್ವನಾಥ ಹಾಗೂ ಶ್ರೀ ವೆಂಕರಮಣ ದೇವಸ್ಥಾನದ ಮೊಕ್ತೇಸರ ಸೂರಪ್ಪಯ್ಯರಾವ್ ಅಗ್ರಹಾರ, ವೆಂಕಟರಮಣ ದೇವಸ್ಥಾನದ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಚಕರು ಹಾಗೂ ಪುರೋಹಿತಾರದ ಶ್ರೀ ಶ್ರೀಧರ ಹೆಗ್ಡೆ, ದಾವಣಗೆರೆಯ ಹೋಟೆಲ್ ಉದ್ಯಮಿ ಪ್ರಭಾಕರ ಶೆಟ್ಟಿ ಉಪ್ಪರಿಗೆ ಮನೆ ಅಗ್ರಹಾರ, ಉದ್ಯಮಿ ದಯಾನಂದ ಶೆಟ್ಟಿ ಭವ್ಯಶ್ರೀ ಅಗ್ರಹಾರ, ವೆಂಕಟರಮಣ ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ನಾಗವೇಣಿರಾವ್ ಅಗ್ರಹಾರ ಇವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸತತ 216ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆಯನ್ನು ಮಾಡಿದ ವಿದುಷಿ ದೀಕ್ಷಾ ರಾಹುಲ್ ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭ ಪುರುಷ ಹಾಗೂ ಮಹಿಳಾ ಭಜನಾ ಮಂಡಳಿಯ ಸರ್ವ ಪದಾಧಿಕಾರಿಗಳು, ಸದಸ್ಯರು, ಊರವರು ಭಾಗವಹಿಸುವಂತೆ ಅಧ್ಯಕ್ಷ ಶ್ರೀ ಅಶೋಕ್ ನಾಯರಿ ನಿಡಂಪಳ್ಳಿ ಕೋರಿಕೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page