udupimitra.in
  • July 22, 2026
  • Last Update July 22, 2026 6:04 pm
  • Brahmavara

ಎರ್ಮಾಳು: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಗೋಲಿ ಮಾರಾಟ; ಬಂಧನ

ಎರ್ಮಾಳು: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಗೋಲಿ ಮಾರಾಟ; ಬಂಧನ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಪಡುಬಿದ್ರಿ, ಜು.೨೨: ಎರ್ಮಾಳುವಿನ ಪಾನ್ ಸ್ಟಾಲ್ ಒಂದರಲ್ಲಿ ಅಕ್ರಮವಾಗಿ ಮಾದಕ ವಸ್ತು (ಗಾಂಜಾ ಗೋಲಿ) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬುಧವಾರ (ಜು.೨೨) ಬಂಧಿಸಿದ್ದಾರೆ. ಬಂಧಿತನನ್ನು ಅನಿಲ್ ಎಂದು ಗುರುತಿಸಲಾಗಿದೆ.


ಎರ್ಮಾಳುವಿನಲ್ಲಿರುವ ಅನೀಲಾ ಪಾನ್ ಸ್ಟಾಲ್ನಲ್ಲಿ ಯಾವುದೇ ಪರವಾನಗಿ ಇಲ್ಲದೆ, ನಿಷೇಧಿತ ಮಾದಕ ವಸ್ತುವಾದ ಗಾಂಜಾ ಗೋಲಿಗಳನ್ನು ಸಾರ್ವಜನಿಕರಿಗೆ ಹಾಗೂ ಯುವಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡುಬಿದ್ರಿ ಠಾಣೆಯ ಪಿ.ಎಸ್.ಐ. ಶಕ್ತಿವೇಲು ಅವರಿಗೆ ಜುಲೈ ೨೨ರಂದು ಲಭಿಸಿತ್ತು.
ಮಾಹಿತಿಯ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಪಿ.ಎಸ್.ಐ. ಶಕ್ತಿವೇಲು ಮತ್ತು ಸಿಬ್ಬಂದಿ ವರ್ಗದವರು, ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಬೆಳಿಗ್ಗೆ ೧೧:೧೫ರ ಸುಮಾರಿಗೆ ಪಾನ್ ಸ್ಟಾಲ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಗಾಂಜಾ ಹಾಗೂ ನಗದು ವಶ:
ದಾಳಿಯ ವೇಳೆ ಅಂಗಡಿಯಲ್ಲಿದ್ದ ಆರೋಪಿ ಅನಿಲ್‌ನನ್ನು ವಶಕ್ಕೆ ಪಡೆದು ಅಂಗಡಿಯನ್ನು ತಪಾಸಣೆ ನಡೆಸಿದಾಗ, ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಡಗಿಸಿಟ್ಟಿದ್ದ ಅಂದಾಜು ೪,೦೦೦ ರೂ. ಮೌಲ್ಯದ ಒಟ್ಟು ೬೨೫.೮೩ ಗ್ರಾಂ ತೂಕದ ಗಾಂಜಾ ಗೋಲಿಗಳು ಪತ್ತೆಯಾಗಿವೆ. ಅಲ್ಲದೆ, ಗಾಂಜಾ ಗೋಲಿ ಮಾರಾಟ ಮಾಡಿ ಸಂಗ್ರಹಿಸಿದ್ದ ೬೦೦ ರೂ. ನಗದು ಹಣವನ್ನು ಕೂಡ ಪೊಲೀಸರು ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ (ಓಆPS) ಕಾಯ್ದೆ ಕಲಂ ೮(ಛಿ) ಹಾಗೂ ೨೦(b)(II)(ಂ) ಅಡಿಯಲ್ಲಿ (ಅಪರಾಧ ಕ್ರಮಾಂಕ ೮೪/೨೦೨೬) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page