udupimitra.in
  • June 6, 2026
  • Last Update June 6, 2026 2:16 pm
  • Brahmavara

ಜೂ.7ಕ್ಕೆ ಬ್ರಹ್ಮಾವರದಲ್ಲಿ ಗಾಂಜಾ, ಡ್ರಗ್ ವ್ಯಸನ, ಮಾಫಿಯಾದ ವಿರುದ್ಧ ಜನಜಾಗೃತಿ ನಡಿಗೆ ವಾಕಥಾನ್ 

ಜೂ.7ಕ್ಕೆ ಬ್ರಹ್ಮಾವರದಲ್ಲಿ ಗಾಂಜಾ, ಡ್ರಗ್ ವ್ಯಸನ, ಮಾಫಿಯಾದ ವಿರುದ್ಧ ಜನಜಾಗೃತಿ ನಡಿಗೆ ವಾಕಥಾನ್ 

ಬ್ರಹ್ಮಾವರ, ಜೂ.5: ಜನಸೇವಾ ಟ್ರಸ್ಟ್ ಗಿಳಿಯಾರು ಮತ್ತು ಟೀಮ್ ಅಭಿಮತ ಆಶ್ರಯದಲ್ಲಿ, ಸ್ಥಳೀಯ ಐವತ್ತಕ್ಕೂ ಹೆಚ್ಚು ಸಂಘಟನೆಗಳ ಸಹಕಾರದಲ್ಲಿ ಗಾಂಜಾ, ಡ್ರಗ್ ವ್ಯಸನ ಹಾಗೂ ಮಾಫಿಯಾದ ವಿರುದ್ಧ ಜನಜಾಗೃತಿ ನಡಿಗೆ ವಾಕಥಾನ್ ಜೂ.7 ಬೆಳಗ್ಗೆ 8 ಗಂಟೆಗೆ ಬ್ರಹ್ಮಾವರದ ಮದರ್ ಪ್ಯಾಲೇಸ್ ಹೋಟೆಲಿನ ಮುಂಭಾಗದಿಂದ ನಡೆಯಲಿದೆ ಎಂದು

ಜನಸೇವಾ ಟ್ರಸ್ಟ್ ಪ್ರಮುಖರಾದ ಶರತ್ ಶೆಟ್ಟಿ ಕೊತ್ತಾಡಿ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದ.ಕ. ಸಂಸದ ಬ್ರಿಜೇಶ್ ಚೌಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಹಾಗೂ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.


ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಮೋದ್ ಮಂದಾರ್ತಿ, ಬಾರ್ಕೂರು ಶ್ರೀನಿವಾಸ್ ಶೆಟ್ಟಿ, ರವೀಂದ್ರ ಹೇರೂರು, ಡಿ.ಸಿ. ಉಮೇಶ್ ಶೆಟ್ಟಿ, ಕಾರ್ತೇಶ್, ನಿಖಿಲ್ ನಾಯಕ್, ಸುರೇಶ್ ಕುಮಾರ್ ಬ್ರಹ್ಮಾವರ

administrator

Related Articles

Leave a Reply

Your email address will not be published. Required fields are marked *

You cannot copy content of this page