udupimitra.in
  • June 6, 2026
  • Last Update June 6, 2026 2:16 pm
  • Brahmavara

ಬ್ರಹ್ಮಾವರ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳ ವಿತರಣೆ

ಬ್ರಹ್ಮಾವರ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳ ವಿತರಣೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

ಬ್ರಹ್ಮಾವರ, ಜೂನ್ ೫: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜನಔಷಧಿ ಕೇಂದ್ರ ಬ್ರಹ್ಮಾವರ, ಜೈಂಟ್ಸ್ ಗ್ರೂಪ್ ಬ್ರಹ್ಮಾವರ, ಜೈಂಟ್ಸ್ ಕೇರ್ ಫೌಂಡೇಶನ್ ಬ್ರಹ್ಮಾವರ ಹಾಗೂ ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರ ಇವರ ಆಶ್ರಯದಲ್ಲಿ ಸಸಿ ವಿತರಣೆ ಕಾರ್ಯಕ್ರಮವು ಬ್ರಹ್ಮಾವರ ಜನಔಷಧಿ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಿಸಿದ ಬ್ರಹ್ಮಾವರ ತಹಶೀಲ್ದಾರ್ ಅಶೋಕ್ ಎನ್. ಭಟ್ ಮಾತನಾಡಿ, “ಹೆಚ್ಚು ಹೆಚ್ಚು ಮರಗಳನ್ನು ನೆಡುವುದರಿಂದ ನಾಡು ಹಸಿರಾಗುವುದರ ಜೊತೆಗೆ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಅನುಷಾ ಭಟ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದರಿಂದ ಅದರ ಬಳಕೆಯನ್ನು ಕಡಿಮೆ ಮಾಡಬೇಕೆಂದು ಕರೆ ನೀಡಿದರು.

ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಡಾ. ಅಜಿತ್ ಕುಮಾರ್ ಶೆಟ್ಟಿ ಮಾತನಾಡಿ, ಪ್ರಕೃತಿಯ ಬಗ್ಗೆ ಜನರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೈಂಟ್ಸ್ ವೆಲ್‌ಫೇರ್ ಫೌಂಡೇಶನ್ ಮುಂಬೈನ ವಲಯ ನಿರ್ದೇಶಕ ಸುಂದರ ಪೂಜಾರಿ ಮೂಡುಕುಕ್ಕಡೆ, ಜೈಂಟ್ಸ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯ ದಾಸ್, ಕಾರ್ಯದರ್ಶಿ ಮಿಲ್ಟನ್ ಒಲಿವೆರಾ, ಮಾಜಿ ರಾಜ್ಯಾಧ್ಯಕ್ಷ ಮಧುಸೂದನ ಹೆರೂರು, ಸದಸ್ಯರಾದ ಶ್ರೀನಾಥ್ ಕೋಟ, ಪ್ರತಿಭಾ ಸುರೇಶ್ ಪೂಜಾರಿ, ಶ್ರೀಮತಿ ಡೋರಿಸ್, ಸುಧಾಕರ ನಾಯಕ್, ದಿನೇಶ್, ರೋನಾಲ್ಡ್ ಡಯಾಸ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೇತ್ರಿಯ ಕ್ಲಾಸಿಕ್ ನರ್ಸರಿಯ ಮಾಲೀಕ ವಿಠಲ್ ಪಾಟೀಲ್ ಪೇತ್ರಿ ಅವರನ್ನು ಸನ್ಮಾನಿಸಲಾಯಿತು. ಮಧುಸೂದನ ಹೆರೂರು ಸ್ವಾಗತಿಸಿ, ವಿವೇಕಾನಂದ ಕಾಮತ್ ವಂದಿಸಿದರು

administrator

Related Articles

Leave a Reply

Your email address will not be published. Required fields are marked *

You cannot copy content of this page