udupimitra.in
  • June 24, 2026
  • Last Update June 23, 2026 5:23 pm
  • Brahmavara

ತಿಮರೋಡಿ ಮಹೇಶ್ ಶೆಟ್ಟಿ ವಿರುದ್ಧ ಬ್ರಹ್ಮಾವರದಲ್ಲಿ ಪ್ರಕರಣ ದಾಖಲು

ತಿಮರೋಡಿ ಮಹೇಶ್ ಶೆಟ್ಟಿ ವಿರುದ್ಧ ಬ್ರಹ್ಮಾವರದಲ್ಲಿ ಪ್ರಕರಣ ದಾಖಲು

ಉಡುಪಿ ಮಿತ್ರ ಪತ್ರಿಕೆ ಸುದ್ಧಿ:

ಬ್ರಹ್ಮಾವರ, ಆ. ೧೯: ಬಿಜೆಪಿ ಹಿರಿಯ ಮುಖಂಡ ಬಿ.ಎಲ್.ಸಂತೋಷ್ ವಿರುದ್ದ ಮಹೇಶ್ ಶೆಟ್ಟಿ ತಿಮರೋಡಿ ಮಾನಹಾನಿಕರ ಹೇಳಿಕೆ ನೀಡಿದುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬ್ರಹ್ಮಾವರ ವೃತ್ತನಿರೀಕ್ಷಕರಿಗೆ ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ್ ನೀಡಿದ ದೂರಿನನ್ವಯ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
‘ಮಹೇಶ ಶೆಟ್ಟಿ ತಿಮರೋಡಿ ಬಿ.ಎಲ್. ಸಂತೋಷ್‌ರವರನ್ನು ಅವಮಾನಿಸುವ ಉದ್ದೇಶದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳ ಬುರುಡೆ ಪ್ರಕರಣ ದಿಕ್ಕು ತಪ್ಪಿಸಿ ದೇವಸ್ಥಾನ ಅಡ್ಡ ತಂದಿದ್ದೇ ಪಾಪಿ ಬಿ.ಎಲ್.ಸಂತೋಷ್. ಸೌಜನ್ಯಳ ಅತ್ಯಾಚಾರವನ್ನು ಬಚಾವ್ ಮಾಡುವುದಕ್ಕೋಸ್ಕರ ರಾಜಕೀಯದ ಒಳಗೆ ತಂದು ನಾಟಕ ಮಾಡಿದಂತಹ ಪಾಪಿ ಈ ಬಿ ಎಲ್ ಸಂತೋಷ್. ಡೀಲ್ ಮಾಸ್ಟ್ರು, ಕೆಟ್ಟ ಕುಲ ನೀನು, ನಿನ್ನಿಂದ ಖSS ಗೆ ಮುಖಭಂಗ ಆಗುತ್ತದೆ. ನಿನ್ನತ್ರ ಹಿಂದುತ್ವದ ರಕ್ತ ಇದ್ದರೆ ನಿನಗೆ ಬೆಂಗಳೂರಿನಲ್ಲಿ ಪುತ್ತೂರಿನಲ್ಲಿ ಹೆಣ್ಣು ಮಕ್ಕಳು ಬೇಕು, ನಿನಗೆ ಹಿಂದುತ್ಯದ ಪಾಠವನ್ನು ನಾವು ಕಲಿಸುತ್ತೇವೆ. ಅಧರ್ಮದ ಕೆಲಸಕ್ಕೆ ಕೈ ಹಾಕಿದರೆ ಇವರ ಯೋಗ್ಯತೆಗೆ ಬೆಂಕಿ ಪಾಲಾಗಿದೆ. ಧರ್ಮಸ್ಥಳ ಇಂದು ವೀರೇಂದ್ರ ಹೆಗ್ಗಡೆ ಪಾಲಾಗಿದೆ. ಯಾರು ಮಾಡಿದ್ದು ಇವನೇ ಮಾಡಿದ್ದು, ಮಾನಕೆಟ್ಟವ, ಯೋಗ್ಯತೆ ಇಲ್ಲದವ, ನಾಲಾಯಕ್ ಎಂಬಿತ್ಯಾದಿಯಾಗಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಿ.ಎಲ್.ಸಂತೋಷ್ ಬಿಜೆಪಿ ಪಕ್ಷದಲ್ಲಿ ಉನ್ನತ ಪದಾಧಿಕಾರಿಯಾಗಿದ್ದು ಅವರ ತೇಜೋವಧೆ ಮಾಡಿ ಹಿಂಧೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ ದ್ವೇಷ ಭಾವನೆಯನ್ನು ಉಂಟು ಮಾಡುವ ರೀತಿಯಲ್ಲಿ ಸುಳ್ಳು ವದಂತಿಯ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದೆ. ದೂರಿನ ಆಧಾರದಲ್ಲಿ ಎಫ್.ಐ.ಆರ್ ದಾಖಲಾಗಿದೆ. ದೂರು ನೀಡುವ ಸಂದರ್ಭ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಟ್ಠಲ ಪೂಜಾರಿ, ನ್ಯಾಯವಾದಿ ಶ್ಯಾಮಸುಂದರ್ ನಾಯರಿ, ಸುರೇಶ್ ಕುಂದರ್ ಮೊದಲಾದವರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page