• May 10, 2026
  • Last Update May 7, 2026 4:06 pm
  • Brahmavara

ವೆಂಕಟರಮಣ ಭಜನಾ ಮಂಡಳಿ ಭಜನಾ ಮಂಗಲೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ

ವೆಂಕಟರಮಣ ಭಜನಾ ಮಂಡಳಿ ಭಜನಾ ಮಂಗಲೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ

ಬ್ರಹ್ಮಾವರ, ಫೆ.1: ಇಲ್ಲಿನ ಚಾಂತಾರು ಅಗ್ರಹಾರ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಭಜನಾ ಮಂಗಲೋತ್ಸವ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಆಹ್ವಾನ ಪತ್ರಿಕೆಯನ್ನು ಅಗ್ರಹಾರ ಶ್ರೀ ದಯಾನಂದ ಶೆಟ್ಟಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಕಾಶಿ ವಿಶ್ವನಾಥ ಮತ್ತು ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ಹೆಗ್ಡೆ, ಶ್ರೀ ವೆಂಕಟರಮಣ ಭಜನಾ ಮಂಡಳಿ ಅಧ್ಯಕ್ಷ ಲವ ಪೂಜಾರಿ, ಮಂಡಳಿಯ ಸದಸ್ಯರಾದ ಮಂಜುನಾಥ ನಾಯರಿ, ನಾಗರಾಜ ದೇವಾಡಿಗ, ಗಣೇಶ್ ಆಚಾರ್ಯ, ಮಹೇಶ್‌ಮೊಯ್ಲಿ, ವಿಜಯ ಪೂಜಾರಿ, ಚಂದ್ರಶೇಖರ ಶೆಟ್ಟಿ, ಮಧುಕರ ಹೊಸ್ಮನೆ, ಮಾಧವ ಆಚಾರ್ಯ, ಶ್ರೀಮತಿ ಲಲಿತಾ ಎಮ್. ಶೆಟ್ಟಿ, ಶ್ರೀಮತಿ ನಾಗವೇಣಿ, ಶ್ರೀಮತಿ ಪ್ರತಿಮಾ ಶೆಟ್ಟಿ, ಶ್ರೀಮತಿ ತಾರಾ, ಶ್ರೀಮತಿ ಸುಜಾತ ದೇವಾಡಿಗ, ಶ್ರೀಮತಿ ಸುಮತಿ ಮಂಜುನಾಥ ನಾಯರಿ, ಶ್ರೀಮತಿ ಮಲ್ಲಿಕಾ ವಿಜಯ ನಾಯರಿ, ಶ್ರೀಮತಿ ಜಯಲಕ್ಷ್ಮೀ ಅಣ್ಣಪ್ಪ ನಾಯರಿ, ಶ್ರೀಮತಿ ನಿರ್ಮಲ ಪ್ರಭಾಕರ ಆಚಾರ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅಶೋಕ್ ನಾಯರಿ ನಿಡಂಪಳ್ಳಿ ಸ್ವಾಗತಿಸಿ ವಂದಿಸಿದರು.
ಫೆ.8 ಶನಿವಾರದವರೆಗೆ ಪ್ರತಿ ದಿನ ರಾತ್ರಿ 8.00ರಿಂದ 10.00ರವರೆಗೆ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಫೆ.7 ಶುಕ್ರವಾರದಂದು ಸಂಜೆ 6.30ರಿಂದ ವಿಶೇಷ ಕಾರ್ಯಕ್ರಮವಾಗಿ ಶ್ರೀ ದೇವರ ಪುರ ಸಂಚಾರ, ನಗರ ಭಜನೆ, ಪಲ್ಲಕ್ಕಿ ಸೇವೆ, ಫೆ.8ರಂದು ಶನಿವಾರ ಸಂಜೆ 6.00ರಿಂದ ಭಜನಾ ಮಂಗಲೋತ್ಸವ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

  • ವರದಿ :ಚಿತ್ತೂರು ಪ್ರಭಾಕರ ಆಚಾರ್ಯ
administrator

Related Articles

Leave a Reply

Your email address will not be published. Required fields are marked *

You cannot copy content of this page