• April 18, 2026
  • Last Update April 17, 2026 4:21 pm
  • Brahmavara

ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಈಜು ತರಬೇತಿ ಶಿಬಿರ

ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಈಜು ತರಬೇತಿ ಶಿಬಿರ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಎ.೧೧: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಹೆರಂಜೆ ಕ್ಯಾಂಪಸ್‌ನ ಬಕಾಡಿ ಸಲ್ವದೊರ್ ನೊರೊನ್ಹಾ ಸುಸಜ್ಜಿತ ಈಜು ಕೊಳದಲ್ಲಿ ಬೇಸಗೆ ಈಜು ತರಬೇತಿ ಶಿಬಿರ ನಡೆಯುತ್ತಿದೆ.


ಮೊದಲ ಬ್ಯಾಚ್ ಎ.1ರಂದು ಪ್ರಾರಂಭಗೊಂಡಿದ್ದು ಎ.೨೦ರ ವರೆಗೆ ನಡೆಯಲಿದೆ. ಎರಡನೇ ಬ್ಯಾಚ್ 21ರಿಂದ ಮೇ 10, ಮೂರನೇ ಬ್ಯಾಚ್ ಮೇ 11ರಿಂದ ಮೇ 31ರ ವರೆಗೆ ಜರಗಲಿದೆ. ಮೊದಲ ಬ್ಯಾಚ್‌ನಲ್ಲಿ 65 ವಿದ್ಯಾರ್ಥಿಗಳಿದ್ದು, ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ಮೇ 1ರಿಂದ ಬೇಸಗೆ ಕ್ರೀಡಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಈಜು ತರಬೇತಿ ನೀಡುವವರು ಹಾಗೂ ಬೇಸಗೆ ಕ್ರೀಡಾ ತರಬೇತಿ ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವವರು ಸ್ಫೋರ್ಟ್ಸ್ ಕ್ಲಬ್ ಸಂಪರ್ಕಿಸುವಂತೆ ಕ್ಲಬ್ ಅಧ್ಯಕ್ಷ ಬಿಜು ನಾಯರ್ ಹಾಗೂ ಗೌರವಾಧ್ಯಕ್ಷ ಚಂದ್ರಶೇಖರ ಹೆಗ್ಡೆ ಕೋರಿಕೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page