udupimitra.in
  • July 31, 2026
  • Last Update July 31, 2026 5:20 am
  • Brahmavara

ಮಂದಾರ್ತಿ : ಸ್ನಾನಗೃಹ ಹಾಗೂ ಶೌಚಾಲಯ ಹಸ್ತಾಂತರ

ಮಂದಾರ್ತಿ : ಸ್ನಾನಗೃಹ ಹಾಗೂ ಶೌಚಾಲಯ ಹಸ್ತಾಂತರ

ಉಡುಪಿ ಮಿತ್ರ ಸುದ್ಧಿ :
ಬ್ರಹ್ಮಾವರ, ಜೂ.5: ಮಂದಾರ್ತಿ ಹೊಳೆಬಾಗಿಲು ಇಂದಿರಾ ಹಾಗೂ ಅವರ ಪುತ್ರಿ ೯ನೇ ತರಗತಿಯ ವಿದ್ಯಾರ್ಥಿನಿ ವಾಸಿಸುತ್ತಿದ್ದ ಮನೆ ಶಿಥಿಲಾವಸ್ಥೆಯಲ್ಲಿದ್ದು ಶೌಚಾಲಯ ಹಾಗೂ ಸ್ನಾನಗೃಹವಿಲ್ಲದ್ದನ್ನು ಮನಗಂಡು ತಕ್ಷಣ ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸಿಕೊಡಲು ನಿರ್ಧರಿಸಿ ಸಮಾನ ಮನಸ್ಕ ಸ್ನೇಹಿತರು ಹಾಗೂ ಮಂದಾರ್ತಿ ವಿಶ್ವಕರ್ಮ ಯುವ ಸಂಘಟನೆ ಜೊತೆಗೂಡಿ ನೂತನ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಿಸಿ ಜೂ.14ರಂದು ಹಸ್ತಾಂತರಿಸಲಾಯಿತು.


ಈ ಸಂದರ್ಭ ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಗುರುಪ್ರಸಾದ್ ನೀರ‍್ಜೆಡ್ಡು, ಹೆಗ್ಗುಂಜೆ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಲೋಕೇಶ್, ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಬಾರಕೂರು ವೀಣಾ ಜ್ಯುವೆಲ್ಲರ‍್ಸ್ ಮಾಲಕ ಉಮೇಶ್ ಆಚಾರ್ಯ, ಮಂದಾರ್ತಿ ವಿಶ್ವಕರ್ಮ ಯುವ ಸಂಘಟನೆಯ ಅಧ್ಯಕ್ಷ ಸತೀಶ್ ಆಚಾರ್ ನಡೂರು, ನಿಕಟಪೂರ್ವ ಅಧ್ಯಕ್ಷ ವಿಜಯ ಆಚಾರ್ಯ ಮಂದಾರ್ತಿ, ಗೌರವಾಧ್ಯಕ್ಷ ಮಹಾಬಲ ಆಚಾರ್ಯ, ಕೊಕ್ಕರ್ಣೆ ವಿಶ್ವಕರ್ಮ ಯುವ ಸಂಘಟನೆ ಉಪಾಧ್ಯಕ್ಷ ಮಹೇಶ್ ಆಚಾರ್ಯ ಚಗ್ರಿಬೆಟ್ಟು, ಮಂದಾರ್ತಿ ಯುವ ಸಂಘಟನೆಯ ನಾರಾಯಣ ಆಚಾರ್ಯ ಮಂದಾರ್ತಿ, ಮಾಧವ ಆಚಾರ್ಯ ಮಂದಾರ್ತಿ, ಸುರೇಶ್ ಆಚಾರ್ಯ ಶಿರೂರು, ರುದ್ರ ಆಚಾರ್ಯ ಮಂದಾರ್ತಿ, ಚಂದ್ರ ಆಚಾರ್ಯ ಎಂ.ಆರ್. ಮಂದಾರ್ತಿ, ಕೃಷ್ಣಯ್ಯ ಆಚಾರ್ಯ ಮಂದಾರ್ತಿ, ರಮೇಶ್ ಆಚಾರ್ಯ ಮಂದಾರ್ತಿ ಹಾಗೂ ಸ್ಥಳಿಯರಾದ ಉಪೇಂದ್ರ ಆಚಾರ್ಯ, ವಿಶ್ವನಾಥ ಆಚಾರ್ಯ, ನಾಗರಾಜ ಆಚಾರ್ಯ ಹಾಗೂ ಯುವ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ ವಿಜಯ ಆಚಾರ್ಯ ಮಂದಾರ್ತಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page