ಉಡುಪಿಮಿತ್ರ ಪತ್ರಿಕೆ ಸುದ್ಧಿ :
ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಮರವಂತೆ ಇಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೇಸಗೆ ಶಿಬಿರ ಉದ್ಘಾಟನಾ ಸಮಾರಂಭ ಮೇ ೩ರಂದು ನಡೆಯಿತು.
ಶಿಬಿರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಭಾಸ್ಕರ ಮಯ್ಯ ವಹಿಸಿದ್ದು ಅವರು ಮಾತನಾಡಿ ಹಿಂದಿನ ವರ್ಷವೂ ಮಕ್ಕಳಿಗೆ ಪರಿಣಾಮಕಾರಿಯಾಗಿ ಆಸರೆ ಟ್ರಸ್ಟ್‌ನವರು ಶಿಬಿರ ನಡೆಸಿರುವುದರಿಂದ ಈ ವರ್ಷ ಮಕ್ಕಳ ಸಂಖ್ಯೆ ದುಪ್ಪಟ್ಟಾಗಿದೆ. ಪೋಷಕರು ಮುಂದಿನ ದಿನಗಳಲ್ಲಿ ಮತ್ತಷ್ಟು ಮಕ್ಕಳನ್ನು ಸೇರಿಸುವುದರ ಮೂಲಕ ಶಿಬಿರದ ಲಾಭವನ್ನು ಪಡೆಯಬೇಕೆಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಮಿತ್ರ ಪತ್ರಿಕೆಯ ಸಂಪಾದಕ ಚಿತ್ತೂರು ಪ್ರಭಾಕರ ಆಚಾರ್ಯ ಮಾತನಾಡಿ ಕಳೆದ ೧೦ ವರ್ಷಗಳ ಹಿಂದೆ ಒಂದಷ್ಟು ಸ್ನೇಹಿತರು ಸೇರಿಕೊಂಡು ಆಸರೆ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದ್ದರು. ಅವರ ಚಟುವಟಿಕೆಯನ್ನು ಗಮನಿಸುತ್ತಾ ಬಂದಿದ್ದು ಆ ಎಲ್ಲಾ ಸ್ನೇಹಿತರು ಸದ್ದಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಸೇವಾ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದ್ದು ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದರು
ಡಾ.ರೂಪಶ್ರೀ ಮರವಂತೆ, ಆಸರೆ ಟ್ರಸ್ಟಿನ ಟ್ರಸ್ಟಿ ಉದ್ಯಮಿ ಸತೀಶ್ ಪೂಜಾರಿ ಗೋವಾ, ಪ್ರೌಢಾಲೆಯ ಎಸ್.ಡಿಎಂ.ಸಿ.ಅಧ್ಯಕ್ಷೆ ಶ್ರೀಮತಿ ಸುಜಾತ ಶುಭ ಹಾರೈಸಿದರು.
ಶಿಬಿರಾಧಿಕಾರಿ ರಮೇಶ್ ನಾಯಕ್ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಆಸರೆ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಸಂತೋಷ ಮೊಗವೀರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪ್ರಣಮ್ಯ ಪಿ.ಆಚಾರ್ಯ, ಜಾಹ್ನವಿ ಶೆಟ್ಟಿ, ಚಿಂತನ ಆಚಾರ್ಯ ಕಳೆದ ವರ್ಷದ ಅನುಭವ ವ್ಯಕ್ತಪಡಿಸಿದರು. ಟ್ರಸ್ಟಿ ಕರುಣಾಕರ ಆಚಾರ್ಯ ವಂದಿಸಿದರು. ಟ್ರಸ್ಟಿ ರಾಜೇಶ್ ಆಚಾರ್ಯ ನಿರೂಪಿಸಿದರು.




