• May 10, 2026
  • Last Update May 7, 2026 4:06 pm
  • Brahmavara

ವೆಂಕಟರಮಣ ಭಜನಾ ಮಂಡಳಿ ಆಮಂತ್ರಣ ಬಿಡುಗಡೆ

ವೆಂಕಟರಮಣ ಭಜನಾ ಮಂಡಳಿ ಆಮಂತ್ರಣ ಬಿಡುಗಡೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜ.೨೪ :
ಭಜನೆ ಎಲ್ಲರಿಗೂ ನೆಮ್ಮದಿ ನೀಡುವಂತಹದ್ದು. ಹಿಂದೆ ಮನೆ ಮನೆಯಲ್ಲೂ ಪ್ರತೀ ದಿನ ಸಂಜೆ ಭಜನೆ ನಡೆಯುತ್ತಿತ್ತು. ಇಂದಿನ ಯುವ ಪೀಳಿಗೆಯೂ ಈ ರೀತಿಯ ಭಜನೆಯಲ್ಲಿ ತೊಡಗಿಸಿಕೊಳ್ಳು ವಂತಾಗಬೇಕು. ಹಾಗಾದಾಗ ಯುವ ಜನತೆಗೂ ದೇವರ ಮೇಲೆ ಶ್ರದ್ಧೆ ಭಕ್ತಿ ಮೂಡಲಿದೆ ಎಂದು ಬ್ರಹ್ಮಾವರ ಮೇಧಿನಿ ಕಾಂಪ್ಲೆಕ್ಸ್ ಮಾಲಕ, ಉದ್ಯಮಿ ಜಯರಾಮ ಶೆಟ್ಟಿ ನುಡಿದರು. ಅವರು ಚಾಂತಾರು ಅಗ್ರಹಾರ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಮಂಗಲೋತ್ಸವ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ನಾಯರಿ ವಹಿಸಿದ್ದು ಅವರು ಮಾತನಾಡಿ ಮಂಗಲೋತ್ಸವದ ಯಶಸ್ಸಿಗೆ ಎಲ್ಲರೂ ಬೆಂಬಲ ನೀಡುವಂತೆ ಕೋರಿಕೊಂಡರು.


ವೇದಿಕೆಯಲ್ಲಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಸೂರಪ್ಪಯ್ಯರಾವ್, ವೆಂಕಟರಮಣ ಭಜನಾ ಮಂಡಳಿಯ ಖಜಾಂಚಿ ಮಂಜುನಾಥ ನಾಯರಿ, ಕಾರ್ಯದರ್ಶಿ ಧನುಶ್ ಶೆಟ್ಟಿ, ಶ್ರೀಮತಿ ಲಲಿತಾ ಜಯರಾಮ ಶೆಟ್ಟಿ, ವೆಂಕಟರಮಣ ಮಹಿಳಾ ಭಜನಾ ಮಂಡಳಿ ಸಂಚಾಲಕಿ ಶ್ರೀಮತಿ ನಾಗವೇಣಿರಾವ್, ಹಾಲುತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಲಲಿತಾ ಎಂ.ಶೆಟ್ಟಿ, ಅಯ್ಯಪ್ಪಸ್ವಾಮಿ ಭಕ್ತವೃಂದದ ಗುರುಸ್ವಾಮಿ ವಿಘ್ನೇಶ್ ಪೈ ಉಪಸ್ಥಿತಿರಿದ್ದರು.
ಮಹಿಳಾ ಭಜನಾ ಮಂಡಳಿ ಸzಸ್ಯೆ ಶ್ರೀಮತಿ ವೀಣಾ ರಾಜೇಶ್ ವಂದಿಸಿದ್ದು ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page