• March 26, 2026
  • Last Update March 24, 2026 3:28 pm
  • Brahmavara

ಚಿತ್ತೂರು : ಚಿತ್ತೂರು ಕೃಷ್ಣಗಿರಿ ರಿಕ್ಷಾ ನಿಲ್ದಾಣ ಉದ್ಘಾಟನೆ

ಚಿತ್ತೂರು : ಚಿತ್ತೂರು ಕೃಷ್ಣಗಿರಿ ರಿಕ್ಷಾ ನಿಲ್ದಾಣ ಉದ್ಘಾಟನೆ

ಉಡುಪಿಮಿತ್ರ ಪತ್ರಿಕೆ ಸುದ್ದಿ :
ಚಿತ್ತೂರು, ಡಿ.೬ : ಮನುಷ್ಯ ಆರ್ಥಿಕವಾಗಿ ಶಕ್ತನಾದ ಸಂದರ್ಭ ಒಂದಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದು ವಂಡ್ಸೆ ಹರವರಿಯ ಜ್ಯೋತಿಷ್ಯರು ಹಾಗೂ ಪುರೋಹಿತರಾದ ಶ್ರೀ ದಿನಕರ ಉಡುಪ ಅವರು ನುಡಿದರು.
ಅವರು ಚಿತ್ತೂರಿನ ಆಲೂರು ಕ್ರಾಸ್ ಬಳಿ ಕೃಷ್ಣಿ ಮತ್ತು ಗಿರಿಯ ಪೂಜಾರಿಯವರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಅಳಿಯ ನಿರ್ಮಿಸಿಕೊಟ್ಟ ‘ಕೃಷ್ಣಗಿರಿ ರಿಕ್ಷಾ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಆಲೂರು -ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಇದರ ವ್ಯವಸ್ಥಾಪಕ ಶ್ರೀ ಸಂಜೀವ ಪೂಜಾರಿ ಹಾಗೂ ಶ್ರೀಮತಿ ಸುಮಿತ್ರಾ ಸಂಜೀವ ಪೂಜಾರಿ ದಂಪತಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ. ಅತುಲ್‌ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಆಲೂರು ರಘುರಾಮ ದೇವಾಡಿಗ, ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹರ್ಕೂರು ಮಂಜಯ್ಯ ಶೆಟ್ಟಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ನಾಗರಾಜ ಮಂಜ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಶೆಟ್ಟಿ ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಸುರೇಶ್ ಪೂಜಾರಿ ಭಾಗವಹಿಸಿದ್ದು ಶುಭ ಹಾರೈಸಿ ಮಾತನಾಡಿದರು.
ಸಭೆಯಲ್ಲಿ ನಿವೃತ್ತ ಲೈನ್‌ಮ್ಯಾನ್ ಉದಯ ಪೂಜಾರಿಯವರನ್ನು ಸನ್ಮಾನಿಸಲಾಯಿತು. ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ರಿಕ್ಷಾ ನಿಲ್ದಾಣ ನಿರ್ಮಿಸಿ ಕೊಟ್ಟ ಕೃಷ್ಣಿ ಹಾಗೂ ಗಿರಿಯ ಪೂಜಾರಿ ಕುಟುಂಬಸ್ಥರ ಪರವಾಗಿ ಬಾಲಕೃಷ್ಣ ಪೂಜಾರಿಯವರನ್ನು ಸನ್ಮಾನಿಸಿದರು.
ವನದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಜಿ. ಪೂಜಾರಿ ಸ್ವಾಗತಿಸಿದರು. ಉದಯ ಜಿ.ಪೂಜಾರಿ ವಂದಿಸಿದ್ದು ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ವಂದಿಸಿದರು.
ಸಭೆಯಲ್ಲಿ ಕೃಷ್ಣಿ ಹಾಗೂ ಗಿರಿಯ ಪೂಜಾರಿ ಕುಟುಂಬದ ಚಂದ್ರ ಪೂಜಾರಿ, ಎಸ್. ಸಿ.ಡಿಸಿಸಿ ಬ್ಯಾಂಕ್‌ನ ಕುಂದಾಪುರ ಶಾಖಾ ಮ್ಯಾನೇಜರ್ ಹಿರಿಯಣ್ಣ ಪೂಜಾರಿ ಹಾಗೂ ಸಂತೋಷ ಪೂಜಾರಿ ಹಾಗೂ ಬಂಧುಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು.

udupimitra Pratrike

udupimitra Patrike

udupimitra patrike

administrator

Related Articles

Leave a Reply

Your email address will not be published. Required fields are marked *

You cannot copy content of this page