• March 26, 2026
  • Last Update March 24, 2026 3:28 pm
  • Brahmavara

ಅಧ್ಯಕ್ಷರಾಗಿ ಬಿರ್ತಿ ರಾಜೇಶ್‌ಶೆಟ್ಟಿ, ಉಪಾಧ್ಯಕ್ಷರಾಗಿ ಗಣೇಶ್ ಪ್ರಸಾದ್ ಶೆಟ್ಟಿ

ಅಧ್ಯಕ್ಷರಾಗಿ ಬಿರ್ತಿ ರಾಜೇಶ್‌ಶೆಟ್ಟಿ, ಉಪಾಧ್ಯಕ್ಷರಾಗಿ ಗಣೇಶ್ ಪ್ರಸಾದ್ ಶೆಟ್ಟಿ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜ.೧೬: ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾಗಿ ಬಿರ್ತಿ ರಾಜೇಶ್ ಶೆಟ್ಟಿ ಉಪಾಧ್ಯಕ್ಷರಾಗಿ ಗಣೇಶ್ ಪ್ರಸಾದ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.
ಜ.೧೬ರಂದು ಸಹಕಾರಿ ಸಂಘದ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಬಿರ್ತಿ ರಾಜೇಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಣೇಶ್ ಪ್ರಸಾದ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ನಿರ್ದೇಶಕರಾದ ಜ್ಞಾನ ವಸಂತ ಶೆಟ್ಟಿ, ಕಮಲಾಕ್ಷ ಹೆಬ್ಬಾರ್‌ಚೇರ್ಕಾಡಿ, ಉಲ್ಲಾಸ್ ನಾಯಕ್, ಎಸ್.ದಯಾನಂದ ನಾಯಕ್, ರಾಜೇಶ ಮರಕಾಲ, ಶ್ರೀನಿವಾಸ ಶೆಟ್ಟಿ, ಎಸ್.ನಾರಾಯಣ, ಸಂತೋಷ್ ಜತ್ತನ್, ನಿತ್ಯಾನಂದ ನಾಯ್ಕ್, ನಳಿನಿ ಪ್ರದೀಪ್‌ರಾವ್, ನಾಗವೇಣಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಜ್ಞಾನ ವಸಂತ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ನಳಿನಿ ಪ್ರದೀಪ್‌ರಾವ್, ಮಾಜಿ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಸೋಮಯಾಜಿ ಅಭಿನಂದಿಸಿ ಮಾತನಾಡಿದರು. ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಕೆ.ಆರ್.ರೋಹಿತ್ ನಡೆಸಿಕೊಟ್ಟಿದ್ದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಸಂಘದ ಉನ್ನತಿ ಸಭಾಂಗಣದಲ್ಲಿ ನಂತರ ಅಭಿನಂದನಾ ಸಭೆ ನಡೆದಿದ್ದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್, ಭಾಸ್ಕರ ರೈ ಬ್ರಹ್ಮಾವರ, ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ನಿಶಾನ್ ಬಿ.ರೈ, ತಾಲೂಕು ಪಂಚಾಯತ್‌ಮಾಜಿ ಸದಸ್ಯ ಉಮೇಶ್ ನಾಯ್ಕ್ ಚೇರ್ಕಾಡಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಹಂದಾಡಿ ಗ್ರಾಮ ಅಧ್ಯಕ್ಷೆ ಶೋಭಾ ಪೂಜಾರಿ, ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗುರುರಾಜ್ ರಾವ್, ಚೇರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಚೇರ್ಕಾಡಿ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಕರ್ಜೆ, ಹಂದಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯ ಪೂಜಾರಿ, ನೀಲಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ನೀಲಾವರ, ಬ್ರಹ್ಮಾವರ ರೋಟರಿ ಅಧ್ಯಕ್ಷ ಶ್ರೀಧರ ಶೆಟ್ಟಿ, ರಘುಪತಿ ಬ್ರಹ್ಮಾವರ, ವಾರಂಬಳ್ಳಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ದೇವಾನಂದ ಬ್ರಹ್ಮಾವಾರ, ಗ್ರಾಮ ಪಂಚಾಯತ್ ಸದಸ್ಯ ನಿರಂಜನ್ ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page