• April 19, 2026
  • Last Update April 18, 2026 5:29 pm
  • Brahmavara

ಪರಾರಿ ಬೊಬ್ಬರ್ಯ ದೈವಸ್ಥಾನ ಪುನರ್ ಪ್ರತಿಷ್ಠೆ, ಹಸಿರು ಹೊರೆಕಾಣಿಕೆ

ಪರಾರಿ ಬೊಬ್ಬರ್ಯ ದೈವಸ್ಥಾನ ಪುನರ್ ಪ್ರತಿಷ್ಠೆ, ಹಸಿರು ಹೊರೆಕಾಣಿಕೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಎ.18.: ಪರಾರಿ ಬೊಬ್ಬರ್ಯ ದೈವಸ್ಥಾನ ಜೀಣೋದ್ಧಾರಗೊಂಡು ಎ.19 ಹಾಗೂ ಎ.20ರಂದು ಪುನರ್ ಪ್ರತಿ಼ಷ್ಠಾ ಕಾರ್ಯಕ್ರಮಗಳು ನಡೆಯಲಿದ್ದು ಇದರ ಅಂಗವಾಗಿ ಎ.೧೮ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ ಕೊಳಲಗಿರಿ ಜಂಕ್ಷನ್‌ನಿಂದ ಆರಂಭಗೊಂಡಿತು.


ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ಅತಿಥಿಗಳಾಗಿ ಪಂಚಾಯತ್‌ರಾಜ್ ಇಂಜೀನಿಯರ್ ಉಪವಿಭಾಗದ ಸಹಾಯ ಕಾರ್ಯ ನಿರ್ವಾಹಕ ಇಂಜೀನಿಯರ್ ಶ್ರೀಕಾಂತ್ ನಾಯಕ್, ಉಪ್ಪೂರು ಗ್ರಾಮದ ಗ್ರಾಮ ಲೆಕ್ಕಿಗ ಪ್ರಮೋದ್ ಕುಮಾರ್, ಉಡುಪಿ ಉಜ್ವಲ್ ಗ್ರೂಪ್ಸ್‌ನ ಅಜಯ್ ಪಿ.ಶೆಟ್ಟಿ, ಉಪ್ಪೂರು ಮಹತೋಭಾರ ಸಿದ್ದಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಶಾಂತ್ ಸುವರ್ಣ ಮಾಯಾಡಿ, ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಶ್ ಕೋಟ್ಯಾನ್, ಮಣಿಪಾಲ್ ಯುನಿರ್ವಸಿಟಿಯ ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು ಭಾಗವಹಿಸಿದ್ದರು.


ಈ ಸಂದರ್ಭ ಪರಾರಿ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುರುರಾಜ್ ಭಟ್ ಕೊಳಲಗಿರಿ, ಗೌರವಾಧ್ಯಕ್ಷ ಕೀಳಿಂಜೆ ಸತೀಷ್ ಪೂಜಾರಿ, ಪ್ರಧಾನ ಅರ್ಚಕ ಲಕ್ಷ್ಮೀಶ ಭಟ್ ಪರಾರಿ, ತುಳುನಾಡು ರಕ್ಷಣಾವೇದಿಕೆ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ, ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಆತ್ಮರಾಮ ಪಾಟೀಲ್, ಉಪಾಧ್ಯಕ್ಷ ಜ್ಯೋತಿ ಪಾಟೀಲ್, ಕೋಶಾಧಿಕಾರಿ ಸತೀಶ್ ನಾಯ್ಕ್, ಕಾರ್ಯದರ್ಶಿ ಕೃಷ್ಣರಾಜ್ ಭಟ್ ಹಾಗೂ ಸಮಿತಿಯ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕ ಹಾವಂಜೆ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page