ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಎಪ್ರಿಲ್ ೨೦:
ಪರಾರಿ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರಕ್ಕೆ ದಾನಿಗಳಿಂದ ಹಣ ಸಂಗ್ರಹಿಸಲು ಸಾಕಷ್ಟು ಹೋರಾಟ ನಡೆಸಿರುವ ಸತೀಶ್ ಪೂಜಾರಿ ಕೀಳಂಜೆ ಇವರನ್ನು ಎ.20ರಂದು ರಾತ್ರಿ ಪರಾರಿ ಬೊಬ್ಬರ್ಯ ದೈವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ವಿಶೇಷವಾಗಿ ಗೌರವಿಸಲಾಯಿತು.
ಅಧ್ಯಕ್ಷರಾದ ಗುರುರಾಜ್ ಭಟ್ ಮಾತನಾಡಿ ಸತೀಶ್ ಪೂಜಾರಿಯವರು ಪರಾರಿ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರದಲ್ಲಿ ಸಹೋದರನಂತೆ ನನ್ನ ಜೊತೆ ನಿಂತು ದೇಣಿಗೆ ಸಂಗ್ರಹಿಸುವಲ್ಲಿ ಸಾಕಷ್ಟು ಹೋರಾಟ ನೀಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ಸತೀಶ್ ಪೂಜಾರಿ ಮಾತನಾಡಿ ಪರಾರಿ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ಸಂಗ್ರಹಿಸಲು ಹೋದಾಗ ಎಲ್ಲಾ ದಾನಿಗಳು ಸಹಕಾರ ನೀಡಿದ್ದಾರೆ. ಕೆಲವರು ಒಂದೊಂದು ಖರ್ಚನ್ನು ವಹಿಸಿಕೊಂಡು ಬ್ರಹ್ಮಕಲಶ ನಿರಾತಂಕವಾಗಿ ನಡೆಯಲು ಸಹಕರಿಸಿದ್ದು ಅವರೆಲ್ಲರಿಗೂ ಕೃತಜ್ಞತೆ ಅರ್ಪಿಸಿಕೊಳ್ಳುತ್ತೇನೆ ಎಂದರು.
ಈ ಸಂದರ್ಭ ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಚೇರ್ಮನ್ ಮತ್ತು ಆಡಳಿತ ನಿರ್ದೇಶಕ ಪ್ರಕಾಶ್‌ಚಂದ್ರ ಶೆಟ್ಟಿ , ಬಿಲ್ಲವ ಸಮಾಜದ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಉದಯವಾಣಿಯ ಸೀನಿಯರ್ ಅಸಿಸ್ಟೆಂಟ್ ಎಡಿಟರ್ ಮಟಪಾಡಿ ಕುಮಾರಸ್ವಾಮಿ ಮಾತನಾಡಿ, .ಎಂ. ಎಲೆಕ್ಟ್ರಿಕಲ್ಸ್ ಮಾಲಿಕ ಮಾಧವ ಪಾಣ, ಉಪ್ಪೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾಜು ಪೂಜಾರಿ, ಮೊಗವೀರ ಸಂಘಟನೆಯ ಉಪ್ಪೂರು ಘಟಕದ ಗೌರವಾಧ್ಯಕ್ಷ, ಕೆ.ಸಿ. ಅಮೀನ್, ಮೌನ ಇನ್ಫ್ರಾ ಮತ್ತು ಡೆವಲಪರ‍್ಸ್ ಮಾಲಕ ನವೀನ್ ಪೆರ್ಡೂರು, ಜಿ.ಕೆ. ಎಲೆಕ್ಟ್ರಿಕಲ್‌ನ ವಿಕ್ರಾಂತ್ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ, ಉದ್ಯಮಿ ಆತ್ಮರಾಮ ಪಾಟೀಲ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಮತ್ಸೋದ್ಯಮಿ ಹರೀಶ್ ಪೂಜಾರಿ, ಸುರೇಶ್ ಬಿ. ಶೆಟ್ಟಿ, ಜಯ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ಪ್ರಶಾಂತ್ ಶೆಟ್ಟಿ ನಿರೂಪಿಸಿದ್ದು, ಲಕ್ಷ್ಮೀಶ್ ಭಟ್ ವಂದಿಸಿದರು.
ಸತೀಶ್ ಪೂಜಾರಿಯವರು ಕೀಳಂಜೆ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾಗಿ, ಹಾವಂಜೆ, ಉಪ್ಪೂರು, ಕುಕ್ಕೆಹಳ್ಳಿ ಭಾಗದ ಹಲವಾರು ದೈವಸ್ಥಾನ, ದೇವಸ್ಥಾನ ಹಾಗೂ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಒಂದಿಲ್ಲೊಂದು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿರುತ್ತಾರೆ. ಪರಾರಿ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಹೊರಟಾಗ ದೈವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷರಾದ ಕೊಳಲಗಿರಿ ಗುರುರಾಜ್ ಭಟ್ ಹಾಗೂ ದೈವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀಶ್ ಭಟ್‌ರವರಿಗೆ ಬೆನ್ನುಲುಬಾಗಿ ನಿಂತು ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಸ್ಥಳಿಯರನ್ನು ಹಾಗೂ ಸ್ವಯಂಸೇವಕರನ್ನು ಪ್ರೇರೇಪಿಸಿದ್ದಲ್ಲದೆ ಸಾಕಷ್ಟು ದಾನಿಗಳನ್ನು ಸಂಪರ್ಕಿಸಿ ಆರ್ಥಿಕ ಸಂಗ್ರಹಕ್ಕೂಸತೀಶ್ ಪೂಜಾರಿ ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.



