ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ :
ಉಡುಪಿ ಜೂನ್ ೧೯ :
೪೮ ಸಾವಿರ ಸಹಕಾರ ಸಂಘಗಳು ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿದ್ದು ಕೇಂದ್ರದಲ್ಲಿ ಸಹಕಾರ ಕಾಯ್ದೆಯಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಿದ್ದಾರೆ. ರಾಜ್ಯದಲ್ಲೂ ತಿದ್ದುಪಡಿಯಾಗಿದೆ. ಇವುಗಳಲ್ಲಿ ಕೆಲವು ಸಹಕಾರಿ ಸಂಘಗಳಿಗೆ ಮಾರಕವಾಗಿದೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಸಹಕಾರ ಮಾಡುವ ಸಹಕಾರಿ ಸಂಘಗಳಲ್ಲಿ ಯಾರಿಗೂ ತೊಂದರೆಯಾಗದಂತೆ ಕಾಯ್ದೆಯನ್ನು ಸರಕಾರ ರೂಪಿಸಬೇಕು. ವಾಣಿಜ್ಯ ಬ್ಯಾಂಕುಗಳು ಪಟ್ಟದತ್ತ ಮುಖ ಮಾಡಿದ್ದು ಸಹಕಾರಿ ಸಂಘಗಳು ಹಳ್ಳಿಗಳಲ್ಲಿ ಶಾಖೆಗಳನ್ನು ತೆರೆಯುತ್ತಿವೆ. ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಡುಪಿ ಪಟ್ಟಣದಲ್ಲಿ ಆರಂಭಗೊಂಡು ಇದೀಗ ಅಲೆವೂರಿನಲ್ಲಿ ಶಾಖೆಯನ್ನು ತೆರೆಯುತ್ತಿದ್ದು ಸಂಸ್ಥೆ ಬೆಳೆದು ಇನ್ನಷ್ಟು ಶಾಖೆಗಳನ್ನು ತೆರೆಯುಂತಾಗಲಿ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಹಾಗೂ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಇಂದ್ರಾಳಿ ಜಯಕರ ಶೆಟ್ಟಿ ನುಡಿದರು.

ಅವರು ಶ್ರೀ ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ ನೂತನ ಅಲೆವೂರು ಶಾಖಾ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಉಡುಪಿಯ ಹೋಟೆಲ್ ರಾಮಕೃಷ್ಣ ಮಾಲಕರಾದ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ನೇಜಾರು ವಾದಿರಾಜ ರಾವ್ ಉದ್ಘಾಟಿಸಿ ಮಾತನಾಡುತ್ತಾ ಗಾಯತ್ರಿ ಕ್ರೆಡಿಡ್ ಕೋ- ಆಪರೇಟಿವ್ ಸೊಸೈಟಿ ಉಡುಪಿ ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶದಲ್ಲಿ ಇನ್ನಷ್ಟು ಶಾಖೆಗಳು ತೆರೆಯುವಂತಾಗಲಿ ಎಂದರು.

ಸಂಘದ ಅಧ್ಯಕ್ಷ ಸಾಲಿಗ್ರಾಮ ಜಯರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದು ಅವರು ಮಾತನಾಡಿ ಸದಸ್ಯರಿಗೆ ನಮ್ಮ ಸಂಸ್ಥೆ ಶೀಘ್ರ ಸೇವೆ ನೀಡಲಿದೆ ಎನ್ನುತ್ತಾ ಉದ್ಘಾಟನೆಗೆ ಸಹಕರಿಸಿದವರಿಗೆ ಕೃತಜ್ಞತೆ ಅರ್ಪಿಸಿದರು.
ಸಂಘದ ಆರ್ಥಿಕ ಸಲಹೆಗಾರ ಸಿಎ ಯು.ಬಿ. ಅಜಿತ್ ಕುಮಾರ್ ಮಾತನಾಡಿ ಸಹಕಾರಿ ಸಂಘಗಳಿಗೆ ಜ್ಯುವೆಲ್ ಲೋನ್, ಡೆಪೋಸಿಟ್ ಲೋನ್ ಲಾಭದಾಯಕವಲ್ಲ ಎಂದರು.
ಅತಿಥಿಯಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯತೀಶ್ ಪೂಜಾರಿ ಹಾಗೂ ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ.ನಾಗರಾಜ ಆಚಾರ್ಯ ಭಾಗವಹಿಸಿದ್ದು ಸಂಸ್ಥೆಗೆ ಶುಭ ಹಾರೈಸಿದರು.

ನಿರ್ದೇಶಕರಾದ ಅಲೆವೂರು ಯೋಗೀಶ್ ಆಚಾರ್ಯ ಪ್ರಾಸ್ತವಿಕ ಮಾತುಗಳನ್ನಾಡುತ್ತಾ ನಮ್ಮ ಸಂಸ್ಥೆ ಸಮಾಜದ ಅಭಿವೃದ್ಧಿಗಾಗಿ, ಆರ್ಥಿಕ ವ್ಯವಹಾರ ನಡೆಸುತ್ತಾ ಬಂದಿದ್ದು ಪ್ರಸ್ತುತ ಎ ತರಗತಿ ಶ್ರೇಣಿಯಲ್ಲಿ ನಡೆಯುತ್ತಿದೆ ಎಂದರು.
ನಿರ್ದೇಶಕರಾದ ಕೆ. ಶ್ರೀಧರ ಆಚಾರ್ಯ, ಎಸ್.ಕಿಶೋರ್ ಆಚಾರ್ಯ, ಮೋಹನ್‌ದಾಸ್ ಸಿ.ಆಚಾರ್ಯ, ಸತೀಶ್ ಆಚಾರ್ಯ, ಕೆ.ಪಾಂಡುರಂಗ ಆಚಾರ್ಯ, ಎ.ಎಸ್.ಪ್ರಸನ್ನ ಆಚಾರ್ಯ, ಅಶೋಕ್ ಕುಮಾರ್ , ಶಶಿಕಲಾ ಪಿ. ಆಚಾರ್ಯ, ಮುಕ್ತಾ ಜಗದೀಶ್ ಆಚಾರ್ಯ, ನಾಮ ನಿರ್ದೇಶಿತರಾದ ವಿಜಯಲಕ್ಷ್ಮಿ, ಮೋಹಿನಿ ಜಿ.ಆಚಾರ್ಯ ಉಪಸ್ಥಿತರಿದ್ದರು.
ಸಮಾಂಭದಲ್ಲಿ ಸ್ಥಾಪಕಾಧ್ಯಕ್ಷರ ನೆನಪಿನಲ್ಲಿ ಮಾಧವ ನಿಧಿ ಕ್ಯಾಶ್ ಸರ್ಟಿಫಿಕೇಟ್‌ನ್ನು ಶ್ರೀಮತಿ ಪ್ರತಿಭಾ ಮಾಧವ ಆಚಾರ್ಯ ಬಿಡುಗಡೆಗೊಳಿಸಿದರು.

ಸಂಘದ ಉಪಾಧ್ಯಕ್ಷ ಮೋಹನ್ ಎಂ.ಪಿ.ಸ್ವಾಗತಿಸಿದರು. ಪಾಂಡುರಂಗ ಆಚಾರ್ಯ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ್ ಆಚಾರ್ಯ ನಿರೂಪಿಸಿದರು.



