udupimitra.in
  • June 24, 2026
  • Last Update June 23, 2026 5:23 pm
  • Brahmavara

ವಿನಾಯಕ ಇಂಟೀರಿಯರ್ ಸ್ಥಳಾಂತರ; ಚಾಂತಾರು ದೇವುಬೈಲಿನಲ್ಲಿ ಸ್ವಂತ ಕಟ್ಟಡದಲ್ಲಿ ಉದ್ಘಾಟನೆ

ವಿನಾಯಕ ಇಂಟೀರಿಯರ್ ಸ್ಥಳಾಂತರ; ಚಾಂತಾರು ದೇವುಬೈಲಿನಲ್ಲಿ ಸ್ವಂತ ಕಟ್ಟಡದಲ್ಲಿ ಉದ್ಘಾಟನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಜೂ.೨೩:
ಸಮಾಜಕ್ಕೆ ಬೇಕಾದ ಎಲ್ಲಾ ಶಿಲ್ಪಗಳನ್ನು ವಿಶ್ವಕರ್ಮ ಸಮಾಜ ಒದಗಿಸುತ್ತಾ ಬಂದಿದೆ ಎಂದು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಅನಂತಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳವರು ಆಶೀರ್ವಚನದಲ್ಲಿ ನುಡಿದರು.
ಅವರು ಬ್ರಹ್ಮಾವರ ಚಾಂತಾರು ದೇವುಬೈಲಿಗೆ ಸ್ಥಳಾಂತರಗೊಂಡು ಸ್ವಂತ ಸ್ಥಳದಲ್ಲಿ ನಿರ್ಮಾಣಗೊಂಡ ಶ್ರೀ ವಿನಾಯಕ ಇಂಟೀರಿಯರ್ ಸಂಸ್ಥೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.


ಪ್ರತಿಯೊಬ್ಬರು ತಮ್ಮ ವ್ಯವಹಾರದಲ್ಲಿ ಗ್ರಾಹಕರೊಂದಿಗೆ ನಂಬಿಕೆ, ಪ್ರೀತಿ, ವಿಶ್ವಾಸ ಉಳಿಸಿಕೊಂಡಲ್ಲಿ ಉದ್ಯಮ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಗಲಿದೆ. ಇದಕ್ಕೆ ವಿನಾಯಕ ಇಂಟೀರಿಯರ್ ಮಾಲಕ ಸುರೇಂದ್ರ ಆಚಾರ್ಯರು ಸಾಕ್ಷಿಯಾಗಿದ್ದಾರೆ. ಸಂಸ್ಥೆಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಯಶಸ್ಸನ್ನು ಕಾಣುತ್ತಿದ್ದು. ಇವರ ಸಂಸ್ಥೆ ಇನ್ನಷ್ಟು ಶ್ರೇಯಸ್ಸನ್ನು ಗಳಿಸಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುರೋಹಿತರಾದ ಶಶಿಧರ ಆಚಾರ್ಯ ಮಾತನಾಡಿ ಸುರೇಂದ್ರ ಆಚಾರ್ಯ ಬೃಹತ್ತಾದ ಇಂಟೀರಿಯರ್ ಸಂಸ್ಥೆಯನ್ನು ಹುಟ್ಟು ಹಾಕಿದ್ದು ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.


ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಶೋಕ್ ಕಾಮತ್ ಪರ್ಕಳ ಮಾತನಾಡಿ ಇತ್ತೀಚೆಗಿನ ದಿನಗಳಲ್ಲಿ ಇಂಟೀರಿಯರ್ ಬಹಳ ಮಹತ್ವ ಕಂಡುಕೊಂಡಿದೆ. ಸ್ಪರ್ಧಾತ್ಮಕತೆಗೆ ಹಾಗೂ ಆಧುನಿಕತೆಗೆ ಒಗ್ಗಿಕೊಂಡಲ್ಲಿ ಮಾತ್ರ ಈ ಕ್ಷೇತ್ರದಲ್ಲಿ ನಾವು ಉಳಿಯಲು ಸಾಧ್ಯ ಎಂದರು.

ನಿವೃತ್ತ ಅಧ್ಯಾಪಕ ಕೆ.ಬಲರಾಮ ಕಲ್ಕೂರ, ಹಂಗಾರಕಟ್ಟೆ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ವೀಣಾ ಉದಯ ಶೆಟ್ಟಿ, ಬ್ರಹ್ಮಾವರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಜಯಕರ ಐರೋಡಿ, ಪಿ.ಡಬ್ಲ್ಯೂ.ಡಿ ಕಂಟ್ರಾಕ್ಟರ್ ಚಂದ್ರಶೇಖರ ಶೆಟ್ಟಿ, ಹೆಬ್ರಿಯ ಕೋಮಲ್ ಫೀಡ್ಸ್ ಇದರ ಮಾಲಕ ಸಿದ್ದಿಪ್ರಸಾದ್ ಉಪಸ್ಥಿರಿದ್ದು ಶುಭ ಹಾರೈಸಿದರು.

ಸುಬ್ರಾಯ ಆಚಾರ್ಯ ಬಾಳ್ಕುದ್ರು ಉಪಸ್ಥಿತರಿದ್ದರು.
ವಿನಾಯಕ ಇಂಟೀರಿಯರ್ ಮಾಲಕ ಸುರೇಂದ್ರ ಆಚಾರ್ಯ ಹಾಗೂ ಶ್ರೀಮತಿ ನಿಶಾ ಸುರೇಂದ್ರ ಆಚಾರ್ಯ ಸ್ವಾಮೀಜಿಯವರನ್ನು ಸ್ವಾಗತಿಸಿಕೊಂಡು ಗುರು ಪಾದುಕಾ ಪೂಜೆ ನೆರವೇರಿಸಿದರು.
ಪ್ರಕಾಶ್ ಆಚಾರ್ಯ ಸ್ವಾಗತಿಸಿ ವಂದಿಸಿದರು. ಚೇಂಪಿ ದಿನೇಶ್ ಆಚಾರ್ಯ ನಿರೂಪಿಸಿದರು. ಪುರೋಹಿತ್ ಗೋಪಾಲಕೃಷ್ಣ ಆಚಾರ್ಯ ಪೂಜಾ ಕಾರ್ಯಕ್ರಮ ನೆರವೇರಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page