• March 26, 2026
  • Last Update March 24, 2026 3:28 pm
  • Brahmavara

ಹಿಜಾಣಚಿಕ್ಕು ಪುನರ್ ಪ್ರತಿಷ್ಟೆ ಸಂಪನ್ನ

ಹಿಜಾಣಚಿಕ್ಕು ಪುನರ್ ಪ್ರತಿಷ್ಟೆ ಸಂಪನ್ನ

ಉಡುಪಿಮಿತ್ರ ಪತ್ರಿಕೆ ಸುದ್ದಿ : ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಚಿಕ್ಕು ಸಪರಿವಾರ ದೈವಸ್ಥಾನ ಹಿಜಾಣ ಇಲ್ಲಿ ಜ.೨೬ರಂದು ರಾತ್ರಿ ಶ್ರೀ ನಾಗದೇವರ ಜೀರ್ಣೋದ್ಧಾರ ಮತ್ತು ಸಪರಿವಾರ ಶ್ರೀ ಹಿಜಾಣ ಚಿಕ್ಕು ಪುನರ್ ಪ್ರತಿಷ್ಟೆ ಕಾರ್ಯಕ್ರಮಗಳು ಜರುಗಿತು.


ಪ್ರತಿಷ್ಟಾಪನೆಯ ಪೂರ್ವದಲ್ಲಿ ಸಪರಿವಾರ ಹಿಜಾಣಚಿಕ್ಕು ನೂತನ ಮೂರ್ತಿಯನ್ನು ವಂಡ್ಸೆ, ಚಿತ್ತೂರಿನವರೆಗೆ ಮೆರವಣಿಗೆಯಲ್ಲಿ ಕೊಂಡು ಹೋಗಿದ್ದು ಈ ಸಂದರ್ಭ ಊರ ಪರಊರ ಭಕ್ತಾದಿಗಳು ಸೇರಿದ್ದು ಪೂರ್ಣ ಕುಂಭ ಸ್ವಾಗತ, ವಾದ್ಯಘೋಷದೊಂದಿಗೆ ಮೂರ್ತಿಯನ್ನು ದೈವಸ್ಥಾನಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸಪರಿವಾರ ಶ್ರೀ ಹಿಜಾಣಚಿಕ್ಕು ದೈವಸ್ಥಾನ ಮತ್ತು ನಾಗಸ್ಥಾನದ ಆಡಳಿತ ಮೊಕ್ತೇಸರ ಹಿಜಾಣ ರಘುರಾಮ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವಿರಾಜ್ ಶೆಟ್ಟಿ, ಎಸ್.ನವೀನ್ ಕುಮಾರ್ ಶೆಟ್ಟಿ ಆಲೂರು(ಹಿಜಾಣ), ನ್ಯಾಯವಾದಿ ಕುಸುಮಾಕರ ಶೆಟ್ಟಿ, ರಾಜೀವ ಶೆಟ್ಟಿ ಹಿಜಾಣ, ಅವಿನಾಶ್ ಶೆಟ್ಟಿ ಹಿಜಾಣ, ನಿತಿನ್ ಶೆಟ್ಟಿ ಹಿಜಾಣ, ಪ್ರತೀಕ್ ಶೆಟ್ಟಿ ಹಿಜಾಣ, ರಾಜೇಂದ್ರ ಶೆಟ್ಟಿ ಹಿಜಾಣ, ಗ್ರಾಮ ಪಂಚಾಯತ್ ಸದಸ್ಯ ಸಿಡಿ ಮಂಜುನಾಥ ಚಂದ್ರ ರಾಯಪ್ಪನಡಿ, ಜಯರಾಮ ಶೆಟ್ಟಿ ಬೆಳ್ವಾಣ, ದೇವು ಮೆಂಡನ್, ಸಂಪತ್ ಕುಮಾರ್ ಶೆಟ್ಟಿ ಹಿಜಾಣ, , ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಣ್ಣಪ್ಪ ಮೊಗವೀರ, ದೇವರಿಗೆ ಬೆಳ್ಳಿಯ ಪೀಠ, ದೇವರ ಹಿಂಬದಿಯ ಗೋಡೆಗೆ ಹಿತ್ತಾಳೆಯ ಹೊದಿಕೆಯ ಕೆಲಸವನ್ನು ಮಾಡಿರುವ ವಂಡ್ಸೆಯ ಶಿಲ್ಪಿ ರಮಾನಂದ ಆಚಾರ್ಯ ಹಾಗೂ ಸಹೋದರರು ಉಪಸ್ಥಿತರಿದ್ದರು.


ಜ.೨೭ರಂದು ಸಪರಿವಾರ ಶ್ರೀ ಹಿಜಾಣಚಿಕ್ಕು ಪುನರ್ ಪ್ರತಿಷ್ಠಾಪನೆ, ನಾಗದೇವರ ಪುನರ್ ಪ್ರತಿಷ್ಠಾಪನೆ, ಬ್ರಹ್ಮಕುಂಭಾಭಿಷೇಕ, ಮಹಾ ಅನ್ನ ಸಂತರ್ಪಣೆ ಜರುಗಿತು. ಶಾರ್ಕೆ ರಾಮಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

administrator

Related Articles

Leave a Reply

Your email address will not be published. Required fields are marked *

You cannot copy content of this page