• February 9, 2026
  • Last Update February 2, 2026 6:06 pm
  • Brahmavara

ಫೆಬ್ರವರಿ 8 ರಂದು ಶಾಂಭವೀ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ ಉದ್ಘಾಟನೆ

ಫೆಬ್ರವರಿ 8 ರಂದು ಶಾಂಭವೀ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ ಉದ್ಘಾಟನೆ

ಶಾಂಭವಿ ಬಿಲ್ಡರ್ ಸಂಸ್ಥೆಯಿಂದ ಆತ್ರಾಡಿಯಲ್ಲಿ ನಿರ್ಮಾಣಗೊಂಡ ಶಾಂಭವೀ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ ಉದ್ಘಾಟನಾ ಸಮಾರಂಭ ಫೆಬ್ರವರಿ 8 ರಂದು ಸಂಜೆ ಗಂಟೆ ೪ಕ್ಕೆ ನೆರವೇರಲಿದೆ. ಉದ್ಘಾಟನಾ ಸಮಾರಂಭದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠ ಇಲ್ಲಿನ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನೆ ನೀಡಲಿದ್ದಾರೆ. ಉದ್ಘಾಟನೆಯನ್ನು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ನೆರವೇರಿಸಲಿದ್ದಾರೆ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾಕ್ಟರ್ ಜಿ ಶಂಕರ್ ಶುಭಾಶಂಸನೆ ಮಾಡಲಿದ್ದಾರೆ.
ಅಭ್ಯಾಗತರಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ ಸುವರ್ಣ, ಮಾಜಿ ಸಚಿವರುಗಳಾದ ಕೆ. ಜಯಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್ ಸೊರಕೆ ಹಾಗೂ ಪ್ರಮೋದ್ ಮದ್ವರಾಜ್, ಮಣಿಪಾಲ ಕ್ರೈಸ್ಟ್ ಚರ್ಚಿನ ಫಾ. ರೋಮಿಯೋ ಲುವಿಸ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್, ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್. ಉಡುಪಿ ಉಜ್ವಲ್ ಡೆವಲಪರ್‍ಸ್‌ನ ಪುರುಷೋತ್ತಮ ಶೆಟ್ಟಿ, ಆತ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಗಂಟೆ 3.೦೦ರಿಂದ ಸಂಗೀತ ನಿರ್ದೇಶಕ, ಗಾಯಕ ವಿದ್ವಾನ್ ಯಶವಂತ ಎಂ.ಜಿ. ಇವರಿಂದ ಸಂಗೀತ ಕಾರ್ಯಕ್ರಮ ‘ಗಾನಾಂಜಲಿ’ ಹಾಗೂ ಸಭಾ ಕಾರ್ಯಕ್ರಮದ ನಂತರ ಸಂಜೆ ಗಂಟೆ 7.೦೦ರಿಂದ ನೃತ್ಯ ನಿಕೇತನ ಕೊಡವೂರು ಇವರಿಂದ ‘ನಾರಸಿಂಹ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಈ ಸಮಾರಂಭದಲ್ಲಿ ಸರ್ವರೂ ಭಾಗವಹಿಸುವಂತೆ ಶ್ರೀಮತಿ ಸೆಲಿನ್ ಅಪ್ಪು ಮತ್ತು ಶ್ರೀ ಅಪ್ಪು ಮರಕಾಲ ವಿನಂತಿಸಿದ್ದಾರೆ
ಸೌಲಭ್ಯಗಳು :
ನೂತನವಾಗಿ ನಿರ್ಮಾಣಗೊಂಡಿರುವ ಶಾಂಭವೀ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಎ/ಸಿ ಡಿಲೆಕ್ಸ್ ರೂಮುಗಳು, ಎ/ಸಿ ಡಿಲೆಕ್ಸ್ ಫ್ಯಾಮಿಲಿ ರೂಮುಗಳು, ಸ್ಯೂಟ್ ರೂಮ್ಸ್, ಎಕ್ಸಿಕ್ಯೂಟಿವ್ ಸ್ಯೂಟ್ ರೂಮ್ಸ್ , ೧೫೦ ರಿಂದ ೨೦೦ ಜನ ಭಾಗವಹಿಸಲು ಎ/ಸಿ ಮಿನಿ ಹಾಲ್ * ೨ನೇ ಮಹಡಿಯ ‘ಇರಾ’ ಎ/ಸಿ ಬ್ಯಾಂಕ್ವೆಟ್‌ಹಾಲ್‌ನಲ್ಲಿ ೧೫೦೦ ಮಂದಿಗೆ ಸ್ಥಳವಕಾಶ, ೭೫೦ ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಹಾಗೂ ವಿಶಾಲವಾದ ವೇದಿಕೆ ಮತ್ತು ಎರಡು ಗ್ರೀನ್‌ರೂಮ್, ೩ನೇ ಮಹಡಿಯ ‘ತತ್ವ ಬ್ಯಾಂಕ್ವೆಟ್ ಹಾಲ್‌ನಲ್ಲಿ ೫೦೦ ಜನರು ಭಾಗವಹಿಸಲು ಹಾಗೂ ೩೫೦ ಮಂದಿ ಕುಳಿತುಕೊಳ್ಳಬಹುದಾದ ಸ್ಥಳವಕಾಶ, ಲಿಫ್ಟ್ ವ್ಯವಸ್ಥೆ, ಜನರೇಟರ್ ಬ್ಯಾಕ್‌ಅಪ್ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ನೆಲಮಹಡಿಯಲ್ಲಿ ವೆಜ್ & ನಾನ್‌ವೆಜ್‌ಗೆ ಪ್ರತ್ಯೇಕ ಕಿಚನ್ ವ್ಯವಸ್ಥೆ, ಅಡುಗೆಗೆ ಹಾಗೂ ಬಡಿಸಲು ಪ್ರತ್ಯೇಕ ಪಾತ್ರೆಗಳು, ಹೀಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಮಾಲಕ ಶ್ರೀ ಅಪ್ಪು ಮರಕಲ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *