• February 9, 2026
  • Last Update February 2, 2026 6:06 pm
  • Brahmavara

ಸಾಸ್ತಾನ : ಎ.16 ರಂದು ಅಷ್ಟಪವಿತ್ರ ನಾಗಮಂಡಲೋತ್ಸವ ; ಚಪ್ಪರ ಮಹೂರ್ತ

ಸಾಸ್ತಾನ : ಎ.16 ರಂದು ಅಷ್ಟಪವಿತ್ರ ನಾಗಮಂಡಲೋತ್ಸವ ; ಚಪ್ಪರ ಮಹೂರ್ತ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ:

ಸಾಸ್ತಾನ ಪಾಂಡೇಶ್ವರದ ಹುಲ್ಲುಕುತ್ರೆ ಮನೆ ಕೀರ್ತಿಶೇಷ ಶ್ರೀ ಗೋವಿಂದರಾವ್ ಮತ್ತು ಕೀರ್ತಿಶೇಷ ಶ್ರೀಮತಿ ಕಲ್ಯಾಣಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಪಾಂಡೇಶ್ವರದ ವೆಂಕಟೇಶ್ವರ ನಿಲಯದ ಸಮೀಪದ ನಾಗಬನದ ವಠಾರದಲ್ಲಿ ಏಪ್ರಿಲ್16ರಂದು ನಡೆಸಲುದ್ದೇಶಿಸಿರುವ ಅಷ್ಟಪವಿತ್ರ ನಾಗ ಮಂಡಲೋತ್ಸವಕ್ಕೆ ಮಾ.24ರಂದು ಚಪ್ಪರ ಮಹೂರ್ತ ನಡೆಯಿತು.
ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ ಪ್ರಸನ್ನ ತುಂಗ ಕಾರ್ಯಕ್ರಮದ ಯಶಸ್ಸಿಗೆ ನಾಗದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಶಿವಕೃಪಾ ಅನಂತಯ್ಯ ತುಂಗ, ಪಿ.ಮಂಜುನಾಥ ರಾವ್, ರತ್ನಾಕರ ರಾವ್, ಪಿ.ಲಕ್ಷ್ಮೀನಾರಾಯಣ ರಾವ್, ವೆಂಕಟೇಶ ಪಿ., ಗಣಪತಿ ಶೇರೆಗಾರ್, ಪಿ.ಎಸ್.ರಾಘವೇಂದ್ರರಾವ್, ಪಿ ಮಧುಸೂದನ, ಪಾಕತಜ್ಞ ವಸಂತ ಅಧಿಕಾರಿ ಐರೋಡಿ, ಚಪ್ಪರ ಗುತ್ತಿಗೆದಾರ ಸುಧಾಕರ ಪಾಂಡೇಶ್ವರ, ಶಂಕರ ಕುಲಾಲ್ ಐರೋಡಿ, ಸಂಜೀವ ಪೂಜಾರಿ ಐರೋಡಿ ಹಾಗೂ ನಾಗಮಂಡಲ ಸೇವೆಯ ಹುಲ್ಲುಕುತ್ರೆಮನೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *