udupimitra.in
  • November 5, 2026
  • Last Update November 5, 2026 3:18 am
  • Brahmavara

ಹಾವಂಜೆ ನೂತನ ಮಸೀದಿ ಉದ್ಘಾಟನೆ;ಕಣ್ಣೀರು ಒರೆಸುವುದರಿಂದ ಮಾತ್ರ ಸಮಾಜದ ಅಭಿವೃದ್ಧಿ : ಈಶ ವಿಠಲದಾಸ ಸ್ವಾಮೀಜಿ

ಹಾವಂಜೆ ನೂತನ ಮಸೀದಿ ಉದ್ಘಾಟನೆ;ಕಣ್ಣೀರು ಒರೆಸುವುದರಿಂದ ಮಾತ್ರ ಸಮಾಜದ ಅಭಿವೃದ್ಧಿ : ಈಶ ವಿಠಲದಾಸ ಸ್ವಾಮೀಜಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಹಾವಂಜೆ, ನ.೩: ಕೇವಲ ಮಸೀದಿ, ದೇವಸ್ಥಾನ ಅಥವಾ ಚರ್ಚ್‌ಗಳನ್ನು ನಿರ್ಮಿಸುವುದರಿಂದ ಸಮಾಜದ ಉದ್ದಾರವಾಗುವುದಿಲ್ಲ. ಬದಲಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕಾರ್ಯವಾದಾಗ ಮಾತ್ರ ದೇವರು ಮೆಚ್ಚುತ್ತಾನೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಲ್ ಫಲಾಹ್ ಜುಮ್ಮಾ ಮಸೀದಿ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಸಿಸ್ತಿನ ಹಾಗೂ ಪ್ರಾಮಾಣಿಕ ದುಡಿಮೆಯ ಹಣದಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಸರ್ವ ಧರ್ಮಗಳ ಮುಖಂಡರನ್ನು ಒಂದೇ ವೇದಿಕೆಗೆ ಕರೆಸಿ ಸೌಹಾರ್ದ ಮೆರೆದ ಗೋಳಿಕಟ್ಟೆಯ ಯುವಕರ ಕಾರ್ಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಾದರಿಯಾಗಿದೆ, ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾತಿಗಿಂತ ನೀತಿ ಮುಖ್ಯ: ಫಾದರ್ ಡೆನಿಸ್ ಅಲೆಕ್ಸಾಂಡರ್ ಡೇಸಾ

ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ವಿ.ರೆ.ಫಾದರ್ ಡೆನಿಸ್ ಅಲೆಕ್ಸಾಂಡರ್ ಡೇಸಾ ಮಾತನಾಡಿ, ಧರ್ಮದ ಹೆಸರಿನಲ್ಲಿ ದ್ವೇಷದ ಗೋಡೆಗಳನ್ನು ಕೆಡವಿ ಪ್ರೀತಿಯನ್ನು ಬೆಳೆಸಬೇಕಿದೆ. ಹುಟ್ಟುವಾಗ ಯಾವುದೇ ಜಾತಿ-ಮತಗಳಿರುವುದಿಲ್ಲ, ನಾವು ಜಾತಿಗಿಂತ ನೀತಿಗೆ ಆದ್ಯತೆ ನೀಡಿ ಬದುಕಬೇಕು, ಎಂದರು.
ಗೋಳಿಕಟ್ಟೆ ಅಲ್ ಫಲಾಹ್ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಜಿ ಎ ರೆಹಮಾನ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಪ್ರೀತಿ-ವಿಶ್ವಾಸದಿಂದ ಮಾತ್ರ ಸೌಹಾರ್ದತೆ ಸಾಧ್ಯ

ಶಿವಮೊಗ್ಗ ಸಾದಾ ಇಸ್ಲಾಮಿಕ್ ಕಾಲೇಜಿನ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಕೇವಲ ಪೊಲೀಸ್ ಠಾಣೆ ಅಥವಾ ನ್ಯಾಯಾಲಯಗಳಿಂದ ಸೌಹಾರ್ದತೆ ತರಲು ಸಾಧ್ಯವಿಲ್ಲ, ಮಾನವೀಯ ಪ್ರೀತಿಯಿಂದ ಮಾತ್ರ ಅದು ಸಾಧ್ಯ, ಎಂದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಶಾಲಾ ಹಂತದಲ್ಲೇ ಮಕ್ಕಳಿಗೆ ಸೌಹಾರ್ದತೆಯ ಶಿಕ್ಷಣ ನೀಡಬೇಕು, ದ್ವೇಷಕ್ಕೆ ಪ್ರೋತ್ಸಾಹ ನೀಡಬಾರದು, ಎಂದು ಆಶಯ ವ್ಯಕ್ತಪಡಿಸಿದರು.
ಮಂಗಳೂರಿನ ಮುಸ್ಲಿಂ ಮುಖಂಡ ಹೈದರ್ ಪರ್ತಿಪಾಡಿ ಮಾತನಾಡಿ, ದೇವರು ಧರ್ಮಗಳನ್ನು ಸೃಷ್ಟಿಸಿಲ್ಲ, ಮನುಷ್ಯನೇ ಅದನ್ನು ರೂಪಿಸಿಕೊಂಡಿದ್ದಾನೆ. ಪ್ರತಿಯೊಬ್ಬರಿಗೂ ನೆಮ್ಮದಿಯ ವಾತಾವರಣ ಅಗತ್ಯ, ಎಂದರು.


ಕುಕ್ಕಿಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮೊಕ್ತೇಸರ ಅಶೋಕ್ ಕುಮಾರ್ ಶೆಟ್ಟಿ, ಜಿಲ್ಲಾ ಮುಸ್ಸಲಿಂ ಒಕ್ಕೂಟ ಅಧ್ಯಕ್ಷ ಜನಾಬ್ ಮಹಮ್ಮದ್ ಮೌಲ, ಗೋಳಿಕಟ್ಟೆ ಶ್ರೀ ವೀರ ಕಲ್ಕಡ ದೈವಸ್ಥಾನದ ಅಧ್ಯಕ್ಚ ನಾಗರಾಜ ಹೆಗ್ಡೆ, ದೈವ ನರ್ತಕ ಶ್ಯಾಮರಾಯ ಪಾಣ, ಅಬೂಬಕರ್ ಆತ್ರಾಡಿ, ಎನ್ ಎನ್ ಓ ಅಧ್ಯಕ್ಷ ಜನಾಬ್ ಯಾಹ್ಯ ನಕ್ವಾ, ಆತ್ರಾಡಿ ಎಮ್ ಜೆ ಎಮ್ ಖತೀಬರಾದ ಬಹು/ಇಸ್ಮಾಯಿಲ್ ಸಖಾಫಿ, ಕುಂಜಾಲ್ ಹಿದಾಯತುಲ್ ಇಸ್ಲಾಮ್ ಮದರಸಿನ ಹೈದರಾಲಿ ಮರ್ಝಖಿ ಅಲ್ ರಯ್ಜಿ, ಸಾಯಿರಾಧ ಗ್ರೂಫ್ ನ ಮನೋಹರ ಶೆಟ್ಟಿ, ಕೀರ್ತಿ ಬಿಲ್ಡರ‍್ಸ್ ಮಾಲಕ ಸುಧೀರ್ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆಯ ಎಂ.ಡಿ ಜಿ.ಎಸ್.ಚಂದ್ರಶೇಖರ್, ಸಂತೋಷನಗರ ಬದ್ರಿಯಾ ಜಾಮಿಯ ಮಸೀದಿ ಹನೀಫ್ ಹಾಜಿ, ಮೈಸೂರಿನ ಉದ್ಯಮಿ ಇಸ್ಮಾಯಿಲ್ ಭಟ್ಕಳ್, ಎಸ್‌ಎಮ್‌ಎ ಉಡುಪಿ ರಿಜನ್ ಅಧ್ಯಕ್ಷ ಹಬೀಬ್ ಅಲಿ, ಆತ್ರಾಡಿ ಮೊಹಿದ್ಧೀನ್ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಅಬ್ದುಲ್ಲಾ, ಕುಂಜಾಲ್ ನೂರ್ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಮೊಹಮ್ಮದ್ ಶಬ್ಬೀರ್ , ಗೋಳಿಕಟ್ಟೆ ಅಲ್ ಫಲಾಹ್ ಜುಮ್ಮಾ ಮಸೀದಿ ಪ್ರದಾನ ಕಾರ್ಯದರ್ಶಿ ಶಂಶುದ್ದೀನ್ ಮೊಹಮ್ಮದ್, ಗೋಳಿಕಟ್ಟೆ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ (ರಿ.) ಅಧ್ಯಕ್ಷ ಮೊಹಮ್ಮದ್ ಅಲಿ, ಅಲ್ – ಫಲಾಹ್ ಜುಮ್ಮಾಮಸೀಧಿ ಗೌರವಾಧ್ಯಕ್ಷ ಇಸ್ಮಾಯಿಲ್ ಸಾಹೇಬ್‌ಗೋಳಿಕಟ್ಟೆ, ಜಾಮಿಯಾ ಮಸೀದಿ ಉಡುಪಿ ಇದರ ಕಾರ್ಯದರ್ಶಿ ಖಲಿದ್ ಅಬ್ಸುಲ್ ಅಜೀಜ್, ಗೋಳಿಕಟ್ಟೆ ಅಲ್ – ಫಲಾಹ್ ಯಂಗ್‌ಮೆನ್ಸ್ ಅಧ್ಯಕ್ಷ ಮಹಮ್ಮದ್ ಸಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಕ್ಷರ ಸಂತ ಹರೇಕಳ ಹಾಜಬ್ಬ, ರವಿ ಕಟಪಾಡಿ, ಫ್ರ್ಯಾಂಕಿ ಡಿಸೋಜರನ್ನು, ಮಸೀದಿ ನಿರ್ಮಾಣಕ್ಕೆ ಶ್ರಮಿಸಿದ ಹಬೀಬ್ ಗೋಳಿಕಟ್ಟೆ, ಮೊಹಮ್ಮದ್ ಅಲಿ ಗೋಳಿಕಟ್ಟೆ, ಹಾಗೂ ಮಸೀದಿ ನಿರ್ಮಾಣಕ್ಕೆ ಪ್ರೋತ್ಸಾಹಿಸಿದವರನ್ನು
ಸನ್ಮಾನಿಸಲಾಯಿತು.

ಮಸೀದಿ ಕಟ್ಟಡದ ಇಂಜೀನಿಯರ್ ಉದಯಕುಮಾರ್, ಇಂಜೀನಿಯರ್ ಅಬ್ದುಲ್ ಮಲಿಕ್, ಇಲೆಕ್ಟ್ರಿಷಿಯನ್ ಗುತ್ತಿಗೆದಾರ ಸಂತೋಷ ಶೆಟ್ಟಿ, ಇಲೆಕ್ಟ್ರಿಷಿಯನ್ ಕಲೆಸಗಾರ ಸುಕುಮಾರ್ ಪೂಜಾರಿಯವರನ್ನು ಗುರುತಿಸಲಾಯಿತು.

ಹನೀಫ್ ಗೋಳಿಕಟ್ಟೆ ಸ್ವಾಗತಿಸಿದರು. ಗೊಳಿಕಟ್ಟೆ ಅಲ್ – ಫಲಾಹ್ ಖತೀಫರು ಪ್ರಾರ್ಥಿಸಿದರು. ಅಬ್ದುಲ್ ರಜಾಕ್ ವಂದಿಸಿದರು.ನೌಫ್‌ಲ್ ವಿಟ್ಲ ನಿರೂಪಿಸಿದರು. ಅಲ್ ಫಲಾಹ್ ಯಂಗ್ ಮೆನ್ಸ್ ತಂಡದ ಸದಸ್ಯರು ಕಾರ್ಯಶ್ರಮದ ಯಶಸ್ಸಿಗೆ ಶ್ರಮಿಸಿದರು.ಸಾರ್ವಜನಿಕ ಮಸೀದಿ ಸಂದರ್ಶನ ಬೆಳಿಗ್ಗೆಯಿಂದ ರಾತ್ರಿ ತನಕ ನಡೆಯಿತು. ಜಮಾತೆ ಇಸ್ಲಾಂ ಹಿಂದ್ ಇದರ ಉಡುಪಿಯ ಸದಸ್ಯರು ಮತ್ತು ಮಹಿಳಾ ಸದಸ್ಯರು ಸಾರ್ವಜನಿಕರಿಗೆ ಮಸೀದಿಯ ಬಗ್ಗೆ ಮಾಹಿತಿ ನೀಡಿದರು. ವಿಶೇಷವೆಂದರೆ ಎಲ್ಲೆಡೆ ಊರಿನ ಹಿಂದು,ಮುಸ್ಲಿಂ, ಹಾಗೂ ಕ್ರೈಸ್ತರು ಎಲ್ಲೆಡೆ ಇರುವುದು ಕಂಡು ಬಂದಿತ್ತು. ಮುಸ್ಲಿಂ ಬಾಂದವರು ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

administrator

Related Articles

Leave a Reply

Your email address will not be published. Required fields are marked *

You cannot copy content of this page