udupimitra.in
  • October 8, 2026
  • Last Update October 8, 2026 5:49 pm
  • Brahmavara

ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ಜೋಡಿ ಕೊಲೆ

ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ಜೋಡಿ ಕೊಲೆ


ಉಡುಪಿಮಿತ್ರ ಪತ್ರಿಕೆ ಸುದ್ಧಿ;
ಬ್ರಹ್ಮಾವರ, ಅ.24:
ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ಜೋಡಿ ಕೊಲೆ ನಡೆದಿದೆ. ಶಾಯಿದ್ ಅಲಿ(25) ಎಂಬವನು ತನ್ನ ತಂದೆ ಮಹಮ್ಮದ್ ಅಲಿ ಹಾಗೂ ತಾಯಿ ಸಂಶದ್ ಬೇಗಂ ಎಂಬವರನ್ನು ಸುತ್ತಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತಂದೆ ಮಲ್ಪೆಯಲ್ಲಿ ಮೀನು ಸಾಗಾಟ ವಾಹನದ ಡ್ರೈವರ್ ಆಗಿದ್ದಾರೆ.
ಶಾಯಿದ್ ಅಲಿ ಜುಮೆಟೋ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು ಆ ಕೆಲಸವನ್ನು ಸರಿಯಾಗಿ ಮಾಡದೆ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ಸ್ಥಳಿಯರು ನಿನ್ನೆ ರಾತ್ರಿ ಕೊಲೆ ನಡೆಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
ಸುತ್ತಿಗೆಯಲ್ಲಿ ಹೊಡೆದು ಕೊಂದಿದ್ದ ಎನ್ನಲಾಗುತ್ತಿದ್ದು ಈತನೇ ಪೋಲೀಸರಿಗೆ ಫೋನ್ ಮಾಡಿ ತಿಳಿಸಿದ್ದ ಎನ್ನಲಾಗಿದ್ದು ಪೋಲೀಸರು ಸ್ಥಳಕ್ಕೆ ಆಗಮಿಸಿ ಅವನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರಕಬೇಕಾಗಿದೆ.

administrator

Related Articles

Leave a Reply

Your email address will not be published. Required fields are marked *

You cannot copy content of this page