ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ,ಸೆ.೧೬: ಶ್ರೀ ರಾಮ ಮಂದಿರ ಬಾಳ್ಕುದ್ರು ಹಂಗಾರಕಟ್ಟೆ ಇಲ್ಲಿ ವಿಪ್ರ ವೇದಿಕೆ ಐರೋಡಿ – ಬಾಳ್ಕುದ್ರು ಇವರ ಜಂಟಿ ಆಶ್ರಯದಲ್ಲಿ ಶ್ರೀ ರಾಮ ವಿಶ್ವಸ್ಥ ಮಂಡಳಿ ನೇತೃತ್ವದಲ್ಲಿ ಸಿಂಹ ಮಾಸದ ಹೊಸ್ತಿಲು ನಮಸ್ಕಾರವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಪ್ರಾರಂಭದಲ್ಲಿ ಶ್ರೀಮತಿ ನೀಲಾವರ ವಸಂತಿ ಅನಂತ ಪದ್ಮನಾಭ ಅಡಿಗ ಉದ್ಘಾಟಿಸಿದರು.

ನಾಡೋಜ ಮಹೇಶ್ ಜೋಷಿ ಹಾಗೂ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೊಸ್ತಿಲು ಪೂಜೆಯ ಮಹತ್ವಿಕೆಯ ಬಗ್ಗೆ ಮಾತನಾಡಿದರು. ನಂತರ ಮಹಿಳೆಯರಿಂದ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮ ಸ್ತೋತ್ರ ಪಠಣ ನಡೆಯಿತು. ಹೊಸ್ತಿಲು ನಮಸ್ಕಾರದ ಸಂದರ್ಭ ೩೧ ಕ್ಕಿಂತಲೂ ಹೆಚ್ಚು ಬಗೆಯ ಪುಷ್ಪಗಳಿಂದ ಪೂಜೆ ನಡೆಯಿತು.

ಕಾರ್ಯಕ್ರಮದಲ್ಲಿ ವಿಪ್ರವೇದಿಕೆ ಅಧ್ಯಕ್ಷ ರಮೇಶ್ ಕಾರಂತ, ಕಾರ್ಯದರ್ಶಿ ನಾಗಭೂಷಣ ಐತಾಳ, ಖಜಾಂಚಿ ಹರೀಶ್ ಮಯ್ಯ, ಬಾರಕೂರು, ಬ್ರಹ್ಮಾವರ, ಐರೋಡಿ, ಸಾಲಿಗ್ರಾಮ ಪರಿಸರದ ವಿವಿಧ ಮಹಿಳಾ ಭಜನಾ ಮಂಡಳಿ ಸದಸ್ಯರು, ಶ್ರೀರಾಮ ಭಜನಾ ವಿಶ್ವಸ್ಥ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ರಾಮ ನಂದಿರದ ವಿಶ್ವಸ್ಥ ಮಂಡಳಿಯ ಉಸ್ತುವಾರಿ ವಹಿಸಿರುವ, ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಅಡಿಗರು ಸ್ವಾಗತಿಸಿದರು. ವಿಘ್ನೇಶ್ವರ ಅಡಿಗ ನಿರೂಪಿಸಿದರು
ಕೊನೆಯಲ್ಲಿ 31 ಬಗೆಯ ಪಾರಂಪರಿಕ ತಿಂಡಿ ತಿನಿಸುಗಳೊಂದಿಗೆ ಭೋಜನಾ ವ್ಯವಸ್ಥೆ ಮಾಡಲಾಗಿತ್ತು.





