ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 06.09.2026ರ ಭಾನುವಾರದಂದು ನಾರಾಯಣಗುರು ಸಭಾಭವನ ಶಿವಗಿರಿ ಕೊಕ್ಕರ್ಣೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘವು ವರದಿ ವರ್ಷದಲ್ಲಿ ಒಟ್ಟು 1201 ಕೋಟಿ ವ್ಯವಹಾರ ನಡೆಸಿದ್ದು, 186 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ, 169 ಕೋಟಿ ಹೊರಬಾಕಿ ಸಾಲ ಹೊಂದಿದ್ದು, ಶೇ.97.39 ವಸೂಲಾತಿ ಮಾಡಿದ್ದು, 3.40 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿ, ಗಣನೀಯ ಸಾಧನೆ ಮಾಡಿರುತ್ತದೆ. ಸಂಘದ ಅಧ್ಯಕ್ಷರು ಸದಸ್ಯರಿಗೆ ಶೇ.18ಪಾಲು ಮುನಾಫೆಯನ್ನು ಘೋಷಣೆ ಮಾಡಿದ್ದು, ಹಲವಾರು ಆಧುನಿಕ ಕೃಷಿಪರ ಯೋಜನೆಗಳ ಬಗ್ಗೆ ಮತ್ತು ಗ್ರಾಹಕ ಸ್ನೇಹಿ ಸಹಕಾರಿ ವ್ಯವಸ್ಥೆಗಳ ಬಗ್ಗೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ತಿಳಿಸಿದರು. ಸಂಘದ ನಿರ್ದೇಶಕರಾದ ಶ್ರೀ ಪ್ರತಾಪ್ ಹೆಗ್ಡೆ ಮಾರಾಳಿ ಇವರು ಪ್ರಾಸ್ತಾವಿಕ ಭಾಷಣ ಮಾಡಿ, ಸಂಘದ ಪ್ರಗತಿಯ ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಸದಸ್ಯರಿಗೆ ವಿವರಿಸಿದರು. ಅಭಿಷೇಕ್ ಆಡಳಿತ ನಿರ್ದೇಶಕರು (ಪ್ರಭಾರ) 2025-2026ನೇ ಸಾಲಿನ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.

ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ವಂಡಾರು, ನಿರ್ದೇಶಕರುಗಳಾದ ಶುಭಕರ ಶೆಟ್ಟಿ ವಂಡಾರು ಕಕ್ಕುಂಜೆ, ಹೆಚ್ ಪ್ರಸನ್ನ ಶೆಟ್ಟಿ ಹಳ್ಳಿ, ಪ್ರತಾಪ ಹೆಗ್ಡೆ ಮಾರಾಳಿ, ಕೆ ಉದಯ ಶೆಟ್ಟಿ ಕೆಂಜೂರು, ಮಂಜುನಾಥ ಹೆಗ್ಡೆ ಆವರ್ಸೆ, ದಯಾನಂದ ನಾಯ್ಕ ತಡಾಲು, ರವಿ ಪೂಜಾರಿ ಸಂತೆಕಟ್ಟೆ, ಶ್ರೀಮತಿ ಡಾ. ಸುನೀತಾ ಡಿ ಶೆಟ್ಟಿ ಕೆಂಜೂರು, ಶ್ರೀಮತಿ ಹೇಮಾವತಿ ಶೆಟ್ಟಿ ಮಾರಾಳಿ, ಶ್ರೀಮತಿ ಕಮಲ ಯಾನೆ ಶಾರದಾ ನಾಲ್ಕೂರು, ಮನೋಜ್ ಕುಮಾರ್ ಬಿ ಶೆಟ್ಟಿ ಕಳ್ತೂರು, ಚಂದ್ರಶೇಖರ ಪೂಜಾರಿ ಆವರ್ಸೆ ಹಾಗೂ ಡಿ.ಸಿ.ಸಿ ಬ್ಯಾಂಕ್‌ನ ಪ್ರತಿನಿಧಿ ಕೆ.ರಾಜಾರಾಮ ಶೆಟ್ಟಿ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್ ಬಿ ಶೆಟ್ಟಿ ಯವರು ಸ್ವಾಗತಿಸಿ, ಸಂಘದ ಸಿಬ್ಬಂದಿಯಾದ ಶ್ರೀ ಶಿಶಿರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಶ್ರೀಮತಿ ಡಾ. ಸುನೀತಾ ಡಿ ಶೆಟ್ಟಿ ಕೆಂಜೂರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಸದಸ್ಯರಿಗೆ ಉಡುಗೊರೆಯಾಗಿ ಶುದ್ಧ ಜೇನು ತುಪ್ಪ ವಿತರಿಸಲಾಯಿತು.



