udupimitra.in
  • October 17, 2026
  • Last Update October 17, 2026 2:40 pm
  • Brahmavara

ಬ್ರಹ್ಮಾವರ ಸಂಗೀತ ಭಾರತಿ ಕಲಾಕೇಂದ್ರದಲ್ಲಿ ಶಾರದಾ ಪೂಜೆ

ಬ್ರಹ್ಮಾವರ ಸಂಗೀತ ಭಾರತಿ ಕಲಾಕೇಂದ್ರದಲ್ಲಿ ಶಾರದಾ ಪೂಜೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಅ.೧೭: ಬ್ರಹ್ಮಾವರ ರೋಟರಿ ಭವನದಲ್ಲಿ ಸಂಗೀತ ತರಬೇತಿ, ಯೋಗ ತರಗತಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಪ್ರಮೋದ್ ಶೆಟ್ಟಿ ನುಡಿದರು. ಅವರು ಬ್ರಹ್ಮಾವರ ರೋಟರಿ ಭವನದಲ್ಲಿ ಅ..17ರಂದು ಸಂಗೀತ ಭಾರತಿ ಕಲಾಕೇಂದ್ರದ ಶಾರದಾ ಪೂಜೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ರೋಟರಿ ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿ ಸಂಗೀತ ಮಾನಸಿಕ ನೆಮ್ಮದಿ ನೀಡಲಿದೆ. ಬಾಲ್ಯದಲ್ಲೇ ಸಂಗೀತದ ಅಧ್ಯಯನಕ್ಕೆ ಪ್ರೋತ್ಸಾಹಿಸುವುದರಿಂದ ಮಕ್ಕಳಿಗೆ ಉತ್ತಮ ಹವ್ಯಾಸ ಕಲಿಸಿದಂತಾಗಲಿದೆ. ಸಂಗೀತ ಭಾರತಿ ಕಲಾ ಕೇಂದ್ರದಲ್ಲಿ ಉತ್ತಮ ತರಬೇತುದಾರರಿದ್ದು ಈ ಕಲಾ ಕೇಂದ್ರದಿಂದ ಉತ್ತಮ ಪ್ರತಿಭೆಗಳು ಹೊರಬರುವಂತಾಗಲಿ ಎಂದರು.


ಉಡುಪಿಮಿತ್ರ ಪತ್ರಿಕೆ ಸಂಪಾದಕ ಚಿತ್ತೂರು ಪ್ರಭಾಕರ ಆಚಾರ್ಯ, ರೋಟರಿ ಟ್ರಸ್ಟ್ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ರೋಟರಿ ಮಾಜಿ ಅಧ್ಯಕ್ಷ ದಿನೇಶ್ ನಾರಿ ಶುಭ ಹಾರೈಸಿದರು.


ಬ್ರಹ್ಮಾವರ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ರೊ. ಭಾಸ್ಕರ ರೈ, ರೋಟರಿ ಸದಸ್ಯ ಡೆನ್ನಿಸ್ ರಾಡ್ರಿಗಸ್, ಮುರಳೀಧರ ಆಚಾರ್ಯ ಸಾಬರಕಟ್ಟೆ, ಶ್ರೀಮತಿ ಶ್ರೀ ದೇವಿ ಅಶೋಕ್ ಆಚಾರ್ಯ ಸಾಬರಕಟ್ಟೆ ವೇದಿಕೆಯಲ್ಲಿದ್ದರು.


ಸಂಗೀತ ಭಾರತಿ ಕಲಾ ಕೇಂದ್ರದ ಸಂಚಾಲಕಿ ಭಾರತೀ ಶ್ರೀಧರ ಆಚಾರ್ಯ ಸ್ವಾಗತಿಸಿದರು. ಕಲಾಕೇಂದ್ರದ ಗುರು ವಿದ್ವಾನ್ ಅಶೋಕ್ ಆಚಾರ್ಯ ಸಾಹೇಬರಕಟ್ಟೆ ನಿರೂಪಿಸಿ ವಂದಿಸಿದರು. ನಂತರ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.

administrator

Related Articles

Leave a Reply

Your email address will not be published. Required fields are marked *

You cannot copy content of this page