udupimitra.in
  • October 11, 2026
  • Last Update October 11, 2026 6:05 pm
  • Brahmavara

ಕೋಟ ಜಿಲ್ಲಾ ಪಂಚಾಯತ್ ಕ್ಷೇತ್ರ :ಅಜಿತ್‌ಕುಮಾರ್ ಶೆಟ್ಟಿ ಆಕಾಂಕ್ಷಿ

ಕೋಟ ಜಿಲ್ಲಾ ಪಂಚಾಯತ್ ಕ್ಷೇತ್ರ :ಅಜಿತ್‌ಕುಮಾರ್ ಶೆಟ್ಟಿ ಆಕಾಂಕ್ಷಿ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕೋಟ: ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಚುನಾವಣಾ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯನ್ನು ಸರಕಾರ ಹೊರಡಿಸಿದ್ದು ಆಕ್ಷೇಪಣೆಗೆ ೧೦ ದಿನಗಳ ಕಾಲಾವಕಾಶ ನೀಡಿದೆ. ಉಡುಪಿ ಜಿಲ್ಲೆಯ ೨೮ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ ಕರಡು ಮೀಸಲಾತಿ ಪಟ್ಟಿಯಲ್ಲಿ ಬೆಳ್ಮಣ್, ಮರ್ಣೆ, ಎಲ್ಲೂರು, ಉದ್ಯಾವರ, ಕೋಟ, ಹಾಲಾಡಿ, ಬೀಜಾಡಿ, ವಂಡ್ಸೆ, ತ್ರಾಸಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ಬಹುತೇಕ ಕರಡು ಮೀಸಲಾತಿ ಪಟ್ಟಿಯೇ ಅಂತಿಮಗೊಳ್ಳಲಿದೆ ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿಯ ಕಾರ್ಯಕರ್ತರ ಅನಿಸಿಕೆಯಾಗಿದೆ. ಕರಡು ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಆಕಾಂಕ್ಷಿಗಳು ಅವಕಾಶಕ್ಕೆ ನಾಯಕರಿಗೆ ಒತ್ತಡ ಹೇರಲಾರಂಭಿಸಿರುವುದು ಕಂಡು ಬರುತ್ತಿದೆ.
ಕೋಟ ಕ್ಷೇತ್ರಕ್ಕೆ ನಾನು ಆಕಾಂಕ್ಷಿ : ಅಜಿತ್‌ಕುಮಾರ್ ಶೆಟ್ಟಿ


ಕೋಟ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಕೆಲವೊಂದಿಷ್ಟು ಆಕಾಂಕ್ಷಿಗಳ ನಡುವೆ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ನಾನು ಕೂಡ ಆಕಾಂಕ್ಷಿ ಎನ್ನುತ್ತಿದ್ದಾರೆ.
ಅಜಿತ್ ಕುಮಾರ್ ಶೆಟ್ಟಿಯವರು ಕೋಟ ಬ್ಲಾಕ್ ಕಾಂಗ್ರೆಸ್ ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಬಾರಕೂರು ಕಾಲೇಜಿನ ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಕುಂದಾಪುರ ಯುವ ಇಂಟೆಕ್ ಅಧ್ಯಕ್ಷರಾಗಿ, ವಡ್ಡರ್ಸೆ ಗ್ರಾಮ ಪಂಚಾಯತ್ ೧೮೧ನೇ ವಾರ್ಡ್ ಅಧ್ಯಕ್ಷರಾಗಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಎರಡು ಅವಧಿಗೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಬೇರೆ ಬೇರೆ ಜಿಲ್ಲೆಗಳ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಕೋಟ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರಿ ಬಸ್‌ಗಾಗಿ, ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಸ್‌ನಿಲ್ದಾಣ ನಿರ್ಮಾಣಕ್ಕೆ, ವಿಧಾನ ಪರಿಷತ್ ಸದಸ್ಯರಾದ ಡಾ.ಆರತಿ ಕೃಷ್ಣ ಹಾಗೂ ಮಂಜುನಾಥ ಭಂಡಾರಿಯವರ ಮೂಲಕ ಅನುದಾನ ತರಿಸುವಲ್ಲಿ ಮತ್ತು ಯುವ ಕಾಂಗ್ರೆಸ್ ಮೂಲಕ ಯುವಕರ ಸಮಸ್ಯೆಗಳಿಗೆ ಸದಾ ಸ್ಪಂಧಿಸುತ್ತಾ ಬಂದಿರುತ್ತಾರೆ. ನಿರಂತರವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ಬಂದಿರುವ ಹಾಗೂ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿರುವ ಅಜಿತ್ ಕುಮಾರ್ ಶೆಟ್ಟಿಯವರು ನಾನು ಕೂಡ ಕೋಟ ಜಿಲ್ಲಾ ಪಂಚಾಯತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದೇನೆ. ಯುವಕರಿಗೆ ಆಸ್ಪದ ನೀಡುವುದಾದಲ್ಲಿ ನನಗೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page