udupimitra.in
  • November 20, 2026
  • Last Update November 20, 2026 5:44 am
  • Brahmavara

3 ಲಕ್ಷ ರೂ. ಮೊತ್ತದ ರೈತಪೀಠ ಪ್ರಶಸ್ತಿಗೆ ಅರ್ಜಿ ಆಹ್ವಾನ; ಅಧಿಕೃತ ಲೋಗೋ ಅನಾವರಣ; ಉದ್ಯಮಿ ಡಾ. ರಾಮಕೃಷ್ಣ ಆಚಾರ್ ಸ್ಥಾಪಿತ ಪ್ರಶಸ್ತಿಯ 2ನೇ ಆವೃತ್ತಿ

3 ಲಕ್ಷ ರೂ. ಮೊತ್ತದ ರೈತಪೀಠ ಪ್ರಶಸ್ತಿಗೆ ಅರ್ಜಿ ಆಹ್ವಾನ; ಅಧಿಕೃತ ಲೋಗೋ ಅನಾವರಣ;  ಉದ್ಯಮಿ ಡಾ. ರಾಮಕೃಷ್ಣ ಆಚಾರ್ ಸ್ಥಾಪಿತ ಪ್ರಶಸ್ತಿಯ 2ನೇ ಆವೃತ್ತಿ
 ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಮೂಡಬಿದ್ರಿ: ಕೃಷಿ ವಲಯದ ಶ್ರಮಜೀವಿ ರೈತರನ್ನು ಗುರುತಿಸಿ ಸಮಾಜದಲ್ಲಿ ಅವರಿಗೆ ಸೂಕ್ತ ಗೌರವ ಹಾಗೂ ಮನ್ನಣೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಖ್ಯಾತ ಕೃಷಿ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಸ್ಥಾಪಿಸಿರುವ ರೈತಪೀಠ ಪ್ರಶಸ್ತಿ ೨೦೨೭ರ ಅಧಿಕೃತ ಲೋಗೋ ಅನಾವರಣಗೊಂಡಿದೆ. ಇದೇ ಸಂದರ್ಭದಲ್ಲಿ ಪ್ರಶಸ್ತಿಗೆ ಅರ್ಹ ಹಾಗೂ ಸಾಧಕ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಈ ಸಂದರ್ಭದಲ್ಲಿ ಪ್ರಶಸ್ತಿಯ ಆಶಯದ ಕುರಿತು ಮಾತನಾಡಿದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ಆಸ್ಟ್ರೇಲಿಯಾದ ಸಿಡ್ನಿ ಸೇರಿದಂತೆ ವಿಶ್ವದ ಮುಂದುವರಿದ ರಾಷ್ಟ್ರಗಳಿಗೆ ಭೇಟಿ ನೀಡಿದಾಗ ಅಲ್ಲಿ ಕೃಷಿಕರಿಗೆ ಇರುವ ರಾಯಲ್ ಗೌರವವನ್ನು ಕಂಡು ಬೆರಗಾಗಿದ್ದೇನೆ. ಆದರೆ ನಮ್ಮ ದೇಶದಲ್ಲಿ ವಿಜ್ಞಾನಿ, ವೈದ್ಯರು, ಸೈನಿಕರು ಅಥವಾ ಐಟಿ ಉದ್ಯೋಗಿಗಳಿಗೆ ಸಿಗುವ ಗೌರವ ರೈತನಿಗೆ ಸಿಗುತ್ತಿಲ್ಲ. ಆತನನ್ನು ಕಡೆಗಣಿಸುವ ಮನಸ್ಥಿತಿ ಬೆಳೆದುಬಂದಿದೆ. ವಾಸ್ತವವಾಗಿ ಹೇಳಬೇಕೆಂದರೆ ‘ರೈತನೇ ಸುಪ್ರೀಂ, ಅವನೇ ರಾಜ. ಕೃಷಿ ಕ್ಷೇತ್ರದಲ್ಲೂ ಕಾರ್ಪೊರೇಟ್ ಮಟ್ಟದ ಸಾಧನೆ ಸಾಧ್ಯವಿದೆ. ಸಣ್ಣ ಹಿಡುವಳಿಯಲ್ಲೂ ಮೀನುಗಾರಿಕೆ, ನಾಟಿ ಕೋಳಿ ಸಾಕಣೆ, ಜೇನು ಕೃಷಿ ಅಥವಾ ನೂತನ ಯಂತ್ರೋಪಕರಣ-ತಂತ್ರಜ್ಞಾನವನ್ನು ಬಳಸಿ ಲಕ್ಷಾಂತರ ರೂಪಾಯಿ ದುಡಿಯುವ ಮಾದರಿ ಕೃಷಿಕರಿದ್ದಾರೆ. ಅಂತಹ ರೈತರನ್ನು ಮುಂಚೂಣಿಗೆ ತಂದು ಗೌರವಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಒಟ್ಟು ರೂ.3 ಲಕ್ಷ ಮೊತ್ತದ ಈ ಪ್ರಶಸ್ತಿಗೆ ದಕ್ಷಿಣ ಭಾರತದ ಆರು ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಮೂವರು ಪ್ರಗತಿಪರ ಕೃಷಿಕರನ್ನು ಆಯ್ಕೆ ಮಾಡಿ, ತಲಾ ಒಂದು ಲಕ್ಷ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಣ್ಣ ಮತ್ತು ಮಧ್ಯಮ ಜಮೀನಿನಲ್ಲಿ ಸುಸ್ಥಿರ, ಸಾವಯವ, ಗೋ-ಆಧಾರಿತ ಹಾಗೂ ತಂತ್ರಜ್ಞಾನಾಧಾರಿತ ಮಾದರಿ ಕೃಷಿ ಮಾಡುವ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 15 ಡಿಸೆಂಬರ್ 2026.

www.gaudhama.com ನಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಅರ್ಹ ರೈತರು ತಾವೇ ಆ ಅರ್ಜಿ ತುಂಬಿಸಿ ಕಳುಹಿಸಬಹುದು. ಅಥವಾ ಇತರರು ಅರ್ಹ ರೈತರನ್ನು ಗುರುತಿಸಿ ನಾಮ ನಿರ್ದೇಶನ ಮಾಡಬಹುದು. ಹೆಚ್ಚಿನ ಮಾಹಿತಿ 9164561789 ಅಥವಾ 9606429200 ಸಂಖ್ಯೆಯನ್ನು ಸಂಪರ್ಕಿಸಬಹುದು.

ಕಳೆದ ವರ್ಷ ೨೦೦ಕ್ಕೂ ಹೆಚ್ಚು ಭತ್ತ ತಳಿಗಳನ್ನು ಸಂರಕ್ಷಿಸಿರುವ ಬಿ.ಕೆ. ದೇವರಾಯ ಮಿತ್ತಬಾಗಿಲು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಕೃಷಿ ತಜ್ಞ, ಸಾಹಿತಿ ಡಾ. ನರೇಂದ್ರ ರೈ ದೇರ್ಲ, ಶಿಕ್ಷಣ ತಜ್ಞ ಮತ್ತು ಉದ್ಯಮಿ ದೇವಿಪ್ರಸಾದ್ ಶೆಟ್ಟಿ, ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಜ್ವಲ್ ಆಚಾರ್, ಸಂಸ್ಥೆಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಹಿರಿಯ ನಿರ್ದೇಶಕ ದೇವ್‌ರಾಜ್ ಎಸ್. ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page