udupimitra.in
  • November 24, 2026
  • Last Update November 24, 2026 3:02 pm
  • Brahmavara

ಸಾವಯವ ಅಡಿಕೆ ಸಸಿ ಬೆಳೆಸುವಿಕೆಯಲ್ಲಿ ಸಾಧನೆ: ಮಡ್ಲಗೇರಿ ಬಾಬು ಆಚಾರ್ಯರ ಯಶೋಗಾಥೆ

ಸಾವಯವ ಅಡಿಕೆ ಸಸಿ ಬೆಳೆಸುವಿಕೆಯಲ್ಲಿ ಸಾಧನೆ: ಮಡ್ಲಗೇರಿ ಬಾಬು ಆಚಾರ್ಯರ ಯಶೋಗಾಥೆ
  • ಚಿತ್ತೂರು ಪ್ರಭಾಕರ ಆಚಾರ್ಯ
  • ಉಡುಪಿಮಿತ್ರ ಪತ್ರಿಕೆ ಸುದ್ಧಿ:
  • ಕುಂದಾಪುರ: ಸಾವಯವ ಕೃಷಿ ಪದ್ಧತಿಯ ಮೂಲಕ ಅಡಿಕೆ ಕೃಷಿಯಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ತಾಲೂಕಿನ ನಾವುಂದ ಸಮೀಪದ ಹೇರೂರು ಗ್ರಾಮದ ಮಡ್ಲಗೇರಿ ಬಾಬು ಆಚಾರ್ಯ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು, ಸ್ವತಃ ತೋಟ ನಿರ್ವಹಣೆಯೊಂದಿಗೆ ನೂರಾರು ಕೃಷಿಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಕಡಿಮೆ ಖರ್ಚು, ಸಾವಯವ ಪದ್ಧತಿಗೆ ಒತ್ತು:
ರಾಸಾಯನಿಕ ಮುಕ್ತ ಸಾವಯವ ಕೃಷಿ, ಕಡಿಮೆ ನೀರಿನ ಬಳಕೆ ಹಾಗೂ ಜೀವಾಮೃತದಂತಹ ನೈಸರ್ಗಿಕ ಗೊಬ್ಬರಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯುವ ವಿಧಾನವನ್ನು ಇವರು ರೈತರಿಗೆ ತಿಳಿಸಿಕೊಡುತ್ತಿದ್ದಾರೆ. ಕೃಷಿಯ ಮೂಲಕವೂ ಸ್ವಾಭಿಮಾನದ ಮತ್ತು ಆರ್ಥಿಕ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಇವರ ಈ ಕೃಷಿ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತವು ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಸಂಘ ಸಂಸ್ಥೆಗಳು ರೈತಮಿತ್ರ ಎಂಬ ಬಿರುದಿನಿಂದಲೂ ಗುರುತಿಸಿ ಗೌರವಿಸಿವೆ.

ವಾರ್ಷಿಕ 1ಲಕ್ಷಕ್ಕೂ ಅಧಿಕ ಸಸಿಗಳ ತಯಾರಿ:
ಬಾಬು ಆಚಾರ್ಯ ಅವರು ಉಜಿರೆ, ಪುತ್ತೂರು ಸೇರಿದಂತೆ ವಿವಿಧೆಡೆಯಿಂದ ಉತ್ತಮ ತಳಿಯ ಅಡಿಕೆ ಬೀಜಗಳನ್ನು ತರಿಸಿ, ತಮ್ಮ ನರ್ಸರಿಯಲ್ಲಿ ಸ್ಟ್ಯಾಂಡ್ ವಿಧಾನದ ಮೂಲಕ ಮೊಳಕೆ ಬರಿಸುತ್ತಾರೆ. ಯಾವುದೇ ರಾಸಾಯನಿಕ ಬಳಸದೆ ಕೇವಲ ಜೀವಾಮೃತ ಬಳಸಿ ವಾರ್ಷಿಕ ಸುಮಾರು ೧ ಲಕ್ಷಕ್ಕೂ ಅಧಿಕ ಗುಣಮಟ್ಟದ ಅಡಿಕೆ ಸಸಿಗಳನ್ನು ಬೆಳೆಸಿ, ರೈತರಿಗೆ ಕಡಿಮೆ ದರದಲ್ಲಿ ವಿತರಿಸುತ್ತಿದ್ದಾರೆ.

ವಿವಿಧ ಜಿಲ್ಲೆಗಳಿಗೆ ಪೂರೈಕೆ:
ಇವರ ನರ್ಸರಿಯಲ್ಲಿ ಬೆಳೆದ ಸಸಿಗಳಿಗೆ ಉಡುಪಿ, ಮಂಗಳೂರು, ಶಿವಮೊಗ್ಗ, ಸಾಗರ ಹಾಗೂ ಶಿರಸಿ ಭಾಗಗಳಿಂದ ಹೆಚ್ಚಿನ ಬೇಡಿಕೆಯಿದೆ. ಸಸಿಗಳನ್ನು ನೀಡುವುದರ ಜೊತೆಗೆ ಗಿಡಗಳಿಗೆ ನೀಡಬೇಕಾದ ನೀರಿನ ಪ್ರಮಾಣ ಹಾಗೂ ಗೊಬ್ಬರ ನಿರ್ವಹಣೆಯ ಬಗ್ಗೆಯೂ ಇವರು ಸಂಪೂರ್ಣ ಮಾಹಿತಿ ನೀಡುತ್ತಾರೆ.

ನರ್ಸರಿಯಲ್ಲಿ 50,000 ಸಸಿಗಳಿವೆ :
ಬಾಬು ಆಚಾರ್ಯರಲ್ಲಿ ಗಿಡಗಳನ್ನು ಕೊಂಡು ಹೋದ ಅನೇಕ ರೈತರು ಕೇವಲ ೪ ವರ್ಷದೊಳಗೆ ಇಳುವರಿಯನ್ನು ಪಡೆಯುತ್ತಿರುವುದರಿಂದ ಇವರ ಗಿಡಗಳಿಗೆ ಸಾಕಷ್ಟು ಬೇಡಿಕೆ ಇದೆ. ಬಾಬು ಆಚಾರ್ಯ ಅವರ ನರ್ಸರಿಯಲ್ಲಿ ಪ್ರಸ್ತುತ ೫೦,೦೦೦ ಅಡಿಕೆ ಸಸಿಗಳಿವೆ. ಮಾರಾಟಕ್ಕೆ ಸಿದ್ದವಾಗಿರುವ ಈ ಗಿಡಗಳಿಗಾಗಿ ರೈತರು ಅವರ 9980270485 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.


ಬಾಬು ಆಚಾರ್ಯರ ವಿಳಾಸ :
ಬಾಬು ಆಚಾರ್ಯ, ಮಡ್ಲಗೇರಿ
ಕೃಷಿಕರು
ಅಂಚೆ : ಮಡ್ಲಗೇರಿ, ಹೇರೂರು
ವಯಾ : ನಾವುಂದ, ಬೈಂದೂರು ತಾಲೂಕು
ಮೊಬೈಲ್ : 9980270485

administrator

Related Articles

Leave a Reply

Your email address will not be published. Required fields are marked *

You cannot copy content of this page