.
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಜೂ.17: ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಇದರ ನೀಲಾವರ ಶಾಖೆಯಲ್ಲಿ ಬ್ಯಾಂಕಿಂಗ್ ವಿಭಾಗವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿಯವರು ಮಾತನಾಡಿ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ 100 ವರ್ಷಗಳ ಇತಿಹಾಸವಿದ್ದು ಪ್ರತೀ ವರ್ಷವೂ ಸಂಘ ಪ್ರಗತಿ ಹೊಂದುತ್ತಾ ಬಂದಿದೆ. ಇದೀಗ ನೀಲಾವರ ಶಾಖೆ ಸೇರಿದಂತೆ ಒಟ್ಟು 9 ಶಾಖೆಗಳು ಬ್ಯಾಂಕಿಂಗ್ ವ್ಯವಹಾರ ಹಾಗೂ ಪಡಿತರ ವಿತರಣೆಯನ್ನು ಮಾಡುತ್ತಿವೆ. ನೀಲಾವರ ಶಾಖೆಯಲ್ಲಿ ಪಡಿತರ ವ್ಯವಸ್ಥೆ ಮಾತ್ರ ಇದ್ದು ಸ್ಥಳಿಯ ಸದಸ್ಯರು ಬ್ಯಾಂಕಿಂಗ್ ಶಾಖೆ ಆರಂಭಿಸುವಂತೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವಿಭಾಗವನ್ನು

ಆರಂಭಿಸಲಾಗಿದೆ. ಸಂಸ್ಥೆಯ ಯಶಸ್ಸಿಗೆ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಇರ್ಮಾಡಿ ತಿಮ್ಮಪ್ಪ ಹೆಗ್ಡೆಯವರು ಹಾಗೂ ಉಪಾಧ್ಯಕ್ಷರಾಗಿದ್ದ ವೆಂಕಟ್ರಾಯ ನಾಯಕ್‌ರವರು ಹಾಕಿಕೊಟ್ಟ ಮಾರ್ಗದಲ್ಲೇ ಮುಂದುವರಿಯುತ್ತಿದ್ದು ಸಂಘದ ಬೆಳವಣಿಗೆ ಹಾಗೂ ಸದಸ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುತ್ತಾ ಬಂದಿದ್ದೇವೆ ಎಂದರು.

ಪಡಿತರ ವಿಭಾಗದಲ್ಲಿ ಸಂಘದ ಹಿರಿಯ ಸದಸ್ಯರಾದ ನೀಲಾವರ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಘುರಾಮ ಮಧ್ಯಸ್ಥ, ದೇವಸ್ಥಾನದ ಹಿರಿಯ ಅರ್ಚಕ ಚಂದ್ರಶೇಖರ ಅಡಿಗ ಹಾಗೂ ಸ್ಥಳಿಯರಾದ ಸುಧೀರ್‌ಕುಮಾರ್ ಶೆಟ್ಟಿ ನೀಲಾವರ, ನೀಲಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಬೇಬಿ ಎಳ್ಳಂಪಳ್ಳಿ, ಪ್ರಕಾಶ್ ದೇವಾಡಿಗ, ರಾಖಿ ಮಸ್ಕರೇನಸ್, ಸವಿತಾ ಕೊಂಬನಾಯ್ಕ್, ನಾರಾಯಣ ಶೇರಿಗಾರ, ಗುಣಶೀಲ ಮರಕಾಲ, ಫೀಲೋಮಿನಾ ದೀಪ ಬೆಳಗಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಸ್ಥಳಿಂiiರಾದ ನೀಲಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್ ನೀಲಾವರ, ಆರೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಗುರುರಾಜ್ ರಾವ್ ಆರೂರು, ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೀವ ಕುಲಾಲ್ ಆರೂರು, ನೀಲಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಮೇಶ್ ಪೂಜಾರಿ ನೀಲಾವರ, ಸಹಕಾರಿ ಸಂಘದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟರಮಣ ಭಟ್ ಹಾಗೂ ನಿವೃತ್ತ ಶಾಖಾಧಿಕಾರಿ ಜಯ ಮರಕಾಲ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ಜ್ಞಾನ ವಸಂತ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ರಾಜೇಶ್ ಮರಕಾಲ, ನಳಿನಿ ಪ್ರದೀಪ್ ರಾವ್, ನಾಗವೇಣಿ ಪಂಡರೀನಾಥ, ಶ್ರೀನಿವಾಸ ಶೆಟ್ಟಿ, ದಯಾನಂದ ನಾಯಕ್, ಉಲ್ಲಾಸ್ ನಾಯಕ್, ಸಂತೋಷ ಜತ್ತನ್, ಎಸ್. ನಾರಾಯಣ, ನಿತ್ಯಾನಂದ ನಾಯ್ಕ್ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದ್ದು, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಭಾರತಿ ವಂದಿಸಿದರು. ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ನಿರೂಪಿಸಿದರು.



