• May 10, 2026
  • Last Update May 7, 2026 4:06 pm
  • Brahmavara

ಡಾ.ಅರುಣ್‌ಕುಮಾರ್ ಶೆಟ್ಟಿಯವರಿಗೆ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ

ಡಾ.ಅರುಣ್‌ಕುಮಾರ್ ಶೆಟ್ಟಿಯವರಿಗೆ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ

ಅತ್ಯಂತ ಕ್ರೀಯಾಶೀಲ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಎಲ್ಲೆಡೆ ಉತ್ತಮ ಹೆಸರನ್ನು ಗಳಿಸಿರುವ ಮಂಗಳೂರಿನ ಪಶುಪಾಲನ ಇಲಾಖೆಯ ಉಪನಿರ್ದೇಶಕ ಕುಂದಾಪುರ ಅಂಕದಕಟ್ಟೆಯ ಡಾ.ಅರುಣ್‌ಕುಮಾರ್ ಶೆಟ್ಟಿ ಎನ್. ಇವರಿಗೆ ಕರ್ನಾಟಕ ರಾಜ್ಯ ಸರಕಾರ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ೨೦೨೨ನೇ ಸಾಲಿನಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿತ್ತು.
ಅರುಣ್‌ಕುಮಾರ್ ಶೆಟ್ಟಿಯವರು ಪಶುಪಾಲನ ಇಲಾಖೆಯಲ್ಲಿ ವಂಡ್ಸೆ, ಕೋಟ, ಬ್ರಹ್ಮಾವರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು. ನಂತರ ಪಶುಪಾಲನಾ ಇಲಾಖೆಯಲ್ಲಿ ದ.ಕ. ಜಿಲ್ಲಾ ಉಪನಿರ್ದೇಶಕರಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಮಂಗಳೂರು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ಮೂಡುಬಿದ್ರೆ ತಾಲೂಕು ಪಂಚಾಯತ್‌ನ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page