• February 9, 2026
  • Last Update February 2, 2026 6:06 pm
  • Brahmavara

ಆತ್ರಾಡಿ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ ೧೦೦% ಫಲಿತಾಂಶ ; ಬೈಂದೂರು ಶೈಕ್ಷಣಿಕ ವಲಯದಲ್ಲಿ ಪ್ರಥಮ ಸ್ಥಾನ

ಆತ್ರಾಡಿ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ ೧೦೦% ಫಲಿತಾಂಶ ; ಬೈಂದೂರು ಶೈಕ್ಷಣಿಕ ವಲಯದಲ್ಲಿ ಪ್ರಥಮ ಸ್ಥಾನ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರಿಕೆ ಸುದ್ಧಿ :

ವಂಡ್ಸೆ, ಮೇ.೪: ಕುಂದಾಪುರ ತಾಲೂಕಿನ ಆತ್ರಾಡಿಯಲ್ಲಿರುವ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ 2024-25ನೇ ಸಾಲಿನ ಎಸ್. ಎಸ್. ಎಲ್.ಸಿ ಫಲಿತಾಂಶದಲ್ಲಿ ಶೇ. 100% ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಪ್ರತೀ ವರ್ಷ ಶೇ.100 ಫಲಿತಾಂಶ ದಾಖಲಿಸುತ್ತಾ ಬಂದಿದೆ. ಈ ಬಾರಿ ಬೈಂದೂರು ಬಿಇಓ ಕಚೇರಿ ವ್ಯಾಪ್ತಿಯಲ್ಲಿ ಶಾಲಾವಾರು ಫಲಿತಾಂಶದಲ್ಲಿ ಈ ಸಂಸ್ಥೆ ಪ್ರಥಮ ಸ್ಥಾನ ಗಳಿಸಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಒಟ್ಟು ೩೪ ಶಾಲೆಗಳಲ್ಲಿ ಈ ಶಾಲೆ ಮೊದಲ ಸ್ಥಾನ ಗಳಿಸಿದೆ.
ನಿಶ್ಮಿತಾ ಪೂಜಾರಿ ರಾಜ್ಯಕ್ಕೆ 10ನೇ ರ್‍ಯಾಂಕ್ :
ಈ ಬಾರಿ ನಿಶ್ಮಿತಾ ಪೂಜಾರಿ(೯೯%) 625ರಲ್ಲಿ 616 ಅಂಕಗಳನ್ನು ಪಡೆದು ರಾಜ್ಯಕ್ಕೆ 10ನೇ ರ್‍ಯಾಂಕ್ ಗಳಿಸಿ ಸಂಸ್ಥೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಹಾಗೂ ಸಂಚಿತಾ (೯೮%) 625ರಲ್ಲಿ 612 ಅಂಕಗಳನ್ನು ಗಳಿಸಿ ಸಂಸ್ಥೆಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಪರೀಕ್ಷೆಗೆ ಕುಳಿತ 47 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ ಉಳಿದ 20ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಬ್ಬ ವಿದ್ಯಾರ್ಥಿಯು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶವನ್ನು ದಾಖಲಿಸಿದ್ದಕ್ಕಾಗಿ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಶಿಕ್ಷಕ ವೃಂದದವರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *