ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಜೂ.೨೧: ಬಿಲ್ಲವ ಸೇವಾ ಸಂಘ(ರಿ.) ಉಪ್ಪೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಹಾಗೂ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮ ಜೂ.೨೧ರಂದು ಪಿಳ್ಕಳ ಗರೋಡಿ ಮುಂಭಾಗ ನಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಉಪ್ಪೂರಿನ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ ಗುರು ಮಂದಿರ ಹಾಗೂ ಸಭಾಭವನಕ್ಕೆ ೫ ಲಕ್ಷ ನೀಡಿದ್ದು ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸುತ್ತೇನೆ ಎಂದರು.

ಅಧ್ಯಕ್ಷತೆಯನ್ನು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾಜು ಪೂಜಾರಿ ವಹಿಸಿದ್ದು ಅವರು ಮಾತನಾಡಿ ೨೦ ಸೆಂಟ್ಸ್ ಜಾಗದಲ್ಲಿ ಗುರು ಮಂದಿರ ಹಾಗೂ ಸಭಾಭವನ ನಿರ್ಮಾಣಗೊಳ್ಳಲಿದ್ದು ಸಮಾಜದ ಎಲ್ಲರೂ ಸಹಕಾರ ನೀಡ ಬೇಕೆಂದು ಮನವಿ ಮಾಡಿದರು.

ಮುಖ್ಯ ಅತಿಥಿ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ ಉಪ್ಪೂರು ಬಿಲ್ಲವ ಸಮಾಜಸೇವಾ ಸಂಘದ ಗುರು ಮಂದಿರ ಹಾಗೂ ಸಭಾಭವನದ ಕಟ್ಟಡಕ್ಕೆ ಸೂಕ್ತ ಜಾಗದಲ್ಲಿ ಸಂಕಲ್ಪ ನೆರವೇರಿದ್ದು ಕಟ್ಟಡದ ಕೆಲಸ ಶೀಘ್ರ ನೆರವೇರಲಿ ಎಂದು ಶುಭ ಹಾರೈಸಿದರು.

ರಾಷ್ಟ್ರೀಯ ಬಿಲ್ಲವ ಸಂಘದ ಉಪಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ, ತೋನ್ಸೆ ಗರೋಡಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಜತ್ತನ್, ಉಪ್ಪೂರು ಬಂಟರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಅಮ್ಮುಂಜೆ, ನ್ಯಾಯವಾದಿ ಸಂಕಪ್ಪ ಎ, ಹಾವಂಜೆ ಬಿಲ್ಲವ ಸಂಘದ ಅಧ್ಯಕ್ಷ ದೋಗು ಪೂಜಾರಿ ಹಾವಂಜೆ, ಉಗ್ಗೆಲ್‌ಬೆಟ್ಟು ಬ್ರಹ್ಮಬೈದೇರು ಹಾಗೂ ಚಿಕ್ಕಮ್ಮ ದೇವಿ ಗರೋಡಿ ಅಧ್ಯಕ್ಷ ದಯಾನಂದ ಕರ್ಕೇರ, ಉಪ್ಪೂರು ಯುವಜನ ಮಂಡಲದ ಅಧ್ಯಕ್ಷ ರಾಜೇಶ್ ರಾವ್ ಉಪ್ಪೂರು, ಉಪ್ಪೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಪಿಳ್ಕಲ ಗರೋಡಿ ಅಧ್ಯಕ್ಷ ಸಾಧು ಕೆ. ಪೂಜಾರಿ, ಮಾಜಿ ಅಧ್ಯಕ್ಷರಾದ ಸಂತೋಷ್ ಕೊಟ್ಯಾನ್ ಹಾಗೂ ಸಂಜೀವ ಪೂಜಾರಿ ಮಾಯಾಡಿ ಉಪಸ್ಥಿತರಿದ್ದರು.

ಸಭೆಯಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರಗತಿ ಕೆ.ಕುಂದರ್ ಮತ್ತು ರಾಕೇಶ್ ಕಟಪಾಡಿ, ಅವರನ್ನು ಸನ್ಮಾನಿಸಲಾಯಿತು.
ಆಡಳಿತ ಸಮಿತಿ ಅಧ್ಯಕ್ಷ ದಯಾನಂದ ಕರ್ಕೇರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು.ಚಾರ್ವಿಕ ಪ್ರಾರ್ಥಿಸಿದರು. ಕಾರ್ಯದರ್ಶಿ ಉಮೇಶ್ ಜತ್ತನ್ ಸ್ವಾಗತಿಸಿದ್ದು ಧರಣೇಶ್ ಎಸ್.ಅಮೀನ್ ವಂದಿಸಿದರು. ಕಾರ್ಯಕ್ರಮವನ್ನು ಅಮೃತ್ ರಾಜ್ ನಿರೂಪಿಸಿದರು.



