udupimitra.in
  • September 24, 2026
  • Last Update September 22, 2026 7:14 am
  • Brahmavara

ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.)ದ ಉಪಾಧ್ಯಕ್ಷರಾಗಿ ರವೀಂದ್ರ ಕಾಮತ್ ಆಯ್ಕೆ

ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.)ದ ಉಪಾಧ್ಯಕ್ಷರಾಗಿ ರವೀಂದ್ರ ಕಾಮತ್ ಆಯ್ಕೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕೋಟ, ಜು.೨೬: ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.)ದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರವೀಂದ್ರ ಕಾಮತ್ ಗುಂಡ್ಮಿ ಅವರು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗೊಂಡಿದ್ದಾರೆ.


ಈ ಸಂದರ್ಭ ಸಂಘದ ಅಧ್ಯಕ್ಷ ಕೃಷ್ಣ ಕಾಂಚನ್, ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ಕೋಟ ಬ್ಲಾಕ್ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷ ಶಂಕರ ಕುಂದರ್, ನಿರ್ದೇಶಕರಾದ ಮಂಜುನಾಥ ಗಿಳಿಯಾರು, ಉದಯಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ, ರಂಜಿತ್ ಕುಮಾರ್, ಚಂದ್ರ ಪೂಜಾರಿ, ಅಜಿತ್ ದೇವಾಡಿಗ, ದಿನಕರ ಶೆಟ್ಟಿ, ಶೇಖರ ಮರಕಾಲ, ಶ್ರೀಮತಿ ರಶ್ಮಿಕಾ, ಶ್ರೀಮತಿ ವಸಂತಿ ಅಚ್ಚುತ ಪೂಜಾರಿ, ಶ್ರೀಮತಿ ಪ್ರೇಮ, ಕೃಷಿಕರಾದ ಭಾಸ್ಕರ ಶೆಟ್ಟಿ, ಅಚ್ಚುತ ಪೂಜಾರಿ ಕಾರ್ಕಡ ಹಾಗೂ ರಾಜಾರಾಮ ಶೆಟ್ಟಿ ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

administrator

Related Articles

Leave a Reply

Your email address will not be published. Required fields are marked *

You cannot copy content of this page