udupimitra.in
  • September 24, 2026
  • Last Update September 22, 2026 7:14 am
  • Brahmavara

ಹಾರ್ದಳ್ಳಿ ಮಂಡಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮಹೇಶ್ ಶೆಣೈ ಗಾವಳಿ, ಕಾರ್ಯದರ್ಶಿಯಾಗಿ ಕಿರಣ್ ಜನ್ಯಾಡಿ ಆಯ್ಕೆ

ಹಾರ್ದಳ್ಳಿ ಮಂಡಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮಹೇಶ್ ಶೆಣೈ ಗಾವಳಿ, ಕಾರ್ಯದರ್ಶಿಯಾಗಿ ಕಿರಣ್ ಜನ್ಯಾಡಿ ಆಯ್ಕೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಶಿರಿಯಾರ, ಜು..೧೯: ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್‌ಕುಮಾರ್ ಕೊಡ್ಗಿಯವರ ಉಪಸ್ಥಿತಿಯಲ್ಲಿ ನಡೆದ ಹಾರ್ದಳ್ಳಿ ಮಂಡಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಸಭೆಯಲ್ಲಿ ಮಹೇಶ್ ಶೆಣೈ ಗಾವಳಿ ಇವರನ್ನು ಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ಹಾಗೂ ಕಾರ್ಯದರ್ಶಿಯಾಗಿ ಕಿರಣ್ ಜನ್ಯಾಡಿಯವರನ್ನು ಆಯ್ಕೆ ಮಾಡಲಾಯಿತು.


ಈ ಸಂದರ್ಭ ಕುಂದಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಕಾರ್ಯದರ್ಶಿ ಸುಧೀರ್ ಕೆ.ಎಸ್, ಮಂಡಲದ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ತಾಲೂಕು ಪಂಚಾಯತ್ ಮಾಜಿ ಸದಸ್ಯರುಗಳಾದ ಪ್ರದೀಪ್ ಕುಮಾರ್ ಶೆಟ್ಟಿ ಕನ್ನಾರ್‌ಜಡ್ಡು ಹಾಗೂ ಶಂಕರ ಮೊಗವೀರ ಮತ್ಯಾಡಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಯಪ್ರಕಾಶ್ ಶೆಟ್ಟಿ, ದೀನ್‌ಪಾಲ್ ಶೆಟ್ಟಿ ಮೊಳಹಳ್ಳಿ, ದೀಪಕ್ ಶೆಟ್ಟಿ ಹಾಲಾಡಿ, ನಾಗೇಶ್ ಪಡಿಯಾರ್ ಗಾವಳಿ, ಅತುಲ್ ಕುಮಾರ್ ಶೆಟ್ಟಿ ಬಿದ್ಕಲ್‌ಕಟ್ಟೆ, ಹಾಲಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜನಾರ್ದನ (ಜಾಣ)ಹಾಲಾಡಿ, ಚಂದ್ರಶೇಖರ ಶೆಟ್ಟಿ ಜನ್ಯಾಡಿ, ಹಾಗೂ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page