ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ : ಪ್ರತಿಷ್ಠಿತ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ೨೦೨೫-೨೬ ನೇ ಸಾಲಿನ ಜಂಟಿ ಪ್ರಶಸ್ತಿಗಳು ಲಭಿಸಿವೆ. ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ “ ಅತ್ಯುತ್ತಮ ಸಹಕಾರ ಸಂಘ ರಾಜ್ಯ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ “ ಅತ್ಯುತ್ತಮ ಸಂಸ್ಥೆ ಪ್ರಶಸ್ತಿ“ ದೊರಕಿದೆ.

111 ವರ್ಷ ಇತಿಹಾಸವನ್ನು ಹೊಂದಿರುವ ಉಡುಪಿ ಜಿಲ್ಲೆಯ ಸಹಕಾರಿ ರಂಗದ ಅಗ್ರಗಣ್ಯ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘವು 2025-26 ನೇ ಸಾಲಿನಲ್ಲಿ 1070.00 ಕೋಟಿ ರೂ. ವ್ಯವಹಾರ ನಡೆಸಿದೆ. ಸಂಘವು 31-03-2026 ಕ್ಕೆ 6.16 ಕೋಟಿ ರೂಗಳ ಪಾಲು ಬಂಡವಾಳ ಹೊಂದಿದೆ. ರೂ. 244.76 ಕೋಟಿಗೂ ಮಿಕ್ಕಿ ಠೇವಣೆ ಸಂಗ್ರಹಿಸಿ ರೂ. 182.50 ಕೋಟಿಗೂ ಮಿಕ್ಕಿ ಸಾಲ ನೀಡಿದೆ. ಈ ಸಂಘದಲ್ಲಿ ಸುಮಾರು ಶೇ.೯೯ ರಷ್ಟು ಸಾಲ ವಸೂಲಾತಿಯಾಗಿದೆ. 31-03-2026 ಕ್ಕೆ ಸಂಘವು ರೂ.31.72 ಕೋಟಿ ವಿವಿಧ ನಿಧಿಗಳನ್ನು ಹೊಂದಿದ್ದು, ರೂ. 113.35ಕೋಟಿ ವಿವಿಧ ಬ್ಯಾಂಕ್ ಗಳಲ್ಲಿ ವಿನಿಯೋಗಿಸಿದೆ. ಸುಮಾರು ರೂ. 10 ಕೋಟಿಯಷ್ಟು ಸ್ಥಿರ ಚರ ಆಸ್ತಿಯನ್ನು ಸಂಘವು ಹೊಂದಿದೆ. ೨೦೨೫-೨೬ನೇ ಸಾಲಿನಲ್ಲಿ ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ “ಅತ್ಯುತ್ತಮ ಸಹಕಾರ ಸಂಘ ರಾಜ್ಯ ಪ್ರಶಸ್ತಿ“ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕಿನ “ಅತ್ಯುತ್ತಮ ಸಂಸ್ಥೆ ಪ್ರಶಸ್ತಿ“ ಯಿಂದ ಗೌರವಿಸಿದೆ.

ಈ ಸಾಧನೆಗಾಗಿ ಸಂಘದ ಅಧ್ಯಕ್ಷರಾದ ಶ್ರೀ. ರಾಜೇಶ ಶೆಟ್ಟಿ ಬಿರ್ತಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ. ಹೆಚ್. ಸುಭಾಶ್ಚಂದ್ರ ಶೆಟ್ಟಿಯವರನ್ನು ದಿನಾಂಕ ಅ.೨೨ ರಂದು ಮಂಗಳೂರಿನಲ್ಲಿ ನಡೆದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್ ಇವರು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಮಾರಂಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ. ಕಮಲಾಕ್ಷ ಹೆಬ್ಬಾರ್ , ಶ್ರೀಮತಿ ನಳಿನಿ ಪ್ರದೀಪ್ ರಾವ್ , ಶ್ರೀಮತಿ ನಾಗವೇಣಿ ಗಾಣಿಗ, ಶ್ರೀ. ದಯಾನಂದ ನಾಯಕ್, ಶ್ರೀ. ಶ್ರೀನಿವಾಸ್ ಶೆಟ್ಟಿ, ಶ್ರೀ. ಸಂತೋಷ್ ಜತ್ತನ್, ಶ್ರೀ. ಎಸ್. ನಾರಾಯಣ, ಶ್ರೀ. ನಿತ್ಯಾನಂದ ನಾಯ್ಕ್, ಸಹಕಾರಿ ಯೂನಿಯನ್ನ ಅಧ್ಯಕ್ಷರಾದ ಶ್ರೀ. ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎಲ್ಲಾ ನಿರ್ದೇಶಕರು ಮುಂತಾದವರು ಉಪಸ್ಥಿತರಿದ್ದರು.



