ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ ಸೆ.೫: ಓರ್ವ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ನನಗೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿದ್ದ ಈ ಕಾಲದಲ್ಲಿ ಸಂಸದನಾಗಿರುವುದು ಅಭಿಮಾನವೆನಿಸಿದೆ. ಅದರೊಂದಿಗೆ ರಾಜ್ಯ ಸರ್ಕಾರಕ್ಕೆ ಒಂದು ಮನವಿ. ಕೇಂದ್ರ ಸರ್ಕಾರ ಪಾರ್ಲಿಮೆಂಟಿನಲ್ಲಿ ತಂದಿರುವ ಒಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಮತ್ತು ರಾಷ್ಟ್ರ ಭಕ್ತಿಯ ಸಂಕೇತವಾಗಿದ್ದು ಒಂದೇ ಮಾತರಂನ್ನು ರಾಜ್ಯ ಸರ್ಕಾರ ಗೌರವಿಸಬೇಕೆಂದು ಶಿಕ್ಷಕರ ಸಮಾವೇಶದ ಮೂಲಕ ಆಗ್ರಹಿಸುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆಯ ಆರಂಭದಲ್ಲಿ ಒಂದೇ ಮಾತರಂ ಹಾಡದಿರುವ ಬಗ್ಗೆ ಪರೋಕ್ಷವಾಗಿ ಜಿಲ್ಲಾಡಳಿತಕ್ಕೆ ಟಾಂಗ್ ನೀಡಿದರು.ಅವರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಮನ್ವಯಾಧಿಕಾರಿಗಳ ಕಚೇರಿ, ಬ್ರಹ್ಮಾವರ ವಲಯ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ ಸಹಯೋಗದಲ್ಲಿ ಬ್ರಹ್ಮಾವರ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಯುವ ಜನತೆಗೆ ಸ್ವಂತ ಕಾಲ ಮೇಲೆ ನಿಂತುಕೊಂಡು ಬದುಕು ಕಟ್ಟಿಕೊಳ್ಳಲು ಹಾಗೂ ಶಿಕ್ಷಣದ ಜೊತೆಯಲ್ಲಿ ಕೌಶಲ್ಯ ಅಭಿವೃಧ್ಧಿಗೊಳಿಸಲು ಬೇಕಾದಂತ ಪಾಲಿಸಿ ತಂದಿರುವ ನ್ಯೂ ಎಜುಕೇಶನ್ ಪಾಲಿಸಿ ಯಾಕೆ ಅನುಷ್ಟಾನವಾಗುತ್ತಿಲ್ಲ? ಎನ್‌ಎಪಿ ಅನುಷ್ಟಾನವಾಗಬೇಕೆಂದು ಯಾಕೆ ಶಿಕ್ಷಕರು ಯಾಕೆ ಒತ್ತಾಯಿಸುತ್ತಿಲ್ಲ ಎಂಬ ಆತಂಕ ಹುಟ್ಟಿಸಿದೆ ಎಂದು ಉಡುಪಿ ಚಿಕ್ಕ ಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ನುಡಿದರು.
ಕೃತಕಬುದ್ದಿ ಮತ್ತೆಗೆ ಮೆದುಳು ಇರಬಹುದು, ಆದರೆ ಅದಕ್ಕೆ ಹೃದಯ ಬರಲು ಸಾಧ್ಯವಿಲ್ಲ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಕ್ಕಳನ್ನು ರಾಷ್ಟ್ರಪ್ರೇಮಿಗಳಾಗಿ, ರಾಷ್ಟ್ರದ ಅಸ್ತಿಗಳಾಗಿ ಬೆಳೆಸುವಲ್ಲಿ ಹೃದಯವಂತ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಉಡುಪಿ ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಖಾಸಗಿ ವಲಯದವರ ಕೊಡುಗೆ ಸಾಕಷ್ಟಿದೆ. ಆರ್ಥಿಕವಾಗಿಯೂ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಈ ಬಾರಿ ರಾಷ್ಟ್ರಮಟ್ಟದಲ್ಲಿ 6 ಗ್ರಾಮ ಪಂಚಾಯತ್‌ಗಳಿಗೆ ಪ್ರಶಸ್ತಿ ಬಂದಿದ್ದು ಅದರಲ್ಲಿ ೫ ಪಂಚಾಯತ್‌ಗಳು ಉಡುಪಿ ಜಿಲ್ಲೆಯ ಪಂಚಾಯತ್‌ಗಳಾಗಿರುವುದು ಹೆಮ್ಮೆಯ ಸಂಗತಿ ಎಂದರು.

ನಿವೃತ್ತ ಪ್ರಾಂಶುಪಾಲ ಬಿ.ಬಾಲಕೃಷ್ಣ ಶೆಟ್ಟಿಯವರು ಮಾತನಾಡಿ ಇಡೀ ಜಗತ್ತಿನ ಉದ್ಯೋಗ ಕಸಿಯಲು ಭಾರತೀಯ ಮಕ್ಕಳು ಸನ್ನದ್ಧರಾಗಿದ್ದಾರೆ. ಅಂತಹ ಬುದ್ದಿವಂತ ಮಕ್ಕಳ ಸೃಷ್ಟಿಗೆ ಶಿಕ್ಷಕರು ಕಾರಣರು. ಶಿಕ್ಷಕರು ಆದರ್ಶರಾಗಿರಬೇಕು. ವೈದ್ಯ ತಪ್ಪು ಮಾಡಿದರೆ ರೋಗಿ ಸಡಾಯಬಹುದು. ವಕೀಲರು ತಪ್ಪು ಮಾಡಿದರೆ ಕಕ್ಷಿದಾರನಿಗೆ ತೊಂದರೆಯಾಗಬಹುದು. ಆದರೆ ಶಿಕ್ಷಕರು ತಪ್ಪು ಮಾಡಿದರೆ ವಿದ್ಯಾರ್ಥಿಗಳು ವಿಷ ಜಂತುಗಳಾಗಿ ನಮ್ಮ ಸುತ್ತ ಸುತ್ತುತ್ತಿರುತ್ತಾರೆ. ಆದ್ದರಿಂದ ಶಿಕ್ಷಕ ಯಾವತ್ತೂ ತಪ್ಪು ಮಾಡಬಾರದು ಎಂದರು.

ಗೀತಾನಂದ ಫೌಂಡೇಶನ್ (ರಿ.) ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ ಹೊಸ ಉತ್ತಮ ಸಮಾಜ ಸೃಷ್ಡಿಗೆ ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕರು ಸಮಾಜವನ್ನು ಒಳ್ಳೆಯ ಮಾರ್ಗದತ್ತ ಕೊಂಡು ಹೋಗುವ ಗುರುಗಳು. ಸಮಾಜದ ಉತ್ತಮ ಕಣ್ಣುಗಳು ಎಂದರು.
ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಮಾತನಾಡಿನಮ್ಮ ದೇಶದಲ್ಲಿ ರಿಸರ್ಚ್‌ನಲ್ಲಿ ತುಂಬಾ ಹಿಂದೆ ಉಳಿದಿದ್ದೇವೆ. ಶಿಕ್ಷಕರುಗಳು ನಮ್ಮ ಮಕ್ಕಳಲ್ಲಿ ಬೇರೆ ದೇಶಗಳಲ್ಲಿ ಸ್ಪರ್ಧೆ ಮಾಡುವ ರೀತಿಯಲ್ಲಿ ಅವರನ್ನು ತಯಾರು ಮಾಡಬೇಕೆಂದು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಶಿಕ್ಷಕರ ಪಾತ್ರ ಬಹಳ ದೊಡ್ಡದು. ಶಿಕ್ಷಕರ ಒತ್ತಡದ ಕೆಲಸದ ನಡುವೆಯೂ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಕಾರಣರಾಗಿದ್ದಾರೆ. ಶಿಕ್ಷಣದಿಂದ ಈ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಮಕ್ಕಳಿಗೆ ಪ್ರಾಕ್ಟಿಕಲ್ ಆಗಿ ಶಿಕ್ಷಣ ನೀಡಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿ ಮಂಗಳೂರು ಇದರ ಅಧ್ಯಕ್ಷ ಎಂ.ಎ.ಗಫೂರ್, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಶ್ರೀಮತಿ ಶ್ಯಾಮಿಲಿ ನವೀನ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಪನಿರ್ದೇಶಕ ಡಾ.ಅಶೋಕ್ ಕಾಮತ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್. ಎಸ್.ಕಾದ್ರೊಳ್ಳಿ , ಬ್ರಹ್ಮಾವರ ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷೆ ಡಾ.ಸುನಿತಾ ಶೆಟ್ಟಿ, ಶಿಕ್ಷಕರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕಿರಣ್ ಹೆಗ್ಡೆ, ಪ್ರಭಾಕರ ಶೆಟ್ಟಿ, ಕುಸುಮಾಕರ ಶೆಟ್ಟಿ, ರಾಘವ ಶೆಟ್ಟಿ, ಶ್ರೀಮತಿ ಚೈತ್ರ ಕೆ.ಪಿ., ವಿಜಯಕುಮಾರ್ ಶೆಟ್ಟಿ, ರಾಘವೇಂದ್ರ ನಾಯ್ಕ್, ಅರುಣ್ ಕುಮಾರ್ ಶೆಟ್ಟಿ, ಕಿಶನ್ ರಾಜ್ ಶೆಟ್ಟಿ, ಶ್ರೀಮತಿ ಆರತಿ ವೇದಿಕೆಯಲ್ಲಿದ್ದರು.

ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು ನಿತ್ಯಾನಂದ ಶೆಟ್ಟಿ ಸಾಧಕ ಶಿಕ್ಷಕರನ್ನು ಪರಿಚಯಿಸಿದರು.
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇವರ ಪಟ್ಟಿಯನ್ನು ಶಿಕ್ಷಣ ಸಂಯೋಜಕ ನಾಗಾರ್ಜುನ, ಬಿ.ಆರ್.ಪಿ. ಪದ್ಮಾ ಹಾಗೂ ಶ್ರೀಮತಿ ಅನ್ನಪೂರ್ಣ ವಾಚಿಸಿದರು. ಎಸ್.ಎಸ್.ಎಲ್.ಸಿ.ಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಮೀಳ ಶೆಟ್ಟಿ ವಾಚಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ.ಸ್ವಾಗತಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಉಮಾ ವಂದಿಸಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ, ಮಂಜುಳಾ ಜಯಕರ್ ಹೇರೂರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬ್ರಹ್ಮಾವರ ಇದರ ಅಧ್ಯಕ್ಷ ಪ್ರಶಾಂತ್ ಶೆಟ್ಟಿಯವರು ನಿರೂಪಿಸಿದರು.



