ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು ಸೆ.4: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಶಿಕ್ಷಕರ ಕಲ್ಯಾಣ ನಿಧಿಯಿಂದ ಕೊಡಮಾಡುವ 2026-27ನೇ ಸಾಲಿನ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ನೆಂಪು ಇಲ್ಲಿಯ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಚಿತ್ತೂರು ರವಿರಾಜ್ ಶೆಟ್ಟಿಯವರು ಆಯ್ಕೆಯಾಗಿರುತ್ತಾರೆ.

ಇವರಿಗೆ ದಿನಾಂಕ 21.12.2025 ರಂದು ಶಿಕ್ಷಣ ಜ್ಞಾನ ಪ್ರತಿಷ್ಠಾನ ಬೆಂಗಳೂರು ಇವರು ರಾಜ್ಯಮಟ್ಟದ ಜ್ಞಾನ ಸಿಂಧು ಪ್ರಶಸ್ತಿ ನೀಡಿ ಗೌರವಿಸಿದ್ದರು. ರವಿರಾಜ್ ಶೆಟ್ಟಿಯವರು ಸಿಆರ್‌ಪಿಯಾಗಿ, ಬಿಆರ್‌ಪಿಯಾಗಿ ಹಾಗೂ ಶಿಕ್ಷಣ ಸಂಯೋಜಕರಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.



