ಉಡುಪಿಮಿತ್ರ ಪತ್ರಿಕೆ ಸುದ್ಧಿ : ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಸೆ..೮:ಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದಿಂದ ಈ ಬಾರಿ 107 ಕೋಟಿ ಸಾಲವನ್ನು ನೀಡಿ ಸಂಘವನ್ನು ನಾವು ಮತ್ತಷ್ಟು ಎತ್ತರಕ್ಕೆ ಕೊಂಡು ಹೋಗಿದ್ದೇವೆ. 72 ಕೋಟಿ ಠೇವಣಿ, 3.65 ಕೋಟಿ ಶೇರು ಬಂಡವಾಳ, 5.91 ಕೋಟಿ ನಿಧಿಗಳನ್ನು ಸಂಘ ಹೊಂದಿದ್ದು 22 ಕೋಟಿ ಮೊತ್ತವನ್ನು ಬೇರೆ ಬೇರೆ ಸಂಘಗಳಲ್ಲಿ ವಿನಿಯೋಗ ಮಾಡಿದ್ದೇವೆ. ಪ್ರತಿ ವರ್ಷ ಸಂಘ ಉತ್ತಮ ಬೆಳವಣಿಗೆ ಕಾಣುತ್ತಿದೆ. ಈ ಬಾರಿ97.5% ಸಾಲ ವಸೂಲಾತಿ ಆಗಿದೆ ಎಂದು ಎಂದು ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ ನುಡಿದರು. ಅವರು ಸೆ.8ರಂದು ವಂಡ್ಸೆ ಶ್ರೀಯಾ ಕನ್ವೆನ್‌ಷನ್ ಹಾಲ್‌ನಲ್ಲಿ ನಡೆದ ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

. ಜನರಿಗೆ ಹತ್ತಿರದಲ್ಲೇ ಸಂಘದ ಸೇವೆ ಸಿಗಲಿ ಎಂಬ ಕಾರಣಕ್ಕೆ ಆಯಾಯ ಗ್ರಾಮಗಳಲ್ಲಿ ಶಾಖೆ ತೆರೆಯಲಾಗಿದೆ. ವಂಡ್ಸೆ ಸೇರಿ ೫ ಶಾಖೆಗಳನ್ನು ತೆರೆದು ಸೇವೆ ನೀಡುತ್ತಿದ್ದೇವೆ. ಬೆಳ್ಳಾಲ ಶಾಖೆಯನ್ನು ಮುಂದಿನ ಮೇ ತಿಂಗಳೊಳಗೆ ತೆರೆಯಲಿದ್ದು ಶಾಖೆಗೆ 7ವರೆ ಸೆಂಟ್ಸ್ ನನ್ನ ಸ್ವಂತ ಜಾಗವನ್ನು ದಾನ ಪತ್ರ ಮಾಡಿ ಕೊಟ್ಟಿದ್ದೇನೆ. ಚಿತ್ತೂರು ಶಾಖೆಗೆ ವಂಡ್ಸೆ ಕಟ್ಟೆಮನೆ ಅಪ್ಪು ಶೆಟ್ಟರ ಸ್ಮರಣಾರ್ಥವಾಗಿ ಬಳ್ಳಿಬೇರು ಕುಟುಂಬದವರು 10ಸೆಂಟ್ಸ್ ಜಾಗ ಕೊಡಲು ಮುಂದೆ ಬಂದಿದ್ದಾರೆ. ಚಿತ್ತೂರಿನಲ್ಲೂ ಆದಷ್ಟು ಬೇಗ ಸ್ವಂತ ಕಟ್ಟಡ ನಿರ್ಮಿಸಲಿದ್ದೇವೆ. ಮುಖ್ಯ ಕಚೇರಿ 60-70 ವರ್ಷಗಳಷ್ಟು ಹಳೆಯದಾಗಿದ್ದು ಹೊಸ ಕಟ್ಟಡ ನಿರ್ಮಿಸುವ ಗುರಿ ಇರಿಸಿಕೊಂಡಿದ್ದೇವೆ. ಕೃಷಿ ಸಾಲ ೩ ಲಕ್ಷದವರೆಗೆ ಕೊಡಲು ನಮಗೆ ಅವಕಾಶವಿದೆ. ಸರಕಾರ ೫ ಲಕ್ಷ ಕೊಡುತ್ತೇವೆ ಅನ್ನುತ್ತಿದ್ದರೂ 2 ವರ್ಷಗಳಿಂದ ಕೊಡದೇ ಇರುವುದರಿಂದ ನಾವು 3 ಲಕ್ಷ ಮಾತ್ರ ಸಾಲ ನೀಡುತ್ತಿದ್ದೇವೆ. ಒಂದು ವೇಳೆ ಸರಕಾರ ನೀಡಿದರೆ ನಾವು ೫ಲಕ್ಷ ಖಂಡಿತವಾಗಿಯೂ ಕೊಡಲಿದ್ದೇವೆ. ಸರಕಾರ 3 ವರ್ಷಗಳಿಂದ ಕೃಷಿ ಸಾಲದ ಬಡ್ಡಿ ಕೊಡದೇ ಇದ್ದರೂ ನಾವು ಸಂಘದ ವತಿಯಿಂದ ೩% ಬಡ್ಡಿಯ ಸಾಲವನ್ನು ನೀಡಿದ್ದೇವೆ. ಒಮ್ಮೆ 3% ಬಡ್ಡಿ ಸಾಲ ಪಡೆದವರಿಗೆ 2 ವರ್ಷ ಬಿಟ್ಟು ಮತ್ತೆ ಕೊಡಲಿದ್ದು ಜನವರಿ ನಂತರ ಕೊಡಲಿದ್ದೇವೆ ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಸಂಜೀವ ಪೂಜಾರಿ ವಂಡ್ಸೆ, ನಿರ್ದೇಶಕರಾದ ಜಗನ್ನಾಥ ಶೆಟ್ಟಿ ಹೊಸೂರು, ರಾಮಚಂದ್ರ ಮಂಜ ಮಾರಣಕಟ್ಟೆ ಚಿತ್ತೂರು, ರಾಜಾರಾಮ ಶೆಟ್ಟಿ ಇಡೂರು ಕುಂಜ್ಞಾಡಿ, ಶೇಖರ ಶೆಟ್ಟಿ ಬೆಳ್ಳಾಲ, ಪ್ರಭಾಕರ ಶೆಟ್ಟಿ ಕೆರಾಡಿ, ಗುಂಡು ಜಿ.ಪೂಜಾರಿ ಹರವರಿ ವಂಡ್ಸೆ, ಅರುಣ್ ಕುಮಾರ್ ಶೆಟ್ಟಿ ಹೊಸೂರು, ಶ್ರೀಮತಿ ಜಲಜಾಕ್ಷಿ ಶೆಡ್ತಿ ಹೊಸೂರು, ಶ್ರೀಮತಿ ಅಂಬಿಕಾ ಶೆಡ್ತಿ ವಂಡ್ಸೆ, ರಾಜು ನಾಯ್ಕ ಇಡೂರು ಕುಂಜ್ಞಾಡಿ, ಸಂತೋಷ ನಾಯ್ಕ ಕೆರಾಡಿ, ವೃತ್ತಿಪರ ನಿರ್ದೇಶಕರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಕರುಣಾಕರ ಶೆಟ್ಟಿ ಹೆಟ್ನಾಬೈಲು ಉಪಸ್ಥಿತರಿದ್ದರು.

ಎಸ್‌ಎಸ ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ದಾಖಲಿಸಿದ ಸದಸ್ಯರ ಮಕ್ಕಳಿಗೆ ಹಾಗೂ ಕಿಡ್ನಿ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಸಂಘವ ವತಿಯಿಂದ ಆರ್ಥಿಕ ಸಹಕಾರ ನೀಡಲಾಯಿತು.
ಮುಖ್ಯ ಕಾರ್ಯ -ನಿರ್ವಹಣಾಧಿಕಾರಿ ಶ್ರೀಮತಿ ಸುಮತಿ ಶೆಟ್ಟಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಸಂಜೀವ ಪೂಜಾರಿ ವಂದಿಸಿದ್ದು ಪತ್ರಕರ್ತ ಸುಬ್ರಹ್ಮಣ್ಯ ಗಾಣಿಗ ಪಡುಕೋಣೆ ನಿರೂಪಿಸಿದರು.



