udupimitra.in
  • October 5, 2026
  • Last Update October 5, 2026 5:40 pm
  • Brahmavara

ಚಿತ್ತೂರು : ಗೋವಿನ ಉಳಿವಿಗಾಗಿ ಪಾದಯಾತ್ರೆ ; ಬಹಿರಂಗ ಸಭೆ

ಚಿತ್ತೂರು : ಗೋವಿನ ಉಳಿವಿಗಾಗಿ ಪಾದಯಾತ್ರೆ ; ಬಹಿರಂಗ ಸಭೆ

ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಚಿತ್ತೂರು, ಸೆ.೫: ಇಡೀ ಪ್ರಪಂಚದಲ್ಲಿ ಯುಗಯುಗದಿಂದ ಮಾನವನಿಗೆ ಒಡನಾಡಿಯಾಗಿ ಗೋಮಾತೆ ಬಂದಿದ್ದಾಳೆ ಅಂತಹ ಗೋಮಾತೆ ಬಗ್ಗೆ ಪ್ರಪಂಚದಲ್ಲಿ ವಾಸಿಸುವ ಎಲ್ಲಾ ಮನುಷ್ಯರಿಗೂ ಕೃತಜ್ಞತೆ ಇರಬೇಕು. ಕೇವಲ ಹಿಂದೂಗಳಿಗೆ ಮಾತ್ರ ಕೃತಜ್ಞತೆಯಿದ್ದರೆ ಸಾಲದು. ಪ್ರತಿಯೊಬ್ಬರು ಗೋಮಾತೆಯನ್ನು ಚೆನ್ನಾಗಿ ನೋಡಬೇಕು. ನಮಗೆ ಹಾಲು ಕೊಡುವ ಗೋ ಮಾತೆಯನ್ನು ಪ್ರಾಮಾಣಿಕವಾಗಿ ಸಾಕುವುದೇ ನಿಜವಾದ ದೇವರ ಸೇವೆ ಅನ್ನಿಸಿಕೊಳ್ಳಲಿದೆ ಎಂದು ಹಿಂದೂ ಮುಖಂಡ ಡಾ. ಅತುಲ್ ಕುಮಾರ್ ಶೆಟ್ಟಿ ನುಡಿದರು. ಅವರು ಚಿತ್ತೂರು ಬಸ್‌ನಿಲ್ದಾಣದಿಂದ ಮಾರಣಕಟ್ಟೆಯವರೆಗೆ ಹಿಂದೂ ಜಾಗರಣಾ ವೇದಿಕೆ ಬೈಂದೂರು ಹಾಗೂ ಹಿಂದೂ ಸುರಕ್ಷಾ ಸಮಿತಿ ಚಿತ್ತೂರು ನೇತೃತ್ವದಲ್ಲಿ ಗೋವಿನ ಉಳಿವಿಗಾಗಿ ನಡೆದ ಪಾದಯಾತ್ರೆ ಹಾಗೂ ಮಾರಣಕಟ್ಟೆಯಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಗೋವುಗಳನ್ನು ಕದ್ದು ಸಾಗಿಸುವ ಪಿಡುಗಿನ ವಿರುದ್ಧ ಅಧಿಕಾರಿಗಳು, ಸರಕಾರ ಜಾಗೃತವಾಗಬೇಕು. ಪ್ರತಿಯೊಬ್ಬರು ಜಾಗೃತರಾದಲ್ಲಿ ಗೋವಿನ ಕಳ್ಳ ಸಾಗಣೆ ನಿಲ್ಲಲಿದೆ. ದಲ್ಲಾಲಿಗಳು ಕೂಡ ಗೋವನ್ನು ಸಾಗಿಸುವ ಕೆಲಸ ಮಾಡುವುದು ಸರಿಯಲ್ಲ. ನಮ್ಮ ನಾಡಲ್ಲಿ ಗೋವನ್ನು ಗೌರವಿಸಬೇಕು ಎಂದರು.
ಹೈದರಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಪಾದ ಯಾತ್ರೆಗೆ ಚಾಲನೆ ನೀಡಿದರು.
ದಿಕ್ಸೂಚಿ ಭಾಷಣದಲ್ಲಿ ಆದರ್ಶ್ ಕೆಲಾ ಮಾತನಾಡಿ ಎಲ್ಲೆಡೆ ನಿರಂತರವಾಗಿ ಗೋ ಕಳ್ಳತನ ನಡೆಯುತ್ತಾ ಇದೆ. ನಮಗೆ ಹಾಲನ್ನು ನೀಡುವ ಗೋವಿಗೆ ಚಿತ್ರ ಹಿಂಸೆ ನೀಡಿ ಕೊಲ್ಲುತ್ತಾರೆ. ಮಾರಣಕಟ್ಟೆಯಲ್ಲಿ ಮಲಗಿರುವ ಗೋವನ್ನು ರಾತ್ರಿ ಕದ್ದೊಯ್ಯಲಾಗಿದೆ. ಕದ್ದೊಯ್ದವರಲ್ಲಿ ಪೊಲೀಸರು ಕೇವಲ ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ. ಉಳಿದವರನ್ನು ಕೂಡ ಬಂಧಿಸಬೇಕು. ಇಲ್ಲವಾದಲ್ಲಿ ಹಿಂದೂ ಸಮಾಜಕ್ಕೆ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಇದೆ. ಪ್ರತಿಯೊಬ್ಬರು ಕೊಟ್ಟಿಗೆಗೆ ನುಗ್ಗಿ ಗೋವುಗಳನ್ನ ಕದ್ದವರನ್ನು ಪೋಲೀಸರಿಗೊಪ್ಪಿಸುವ ಕೆಲಸ ಮಾಡಬೇಕು ಎಂದರು.


ವೇದಿಕೆಯಲ್ಲಿ ಮಾರಣಕಟ್ಟೆ ದೇವಸ್ಥಾನದ ಅರ್ಚಕ ಶ್ರೀನಿವಾಸ ಮಂಜ ಹಾಗೂ ಹರೀಶ್ ಸೆಳ್ಕೋಡು
ಉಪಸ್ಥಿತರಿದ್ದರು.
ಸಭೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ರವೀಂದ್ರ ಶೆಟ್ಟಿ ಚಿತ್ತೂರು, ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಕರುಣಾಕರ ಶೆಟ್ಟಿ ವನಶ್ರೀ ಕಳಿ, ಅಪ್ಪು ಕುಲಾಲ್ ಆಲೂರು, ಶಂಕರ ಭಟ್ ಮಾರಣಕಟ್ಟೆ, ಎಸ್. ಮಹಾಬಲ ಶೆಟ್ಟಿ ಚಿತ್ತೂರು, ಚಂದ್ರ ಶೆಟ್ಟಿ ಚಿತ್ತೂರು ಕೆಳಮನೆ, ದಿವಾಕರ ಆಚಾರ್ಯ ಮಾರಣಕಟ್ಟೆ, ಮಂಜುನಾಥ ಶಾರ್ಕೆ, ವೆಂಕಟೇಶ್ ಶೆಟ್ಟಿ ತೆಂಕೊಡಿಕೆ, ಪ್ರದೀಪ್ ಶೆಟ್ಟಿ ಚಿತ್ತೂರು, ಪ್ರಶಾಂತ್ ಕುಲಾಲ್ ಆಲೂರು, ಪ್ರಾಣೇಶ್ ಯಡಿಯಾಳ್ ಸಿದ್ಧಾಪುರ, ಪ್ರವೀಣ್ ಶೆಟ್ಟಿ ಕೊಡ್ಲಾಡಿ, ಸುದರ್ಶನ ಶೆಟ್ಟಿ ಕೆರಾಡಿ, ಚಂದ್ರಶೇಖರ ಶೆಟ್ಟಿ ಕೊಳೂರು, ಲಕ್ಷ್ಮಣ ಶೆಟ್ಟಿ ಜಡ್ಕಲ್, ದೀಪಕ್ ಶೆಟ್ಟಿ ವಂಡ್ಸೆ, ವಿ.ಕೆ. ಶಿವರಾಮ ಶೆಟ್ಟಿ ವಂಡ್ಸೆ, ಸರ್ವೋತ್ತಮ ಶೆಟ್ಟಿ ಇಡೂರು, ಜಯರಾಮ ಶೆಟ್ಟಿ ಹಿಜಾಣ, ಅನಿಲ್ ಕುಮಾರ್ ಶೆಟ್ಟಿ ಮಾರಣಕಟ್ಟೆ, ಶ್ರೀಮತಿ ಅನಿತಾ ಮರವಂತೆ , ನಿರ್ಮಲ ವಂಡ್ಸೆ ಇನ್ನಿತರರು ಭಾಗವಹಿಸಿದ್ದರು.
ಹರೀಶ್ ಸೆಳ್ಕೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಕೆರಾಡಿ ,ಮಾರಣಕಟ್ಟೆ ಭಾಗದಲ್ಲಿ ಗೋಕಳ್ಳರ ಅಟ್ಟಹಾಸ ಮೆರೆಯುತ್ತಿದ್ದು ಐಷಾರಾಮಿ ಕಾರುಗಳಲ್ಲಿ ಬಂದು ಮಾರಾಕಾಯುಧ ತೋರಿಸಿ ಗೋವುಗಳನ್ನು ಕದ್ದೊಯ್ಯುತ್ತಿದ್ದಾರೆ. ಮಾರಣಕಟ್ಟೆಯಲ್ಲಿ ಮಲಗಿರುವ ಗೋವನ್ನು ಬಲಾತ್ಕಾರವಾಗಿ ವಾಹನಕ್ಕೆ ತುಂಬಿಸಿಕೊಂಡು ಹೋಗಿದ್ದ ಚಿತ್ರಣ ಸಿಸಿ ಕೆಮರಾದಲ್ಲಿ ರೆಕಾರ್ಡ್ ಆಗಿದೆ. ಒಟ್ಟು ಮೂರು ಮಂದಿ ಇದ್ದರು.ಆದರೆ ಪೊಲೀಸರು ಒಬ್ಬನನ್ನೇ ಬಂಧಿಸಿದ್ದಾರೆ. ಉಳಿದವರನ್ನು ಕೂಡ ಬಂಧಿಸಬೇಕು. ಗೋಕಳ್ಳರ ಕಿಂಗ್ ಪಿನ್ ಯಾರು? ಮಾರಣಕಟ್ಟೆಯಿಂದ ಕದ್ದು ಹೋದ ಗೋವು ಎಲ್ಲಿಗೆ ಹೋಯಿತು ಎಂಬುದು ಸಮಾಜಕ್ಕೆ ಗೊತ್ತಾಗಬೇಕು ಎಂದು ನುಡಿದರು.
ಅನುಜ್ಞಾ ಮತ್ತು ತಂಡ ದೇಶ ಭಕ್ತಿ ಗೀತೆ ಹಾಡಿದರು.
ಅನಿಲ್‌ಕುಮಾರ್ ಶೆಟ್ಟಿ ವಂದಿಸಿದರು. ದೀಪಿಕಾ ಸುಭಾಶ್ ಶೆಟ್ಟಿ ನಿರೂಪಿಸಿದರು

administrator

Related Articles

Leave a Reply

Your email address will not be published. Required fields are marked *

You cannot copy content of this page