udupimitra.in
  • October 6, 2026
  • Last Update October 6, 2026 4:17 pm
  • Brahmavara

ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ಅ.11ರಿಂದ ಒಂಭತ್ತನೇ ವರ್ಷದ ಶರನ್ನವರಾತ್ರಿ

ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ಅ.11ರಿಂದ ಒಂಭತ್ತನೇ ವರ್ಷದ ಶರನ್ನವರಾತ್ರಿ

ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಬ್ರಹ್ಮಾವರ, ಅ.೦೬: ಬಾರ್ಕೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ದೇವಾಡಿಗ ಸಮಾಜದ ಕುಲದೇವಿ ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಒಂಭತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವವು ಅ.೧೧ರಿಂದ ಅ.೨೦ರವರೆಗೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಕಾರ್ಯಾಧ್ಯಕ್ಷ ಜನಾರ್ದನ ಪಡುಪಣಂಬೂರು ತಿಳಿಸಿದರು. ಅವರು ಬ್ರಹ್ಮಾವರದ ಹೋಟೆಲ್ ಗಜಾನನ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


ನವರಾತ್ರಿಯ ಎಲ್ಲಾ ದಿನವೂ ಚಂಡಿಕಾಯಾಗ ಹಾಗೂ ದುರ್ಗಾ ನಮಸ್ಕಾರ, ರಂಗಪೂಜೆ, ವಿಶೇಷ ಅರ್ಚನೆ ಹಾಗೂ ತುಲಾಭಾರ ಸೇವೆ ನಡೆಯಲಿರುವುದು. ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ನಂತರ ವಿವಿಧ ಸಂಘಗಳ ವತಿಯಿಂದ ಭಜನಾ ಕಾರ್ಯಕ್ರಮ ಜರಗಲಿದೆ.
ದಿನಾಂಕ:೧೮-೧೦-೨೦೨೬ರ ಆದಿತ್ಯವಾರ ದೇವಾಡಿಗ ಸಂಘ (ರಿ) ಮುಂಬಯಿ ಇವರ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಎಲ್.ಜಿ.ಫೌಂಡೇಶನ್ ಕುಂದಾಪುರ ಮತ್ತು ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮತ್ತು ಸರಕಾರಿ ಸೌಲಭ್ಯಗಳ ಮಾರ್ಗದರ್ಶಿ ಶಿಬಿರ ನಡೆಯಲಿದೆ.


ದಿನಾಂಕ: ೧೯-೧೦. ೨೦೨೬ರ ಸೋಮವಾರ ದುರ್ಗಾಷ್ಟಮಿಯಂದು ಸಾಮೂಹಿಕ ಚಂಡಿಕಾಯಾಗ ನಡೆಯಲಿದೆ. ಹಾಗೆಯೇ ವಿಜಯ ದಶಮಿಯಂದು ಸಾಮೂಹಿಕ ಸರಸ್ವತಿ ಪೂಜೆ ಹಾಗೂ ಸಹಸ್ರ ಕುಂಕುಮಾರ್ಚನೆ ಸೇವೆ ನಡೆಯಲಿರುವುದು ಎಂದು ತಿಳಿಸಿದರು.
ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಚೆನ್ನಪ್ಪ ಮೊಯಿಲಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಗೌರವ ಕಾರ್ಯದರ್ಶಿ ಗಣೇಶ ಅಂಬಲಪಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಯಾದವ ದೇವಾಡಿಗ ಹಳೆಯಂಗಡಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page