udupimitra.in
  • October 24, 2026
  • Last Update October 23, 2026 5:29 pm
  • Brahmavara

ಅ.25ರಂದು ಕೊರಗ ತನಿಯ ಸೇವಾ ಸಮಿತಿ ಉದ್ಘಾಟನೆ

ಅ.25ರಂದು ಕೊರಗ ತನಿಯ ಸೇವಾ ಸಮಿತಿ ಉದ್ಘಾಟನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :


ಬ್ರಹ್ಮಾವರ, ಅ.೨೩: ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಹಾಗೂ ಸಮುದಾಯದ ಅಭಿವೃದ್ಧಿಗೆ ಸಹಕರಿಸಲು ಅ.25ರಂದು ಮಧ್ಯಾಹ್ನ 3.00ಗಂಟೆಗೆ ಬಾರಕೂರಿನ ಹೊಸಾಳದ ಶ್ರೀ ವೀರ ಕಲ್ಕುಡ ಕಲ್ಲುರ್ಟಿ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಕೊರಗ ತನಿಯ ಸೇವಾ ಸಮಿತಿಯನ್ನು ಉದ್ಘಾಟಿಸಲಾಗುವುದೆಂದು ಸಮಿತಿಯ ಗೌರವಾಧ್ಯಕ್ಷ ನಂದಕಿಶೋರ್ ತಿಳಿಸಿದರು. ಅವರು ಅ.23ರಂದು ಬ್ರಹ್ಮಾವರ ಹೋಟೆಲ್ ಗಜಾನನ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು.


ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಎಂ.ಎ.ಬಿ.ಇಡಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಎಮ್., ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಚಾಂತಾರು ವಿಜಯಲಕ್ಷ್ಮೀ ಸಾರೀಸ್ ಮಾಲಕಿ ಶ್ರೀಮತಿ ಅಂಜಲಿ ಎನ್.ಡಿಸಿಲ್ವಾ, ಉದ್ಯಮಿ, ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ.)ದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಗಿಳಿಯಾರು ಜನಸೇವಾ ಟ್ರಸ್ಟ್ (ರಿ.) ಸ್ಥಾಪಕಾಧ್ಯಕ್ಷ ವಸಂತ ಗಿಳಿಯಾರ್, ವಾರಂಬಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ನಾರಾಯಣ, ಶ್ರೀಮತಿ ನಿರೀಕ್ಷಾ ಮೆಂಡನ್, ಬಾರ್ಕೂರು ಗ್ರಾಮ ಪಂಚಾಯತ್ ಪಿಡಿಓ ಮಹೇಶ್ ಕೆ. ಹಾಗೂ ಕೊರಗ ತನಿಯಾ ಸೇವಾ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್ ಹಂದಾಡಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಪಿಎಚ್‌ಡಿ ಪದವೀಧರೆ ಅಶ್ವಿತಾ ರಂಗನಕೇರಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಮಿತಿಯ ಅಧ್ಯಕ್ಷ ಹಂದಾಡಿ ಉದಯ ಕೋಟ್ಯಾನ್ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಕೊರಗ ಸಮುದಾಯದವರು ಇಂದಿಗೂ ಸಾಕಷ್ಟು ಹಿಂದುಳಿದಿದ್ದಾರೆ. ಅವರ ಮನೆಗಳು ಅಭಿವೃದ್ಧಿ ಕಂಡಿಲ್ಲ. ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಸಾಮಾಜಿಕವಾಗಿ ಆ ಸಮುದಾಯ ಮುಂದುವರಿಯಬೇಕಾಗಿದೆ. ಆದ್ದರಿಂದ ದೇವಸ್ಥಾನದ ವತಿಯಿಂದ ಕೊರಗ ತನಿಯ ಸೇವಾ ಸಮಿತಿ ರಚಿಸಿ ಆ ಸಮಿತಿ ವತಿಯಿಂದ ಅವರ ಅಭಿವೃದ್ದಿಗೆ ಶ್ರಮಿಸುವ ಗುರಿ ಇರಿಸಿಕೊಂಡಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಕೋಶಾಧಿಕಾರಿ ರಿತೇಶ್‌ಕುಮಾರ್ ಶೆಟ್ಟಿ ಹಾಗೂ ಆರತಿ ಮಿಯ್ಯಾರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page