• March 25, 2026
  • Last Update March 24, 2026 3:28 pm
  • Brahmavara

ಬ್ರಹ್ಮಾವರ : ಮಾರ್ಚ್ 29 ರಂದು “ಎಂ. ಚಂದ್ರಶೇಖರ್ ಹೆಗ್ಡೆ ಕ್ಲಬ್ ಹೌಸ್ ಲೋಕಾರ್ಪಣೆ

ಬ್ರಹ್ಮಾವರ : ಮಾರ್ಚ್ 29 ರಂದು “ಎಂ. ಚಂದ್ರಶೇಖರ್ ಹೆಗ್ಡೆ ಕ್ಲಬ್ ಹೌಸ್ ಲೋಕಾರ್ಪಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಮಾ.೨೪: ಬ್ರಹ್ಮಾವರ ಹೆರೆಂಜೆಯಲ್ಲಿರುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ (ರಿ.) ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ಎಂ. ಚಂದ್ರಶೇಖರ್ ಹೆಗ್ಡೆ ಕ್ಲಬ್ ಹೌಸ್ ಮಾರ್ಚ್ 29 ಆದಿತ್ಯವಾರ ಸಂಜೆ ಗಂಟೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿಜು ಜಿ.ನಾಯರ್ ತಳಿಸಿದರು. ಅವರು ಸ್ಫೋರ್ಟ್ಸ್ ಕ್ಲಬ್‌ನಲ್ಲಿ ಮಾ.೨೪ರಂದು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು.


ಸುಮಾರು 3.5 ಕೋಟಿ ವೆಚ್ಚದಲ್ಲಿ ಎಂ.ಚಂದ್ರಶೇಖರ್ ಹೆಗ್ಡೆ ಕ್ಲಬ್‌ಹೌಸ್ ಕಟ್ಟಡ ನಿರ್ಮಿಸಲಾಗಿದ್ದು ೮ ಹವಾನಿಯಂತ್ರಿತ ಸುಸಜ್ಜಿತ ಕೊಠಡಿಗಳು, ರೆಸ್ಟೋರೆಂಟ್, ಜಿಮ್ನೆಶಿಯಂ, ಸ್ನೂಕರ್ ರೂಮ್, ರಿಕ್ರಿಯೇಶನ್ ಕ್ಲಬ್ ಮತ್ತು ಕ್ಲಬ್ಬಿನ ಕಚೇರಿ ಒಳಗೊಂಡಿದ್ದು ಕಟ್ಟಡವನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶಪಾಲ್ ಎ. ಸುವರ್ಣ ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಕೆ . ಜಯಪ್ರಕಾಶ್ ಹೆಗ್ಡೆ, ಕುಂದಾಪುರ ವಿಧಾನಸಭಾಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ರಘುಪತಿ ಭಟ್, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷ ಡಾ|| ಎಚ್.ಎಸ್. ಶೆಟ್ಟಿ, ಕೋಟ ಮಣೂರು ಗೀತಾನಂದ ಫೌಂಡೇಶನ್ (ರಿ.) ಪ್ರವರ್ತಕ
ಆನಂದ ಸಿ ಕುಂದರ್, ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಉದ್ಯಮಿ ವಿಜಯ ಹೆಗ್ಡೆ ಕುಕ್ಕೆಹಳ್ಳಿ, ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಡಾ|ಪ್ರವೀಣ್ ಕುಮಾರ್, ಬೈಲೂರಿನ ಶಂಕರನಾರಾಯಣ ಕ್ಯಾಶ್ಯೂಸ್‌ನ ಹೆಚ್.ಶಶಿಧರ ಶೆಟ್ಟಿ, ಬೆಂಗಳೂರಿನ ಉದ್ಯಮಿ ಎಸ್.ಆರ್.ಗುಣಶೀಲ ರೆಡ್ಡಿ, ಅಬುದಾಬಿಯ ಉದ್ಯಮಿ ಶೇಕ್ ಯೂನಸ್ ಹಸನ್, ಬ್ರಹ್ಮಾವರ ಎನ್.ಎಸ್. ಟ್ರೇಡರ‍್ಸ್‌ನ ಪೀಟರ್ ಡಿಸೋಜ, ಬೆಂಗಳೂರಿನ ಉದ್ಯಮಿ ಆನಗಳ್ಳಿ ಕರುಣಾಕರ ಹೆಗ್ಡೆ ಹಾಗೂ ಶಂಕರ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಎಂ.ಚಂದ್ರಶೇಖರ ಹೆಗ್ಡೆ ತಿಳಿಸಿದರು. . ಪತ್ರಿಕಾಗೋಷ್ಟಿಯಲ್ಲಿ ಪಂಚಮಿ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಸ್ಫೋರ್ಟ್ಸ್ ಕ್ಲಬ್ ಖಜಾಂಚಿ ವಿಕ್ರಂ ಪ್ರಭು ಸ್ವಾಗತಿಸಿ ವಂದಿಸಿದರು.


ಕ್ಲಬ್‌ಹೌಸ್ ಗೆ ಚಂದ್ರಶೇಖರ ಹೆಗ್ಡೆ ಹೆಸರು :
ಎಂ.ಚಂದ್ರಶೇಖರ ಹೆಗ್ಡೆಯವರು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಸ್ಥಾಪಕ ಕಾರ್ಯದರ್ಶಿಯಾಗಿ, ಸಂಚಾಲಕರಾಗಿ, ೨೦೧೫ ರಿಂದ ೮ ವರ್ಷಗಳ ಕಾಲ ಸತತ ಅಧ್ಯಕ್ಷರಾಗಿ ಸ್ಪೋರ್ಟ್ಸ್ ಕ್ಲಬ್ಬಿನ ಸರ್ವೋತೋಮುಖ ಬೆಳವಣಿಗೆಯಲ್ಲಿ ಕಾರಣರಾದವರು. ಎಂ. ಚಂದ್ರಶೇಖರ್ ಹೆಗ್ಡೆಯವರ ಸೇವೆಯನ್ನು ಗುರುತಿಸಿ ಹೊಸದಾಗಿ ನಿರ್ಮಾಣಗೊಂಡ ಕ್ಲಬ್ ಹೌಸ್‌ಗೆ ಅವರ ಹೆಸರನ್ನು ಇಡುವ ಒಮ್ಮತದ ನಿರ್ಧಾರವನ್ನು ಸ್ಫೋರ್ಟ್ಸ್ ಕ್ಲಬ್ಬಿನ ಸದಸ್ಯರು ತೆಗೆದುಕೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page