ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಮೇ.೧5: ಬ್ರಹ್ಮಾವರ ದೊಡ್ಡಹಾಡಿಮನೆ ಬಾಳೆಕುದ್ರು ಶ್ರೀನಿವಾಸ ಶೆಟ್ಟಿ (90) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಬ್ರಹ್ಮಾವರ-ಬಾರಕೂರು ಲಯನ್ಸ್ ಕ್ಲಬ್ ಹಾಗೂ ಬಾಳೆಕುದ್ರು ಹಾಲುತ್ಪಾದಕರ ಸಂಘದ ಮಾಜಿ ಅಧ್ಯಕ್ಷರಾಗಿರುವ ಇವರು ಮಾಬುಕಳ ಕಾಸ್ಮೋಪಾಲಿಟಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೫ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.



