udupimitra.in
  • October 31, 2026
  • Last Update October 30, 2026 4:44 pm
  • Brahmavara

ಅ.30ರಿಂದ ನ.1ವರೆಗೆ ನೀಲಾವರ ಹಾಗೂ ಚಾಂತಾರಿನಲ್ಲಿ ವಿಶ್ವಕರ್ಮ ಟ್ರೋಪಿ, ಕ್ರಿಕೆಟ್ ಪಂದ್ಯಾಟ

ಅ.30ರಿಂದ ನ.1ವರೆಗೆ ನೀಲಾವರ ಹಾಗೂ ಚಾಂತಾರಿನಲ್ಲಿ ವಿಶ್ವಕರ್ಮ ಟ್ರೋಪಿ, ಕ್ರಿಕೆಟ್ ಪಂದ್ಯಾಟ
  • ವರದಿ : ಚಿತ್ತೂರು ಪ್ರಭಾಕರ ಆಚಾರ್ಯ, * ಉಡುಪಿಮಿತ್ರ ಪತ್ರಿಕೆ ಸುದ್ಧಿ :
    ಬ್ರಹ್ಮಾವರ : ಕೋಟ, ಅ.೨೯: ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಆಶ್ರಯದಲ್ಲಿ ಅಗಲಿದ ಗೆಳೆಯ ಪ್ರದೀಪ್ ಆಚಾರ್ಯ ಅವರ ಸ್ಮರಣಾರ್ಥ ಮಾಣಿಕ್ಯ ಪ್ರೀಮಿಯರ್ ಲೀಗ್ ಹಾಗೂ ವಿಶ್ವಕರ್ಮ ಟ್ರೋಫಿ ಕ್ರಿಕೆಟ್ ಪಂದ್ಯಾಟ ಅ.30ರಿಂದ ನ.1ರ ವರೆಗೆ ಹೆಬ್ಬಲಸಿನಕಟ್ಟೆ ನೀಲಾವರ ಕ್ರಾಸ್ ಹಾಗೂ ಚಾಂತಾರಿನ ಗ್ಲೋಬಲ್ ಗ್ರೌಂಡ್‌ನಲ್ಲಿ ನಡೆಯಲಿದೆ.

ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾಟದಲ್ಲಿ ಒಟ್ಟು ೨೪ ತಂಡಗಳು ಭಾಗವಹಿಸಲಿವೆ. ಗಣ್ಯರ ಉಪಸ್ಥಿತಿಯಲ್ಲಿ ಅ.30ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. ನ.೧ರಂದು ಸಂಜೆ ಗಂಟೆ 6.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ‘ ಸಮಾನ ಮನಸ್ಕರ ತಂಡದ ನೇತೃತ್ವ ವಹಿಸಿಕೊಂಡು ಸುಮಾರು ೫೦ ಮನೆಗಳನ್ನು ಕಟ್ಟಿಕೊಟ್ಟಿರುವ ಶಶಿಧರ ಪುರೋಹಿತ್ ಕಟಪಾಡಿ ಅವರನ್ನು ಸಮ್ಮಾನಿಸಲಾಗುವುದು.

ವಿಶ್ವಕರ್ಮ ಟ್ರೋಫಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟವಾಗಿದ್ದು, ಕ್ರೀಡಾಕೂಟದ ಖರ್ಚು ವೆಚ್ಚಗಳನ್ನು ಭರಿಸಿ ಬಳಿಕ ಉಳಿಯುವ ಮೊತ್ತವನ್ನು ಅಗಲಿದ ಪ್ರದೀಪ್ ಆಚಾರ್ಯ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಪಂದ್ಯಾಟದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಣಿಕ್ಯ ಕ್ರಿಕೆಟರ್ಸ್ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ಸಂಯೋಜಕ ರಾಜೇಶ್ ಆಚಾರ್ಯ, ರಾಘವೇಂದ್ರ ಆಚಾರ್ಯ ಮಟಪಾಡಿ, ಗಣೇಶ್ ಆಚಾರ್ಯ, ಗಣೇಶ್ ಆಚಾರ್ಯ ಕೆ., ವಿನಯ ಆಚಾರ್ಯ ಹಾಗೂ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು

administrator

Related Articles

Leave a Reply

Your email address will not be published. Required fields are marked *

You cannot copy content of this page