udupimitra.in
  • September 24, 2026
  • Last Update September 22, 2026 7:14 am
  • Brahmavara

ಗೋಳಿಯಂಗಡಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಜಿ.ಎಸ್.ಚಂದ್ರ ಆಚಾರ್ಯ, ಗೌರವಾಧ್ಯಕ್ಷರಾಗಿ ಗಣೇಶ್ ಕಿಣಿ ಆಯ್ಕೆ

ಗೋಳಿಯಂಗಡಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಜಿ.ಎಸ್.ಚಂದ್ರ ಆಚಾರ್ಯ, ಗೌರವಾಧ್ಯಕ್ಷರಾಗಿ ಗಣೇಶ್ ಕಿಣಿ ಆಯ್ಕೆ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಗೋಳಿಯಂಗಡಿ, ಜು.20: ಗೋಳಿಯಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಸಿವಿಲ್ ಕಂಟ್ರಾಕ್ಟರ್ ಜಿ.ಎಸ್.ಚಂದ್ರ ಆಚಾರ್ಯ ಗೋಳಿಯಂಗಡಿ ಇವರನ್ನು ಆಯ್ಕೆ ಮಾಡಲಾಗಿದೆ. ಜು.17ರಂದು ಗೋಳಿಯಂಗಡಿಯಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಭೆಯಲ್ಲಿ ಗಣೇಶೋತ್ಸವ ಸಮಿತಿ ಸದಸ್ಯರು ಸರ್ವಾನುಮತದಿಂದ ಅವಿರೋಧವಾಗಿ ಇವರನ್ನು ಆಯ್ಕೆ ಮಾಡಿದರು. ಜಿ.ಎಸ್.ಚಂದ್ರ ಆಚಾರ್ಯ ಇವರು ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ (ರಿ.) ಗೋಳಿಯಂಗಡಿ ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಹಮೊಕ್ತೇಸರರಾಗಿಯೂ ಸೇವೆ ಸಲ್ಲಿಸಿದ್ದರು.


ಗೌರವಾಧ್ಯಕ್ಷರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ, ಉದ್ಯಮಿ ಬಿ.ಗಣೇಶ್ ಕಿಣಿ, ಉಪಾಧ್ಯಕ್ಷರಾಗಿ ಕೃಷ್ಣ ನಾಯ್ಕ ಸೂರ‍್ಗೋಳಿ, ಜಯರಾಮ ಮರಕಾಲ ಗೋಳಿಯಂಗಡಿ, ರಮೇಶ್ ಗೋಳಿಯಂಗಡಿ, ಕಾರ್ಯದರ್ಶಿಯಾಗಿ ಗಣಪರಿ ನಾಯ್ಕ, ಜೊತೆ ಕಾರ್ಯದರ್ಶಿಯಾಗಿ ರೋಬರ್ಟ್ ಸಾಂತುಸ್, ಕೋಶಾಧಿಕಾರಿಯಾಗಿ ರಾಜೀವ ಶೆಟ್ಟಿ ಯಳಂತೂರು ಆಯ್ಕೆಯಾಗಿರುತ್ತಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page