udupimitra.in
  • October 8, 2026
  • Last Update October 8, 2026 5:49 pm
  • Brahmavara

ಗೋಳಿಯಂಗಡಿ : ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ (ರಿ.) ವಿಶ್ವಕರ್ಮ ಯಜ್ಞ ಮಹೋತ್ಸವ, ವಾರ್ಷಿಕ ಮಹಾಸಭೆ

ಗೋಳಿಯಂಗಡಿ : ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ (ರಿ.) ವಿಶ್ವಕರ್ಮ ಯಜ್ಞ ಮಹೋತ್ಸವ, ವಾರ್ಷಿಕ ಮಹಾಸಭೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ
ಗೋಳಿಯಂಗಡಿ : ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ (ರಿ.) ವತಿಯಿಂದ ವಿಶ್ವಕರ್ಮ ಯಜ್ಞಮಹೋತ್ಸವ ಮತ್ತು ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಆವರಣದಲ್ಲಿ ನಡೆಯಿತು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಿ ಶುಭ ಹಾರೈಸಿದರು.


ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಎಸ್.ಚಂದ್ರ ಆಚಾರ್ಯ ವಹಿಸಿದ್ದು ಅವರು ಮಾತನಾಡಿ ಸಂಘದ ವ್ಯಾಪ್ತಿಯ ಸದಸ್ಯರು ಸಂಘದ ಅಭಿವೃದ್ಧಿಯಲ್ಲಿ ಪೂರ್ಣ ಪ್ರಮಾಣದ ಸಹಕಾರ ನೀಡಬೇಕೆಂದು ಕೋರಿಕೊಂಡು ವಿಶ್ವಕರ್ಮ ಯಜ್ಞಮಹೋತ್ಸವಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಅರ್ಪಿಸಿದರು.


ಮುಖ್ಯ ಅತಿಥಿಗಳಾಗಿ ಉಡುಪಿ ಅಂಬಾಗಿಲಿನ ಭವಾನಿ ಬಿಲ್ಡರ‍್ಸ್‌ನ ಭವಾನಿ ನಾರಾಯಣ ಆಚಾರ್ಯ, ಗೋಳಿಯಂಗಡಿಯ ಉದ್ಯಮಿ ಜಯಪ್ರಕಾಶ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಕೆ.ರಾಮರಾಯ ಆಚಾರ್ಯ, ಭಾಗಹಿಸಿದ್ದು ಶುಭ ಹಾರೈಸಿ ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ಸಂಘದ ಅಧ್ಯಕ್ಷರಾದ ವಿಮಲಾ ರಾಮಚಂದ್ರ ಆಚಾರ್ಯ, ಎಚ್.ಭಾಸ್ಕರ ಆಚಾರ್ಯ ಹಿಲಿಯಾಣ ಹಾಗೂ ವಿಶ್ವೇಶ್ವರ ಆಚಾರ್ಯ ಉಪಸ್ಥಿತರಿದ್ದರು.


ಸಭೆಯಲ್ಲಿ ಸೂರ್ಗೋಳಿ ರಾಮ ಆಚಾರ್ಯ, ಕಾನಾಡಿ ಶಂಕರ ಆಚಾರ್ಯರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಘದ ನೂತನ ಜಾಗ ಖರೀದಿಗೆ ಭೂದಾನ ಮಾಡಿದವರಿಗೆ ದಾನಪತ್ರ ವಿತರಿಸಲಾಯಿತು.
ಕಾಳಿಕಾಂಬಾ ಮಹಿಳಾ ಸಂಘದ ಸದಸ್ಯರು ಪ್ರಾರ್ಥಿಸಿದರು.


ಶ್ರೀಧರ ಆಚಾರ್ಯ ತೊಂಭತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದ್ದು ಎಚ್.ನಾಗರಾಜ ಆಚಾರ್ಯ ಲೆಕ್ಕಪತ್ರ ಹಾಗೂ ವರದಿ ಮಂಡಿಸಿದರು. ಕೆ.ಕೃಷ್ಣಮೂರ್ತಿ ಕೊಂಜಾಡಿ ಸ್ವಾಗತಿಸಿದ್ದು ಕೆ.ನಾರಾಯಣ ಆಚಾರ್ಯ ಕೊಂಜಾಡಿ ವಂದಿಸಿದರು. ಅನಂತಯ್ಯ ಆಚಾರ್ಯ ಗೋಳಿಯಂಗಡಿ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page