udupimitra.in
  • November 26, 2026
  • Last Update November 26, 2026 4:20 am
  • Brahmavara

ನೀಲಾವರ ಮೇಳದ 2026-27ನೇ ಸಾಲಿನ ತಿರುಗಾಟದ ಪ್ರಥಮ ಸೇವೆಯಾಟ ಇಂದು

ನೀಲಾವರ ಮೇಳದ 2026-27ನೇ ಸಾಲಿನ ತಿರುಗಾಟದ ಪ್ರಥಮ ಸೇವೆಯಾಟ ಇಂದು

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ ನ.5:
ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರದ ಶ್ರೀ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮಂಡಳಿಯ ೨೦೨೬?೨೭ನೇ ಸಾಲಿನ ತಿರುಗಾಟದ ಪ್ರಥಮ ದೇವರ ಸೇವೆಯಾಟವು ಇಂದು (ನ.26, ಗುರುವಾರ) ರಾತ್ರಿ 8 ಗಂಟೆಗೆ ಕ್ಷೇತ್ರದ ಆವರಣದಲ್ಲಿ ನಡೆಯಲಿದೆ.


ತಿರುಗಾಟದ ಶುಭಾರಂಭದ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ಗಣಹೋಮಾದಿ ವಿವಿಧ ಧಾರ್ಮಿಕ ಹಾಗೂ ದೇವತಾ ಕಾರ್ಯಗಳು ಜರುಗಲಿವೆ. ರಾತ್ರಿ ೮ ಗಂಟೆಗೆ ಸರಿಯಾಗಿ ‘‘ದಶಮುಖ ದಿಗ್ವಿಜಯ, ಕಾರ್ತಿಕೇಯ ಕಲ್ಯಾಣ ‘ ಪೌರಾಣಿಕ ಪ್ರಸಂಗದ ಸೇವೆಯಾಟ ಪ್ರದರ್ಶನಗೊಳ್ಳಲಿದೆ.
ಪ್ರಸಕ್ತ ಸಾಲಿನ ತಿರುಗಾಟದಲ್ಲಿ ಮೇಳವು ಪೌರಾಣಿಕ ಪ್ರಸಂಗಗಳ ಜತೆಗೆ ಹಾಸ್ಯಮಯ ಹಾಗೂ ಕುತೂಹಲಭರಿತ ಸಾಮಾಜಿಕ ಪ್ರಸಂಗಗಳನ್ನೂ ಪ್ರದರ್ಶಿಸಲಿದೆ. ಹರಕೆ ಸೇವೆಯಾಟ ಹಾಗೂ ಪ್ರಸಂಗಗಳ ಕುರಿತ ಹೆಚ್ಚಿನ ವಿವರಗಳಿಗೆ ಆಸಕ್ತರು 9164765898, 9986111989 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಮೇಳದ ಪ್ರಕಟಣೆ ತಿಳಿಸಿದೆ

administrator

Related Articles

Leave a Reply

Your email address will not be published. Required fields are marked *

You cannot copy content of this page