ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ನ.೨೭: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘದ ಉಡುಪಿ ಆಹಾರ ಉದ್ಯಮ ಮೇಳದ ವೈಭವದ ಪುರ ಮೆರವಣಿಗೆ ಬ್ರಹ್ಮಾವರದಲ್ಲಿ ಇಂದು ಸಂಜೆ ಚಾಲನೆ ನೀಡಲಾಯಿತು.

ಮಂಗಳೂರಿನ ಟೊಯೋಟೊ ಮಾರ್ಕೆಟಿಂಗ್ ಗ್ರೂಪ್ ಹೆಡ್ ಸೋನಿಯಾ ಎಂ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿಜು ಕೆ. ನಾಯರ್ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.)ದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವಾಲ್ಟರ್ ಜೋಸೆಫ್ ಸಲ್ದಾನ, ಅಧ್ಯಕ್ಷ ವಿಶ್ವನಾಥ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್, ಕಾನೂನು ಸಲಹೆಗಾರ ಹಾಗೂ ಉದ್ಯಮ ಮೇಳದ ಸಂಚಾಲಕ ಶ್ರೀಧರ್ ಪಿ.ಎಸ್., ಗೌರವ ಸಲಹೆಗಾರ ಸ್ಟ್ಯಾನ್ಲಿ ಹೆರಾಲ್ಡ್ ಡಿಸೋಜಾ, ಉಪಾಧ್ಯಕ್ಷ ಸುದೇವ ಶೆಟ್ಟಿ ಹಾಗೂ ಕೆ.ಪಿ.ಶ್ರೀಶನ್, ಸಂಘಟನಾ ಕಾರ್ಯದರ್ಶಿ ದಿವಾಕರ ಸನಿಲ್, ಜೊತೆ ಕಾರ್ಯದರ್ಶಿ ಗಣಪತಿ ಮರಕಾಲ ಹಾಗೂ ಕೃಷ್ಣ ಪೂಜಾರಿ, ಆಡಳಿತ ಮಂಡಳಿಯ ಸದಸ್ಯರಾದ ಅಮೃತ್ ಕುಮಾರ್ ತೌಳ, ದುರ್ಗಾ ಪ್ರಸಾದ್, ಸಂದೀಪ್, ಚಂದ್ರಶೇಖರ್, ಕೃಷ್ಣ ನಾಯ್ಕ್, ವಿಶ್ವನಾಥ್ ಪಿ, ಶಶಿಧರ ಗಾಣಿಗ, ರಿತೇಶ ಸುವರ್ಣ, ಹಸನಬ್ಬ, ಅಜಿತ್ ಶೆಟ್ಟಿ, ರಾಘವೇಂದ್ರ ಮಡಿಕುಳ, ಸಂತೋಷ ಕುಲಾಲ್, ವಿಶ್ವನಾಥ ಬಿ.ಎಸ್, ಸೋಮಶೇಖರ ಕೆ.ಎಸ್, ಸಂತೋಷ ಪೂಜಾರಿ, ಮಂಜುನಾಥ ಕಾಮತ್, ನವೀನ್ ಶೆಟ್ಟಿ ಹಾಗೂ ಸಂಘದ ಇನ್ನಿತರ ಸದಸ್ಯರುಗಳು ಉಪಸ್ಥಿತರಿದ್ದರು. ಮೆರವಣಿಗೆ ಬ್ರಹ್ಮಾವರ ಕುಂಚಾಲು ಸರ್ಕಲ್ ನಿಂದ ಹೊರಟು ಹಳೆ ಬಸ್‌ನಿಲ್ದಾಣವನ್ನು ಹಾದು ಉಡುಪಿ ಆಹಾರ ಮತ್ತು ಉದ್ಯಮ ಮೇಳ ನಡೆಯುವ ಬ್ರಹ್ಮಾವರ ಗಾಂಧಿ ಮೈದಾನಕ್ಕೆ ಪ್ರವೇಶಗೊಂಡಿತು. ಮೆರವಣಿಗೆಯಲ್ಲಿ ಆಕರ್ಷಕ ತಟ್ಟಿರಾಯ, ಗೊಂಬೆ ಬಳಗ, ನಾಸಿಕ್ ಬ್ಯಾಂಡ್, ಕೀಲುಕುದುರೆ ಗಮನ ಸೆಳೆದವು.






