• April 19, 2026
  • Last Update April 18, 2026 5:29 pm
  • Brahmavara

ಮಹಿಳೆಯರ ಪರವಾದ ಮಸೂದೆ ತರಲು ವಿಪಕ್ಷಗಳು ಬಿಟ್ಟಿಲ್ಲ, ದೇಶದ ಮಹಿಳೆಯರು ಅವರನ್ನು ಕ್ಷಮಿಸಲ್ಲ- ಪ್ರಧಾನಿ ನರೇಂದ್ರ ಮೋದಿ

ಮಹಿಳೆಯರ ಪರವಾದ ಮಸೂದೆ ತರಲು ವಿಪಕ್ಷಗಳು ಬಿಟ್ಟಿಲ್ಲ, ದೇಶದ ಮಹಿಳೆಯರು ಅವರನ್ನು ಕ್ಷಮಿಸಲ್ಲ- ಪ್ರಧಾನಿ ನರೇಂದ್ರ ಮೋದಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಉಡುಪಿ, ಎ. ೧೮: ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿ ಮಹಿಳೆಯರ ಪರವಾದ ಈ ಮಸೂದೆ ತರಬೇಕೆಂದು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದೆವು. ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ವಿಪಕ್ಷಗಳು ಹತ್ಯೆ ಮಾಡಿದವು. ವಿಪಕ್ಷದವರು ಮಾಡಿದ ಕೆಲಸವನ್ನು ಈ ದೇಶದ ಜನರು ಯಾವುದೇ ಕಾರಣಕ್ಕೂ ಕ್ಷಮಿಸಲ್ಲ. ಮಹಿಳಾ ಬಿಲ್ ಪಾಸ್ ಆಗದಿದ್ದದ್ದಕ್ಕೆ ದೇಶದ ಮಹಿಳೆಯರಲ್ಲಿ ಕ್ಷಮೆಯನ್ನು ಯಾಚಿಸುತ್ತೇನೆಂದು ನುಡಿದರು. ಎ.೧೮ರ ರಾತ್ರಿ ೮.೩೦ಕ್ಕೆ ಅವರು ದೇಶದ ಜನರನ್ನುದ್ದೇಶಿಸಿ ಮಾತನಾಡಿದರು.


ಸ್ವಾರ್ಥ ರಾಜಕಾರಣಕ್ಕೆ ಮಸೂದೆಯನ್ನು ಬಲಿ ಕೊಡಲಾಗಿದೆ. ಮಹಿಳಾ ಶಕ್ತಿಯನ್ನು ಈ ಪಕ್ಷಗಳು ಮಸೂದೆಯನ್ನು ಕ್ಷುಲ್ಲಕವಾಗಿ ನೋಡಿದವು. ವಿಪಕ್ಷಗಳು ಮಾಡಿದ ಪಾಪಕ್ಕೆ ಅವರಿಗೆ ಶಿಕ್ಷೆಯಾಗುತ್ತೆ. ೪೦ವರ್ಷಗಳಿಂದ ಮಹಿಳೆಯರ ಹಕ್ಕುಗಳನ್ನು ಈ ಪಕ್ಷಗಳು ತಡೆಯುತ್ತಾ ಬಂದವು. ಮಹಿಳಾ ಮೀಸಲು ೨೧ನೇ ಶತಮಾನದ ಅತಿ ದೊಡ್ಡ ಪ್ರಯತ್ನವಾಗಿತ್ತು. ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ನೀಡುವ ಉದ್ದೇಶದಿಂದ ಈ ಬಿಲ್ ತರಲಾಗಿತ್ತು. ವಿಪಕ್ಷಗಳು ಮಹಿಳಾ ಮೀಸಲು ಬಿಲ್ಲನ್ನು ಭ್ರೂಣ ಹತ್ಯೆ ಮಾಡಿದಂತೆ ಹತ್ಯೆ ಮಾಡಿವೆ. ಈ ಬಿಲ್ ತಡೆಯಲು ವಿಪಕ್ಷಗಳು ಸುಳ್ಳು ಹೇಳಿದವು. ಮಸೂದೆ ಕುರಿತು ಇಡೀ ದೇಶದ ಮಹಿಳೆಯರು ಸಂಸತ್ ಮೇಲೆ ಗಮನ ಇರಿಸಿದ್ದರು. ಕಾಂಗ್ರೆಸ್ ತನ್ನ ಹಿಂದಿನ ರೀತಿಯಲ್ಲಿಯೇ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಕೆಲಸ ಮಾಡಿತು. ಮಹಿಳೆಯರು ತಮಗಾದ ಅವಮಾನವನ್ನು ಎಂದಿಗೂ ಮರೆಯಲ್ಲ. ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ವಿಪಕ್ಷಗಳು ಹತ್ಯೆ ಮಾಡಿದವು. ಕಾಂಗ್ರೆಸ್ ಪಕ್ಷಕ್ಕೆ ಪ್ರಾದೇಶಿಕ ಪಕ್ಷಗಳು ಬೆಳೆಯುವುದು ಬೇಕಾಗಿಲ್ಲ. ಕಾಂಗ್ರೆಸ್ ಮಿತ್ರ ಪಕ್ಷಗಳನ್ನು ವಂಚಿಸುವ ಕೆಲಸ ಮಾಡಿತು. ಕಾಂಗ್ರೆಸ್ ತಮ್ಮ ಕುಟುಂಬದ ಮಹಿಳೆಯರನ್ನಷ್ಟೇ ಬೆಳೆಸುತ್ತಾ ಬಂದಿದೆ. ವಿಪಕ್ಷದವರು ಮಾಡಿದ ಕೆಲಸವನ್ನು ಈ ದೇಶದ ಜನರು ಯಾವುದೇ ಕಾರಣಕ್ಕೂ ಕ್ಷಮಿಸಲ್ಲ.
ಕಾಂಗ್ರೆಸ್ ಕ್ಷೇತ್ರ ಪುನರ್ ವಿಂಗಡಣೆಯಿಂದ ಕೆಲ ರಾಜ್ಯಗಳಿಗೆ ನಷ್ಟ ಎಂದು ಸುಳ್ಳು ಸೃಷ್ಟಿಸಿತು. ನಿಜವಾಗಿಯೂ ಯಾವ ರಾಜ್ಯಕ್ಕೂ ಪ್ರತಿನಿತ್ಯ ಕಡಿಮೆಯಾಗಲ್ಲ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಒಟ್ಟು ಸೇರಿ ಉದ್ದೇಶಪೂರ್ವಕವಾಗಿಯೇ ನಮ್ಮ ಬಿಲ್ಲನ್ನು ಸೋಲಿಸಿದವು. ಈ ಬಿಲ್ ಪಾಸಾಗಿದ್ದರೆ ಎಲ್ಲ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಹೆಚ್ಚುತ್ತಿತ್ತು ತಮಿಳುನಾಡಿನ ಪ್ರಾತಿನಿಧ್ಯ ಹೆಚ್ಚುತ್ತಿತ್ತು. ಅದನ್ನು ಡಿಎಂಕೆ ತಡೆಯುವ ಪ್ರಯತ್ನ ಮಾಡಿತು ಪಶ್ಚಿಮ ಬಂಗಾಳದಲ್ಲೂ ಕ್ಷೇತ್ರಗಳು ಹೆಚ್ಚಳವಾಗುತ್ತಿದ್ದವು. ಟಿಎಂಸಿ ನಮ್ಮ ಪ್ರಯತ್ನವನ್ನು ತಡೆಯಿತು. ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಮಹಿಳಾ ಮೀಸಲು ವಿರುದ್ಧ ನಿಂತಿತು. ಜನರು ಸಮಾಜವಾದಿ ಪಕ್ಷವನ್ನು ಕ್ಷಮಿಸುವುದಿಲ್ಲ. ಕಾಂಗ್ರೆಸ್ ಸುಧಾರಣಾ ಕ್ರಮಗಳನ್ನು ವಿರೋಧಿಸುವ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದೆ. ಕಾಂಗ್ರೆಸ್ ಜಿಎಸ್‌ಟಿ ತ್ರಿವಳಿ ತಲಾಕ್, ಆರ್ಟಿಕಲ್ ೩೭೦ ರದ್ದು ವಿರೋಧಿಸಿತು. ಕಾಂಗ್ರೆಸ್ ಈಗ ಏಕರೂಪ ನಾಗರಿಕ ಸಹಿತೆಯನ್ನೂ ವಿರೋಧಿಸುತ್ತಿದೆ. ಅದರೊಂದಿಗೆ ಒಂದು ದೇಶ ಒಂದು ಚುನಾವಣೆ ಕಾನೂನನ್ನೂ ವಿರೋಧಿಸುತ್ತಿದೆ. ಕಾಂಗ್ರೆಸ್ ಸುಧಾರಣೆಯನ್ನು ಸುಳ್ಳು ಹೇಳುವ ಮೂಲಕ ವಿರೋಧಿಸುತ್ತಾ ಬಂದಿದೆ. ಭಾರತ ಸ್ವಾತಂತ್ರ್ಯಗೊಂಡಾಗ ನಮ್ಮಂತೆ ಹಲವು ದೇಶಗಳು ಸ್ವಾತಂತ್ರ್ಯಗೊಂಡವು. ಆದರೆ ಆ ದೇಶಗಳು ನಮ್ಮನ್ನು ಮೀರಿಸಿ ಅಭಿವೃದ್ಧಿಯಾಗುತ್ತಿವೆ. ನೆರೆ ದೇಶಗಳ ಗಡಿ ವಿವಾದ ಸೃಷ್ಟಿಸಿದ್ದೆ ಕಾಂಗ್ರೆಸ್. ಪಾಕಿಸ್ತಾನದ ಜೊತೆ ಕೆಟ್ಟ ಜಲ ಒಪ್ಪಂದ ಮಾಡಿಕೊಂಡಿದ್ದು ಕೂಡ ಇದೇ ಕಾಂಗ್ರೆಸ್ ಪಕ್ಷ. ಮಹಿಳೆಯರಿಗೆ ಅವರ ಹಕ್ಕುಗಳು ಸಿಕ್ಕರೆ ಸಾಕು ಎಂದು ನಾನು ಹೇಳಿದ್ದೆ. ಆದರೆ ಬಿಲ್ ಪಾಸ್ ಮಾಡಲು ಬಿಡಲಿಲ್ಲ. ನಮಗೆ ಶೇಕಡಾ ೬೬ ರಷ್ಟು ಮತಗಳು ಸಿಗಲಿಲ್ಲ ಆದರೆ ದೇಶದ ಶೇ.೧೦೦ ರಷ್ಟು ನಾರಿ ಶಕ್ತಿ ನಮ್ಮ ಜೊತೆಗಿದೆ ಎಂಬುದು ನಮಗೆ ಗೊತ್ತಿದೆ. ಮಹಿಳಾ ಮೀಸಲು ಕಾನೂನನ್ನು ತುಂಬ ದಿನ ತಡೆಯಲು ಸಾಧ್ಯವೇ ಇಲ್ಲ ಎಂದು ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page