ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಕೋಟ, ಜು.೨೯: ಕೋಟ ಸಹಕಾರಿ ವ್ಯವಸಾಯಕ ಸಂಘದ ತೆರವಾದ ನಿರ್ದೇಶಕ ಸ್ಥಾನಕ್ಕೆ ಆಡಳಿತ ಮಂಡಳಿ ನೂತನ ನಿರ್ದೇಶಕರನ್ನಾಗಿ ರಾಘವೇಂದ್ರ ಮಧ್ಯಸ್ಥ (ರಘು ಮಧ್ಯಸ್ಥ) ಪಾರಂಪಳ್ಳಿ ಅವರನ್ನು ಜೂ.29ರಂದು ಆಯ್ಕೆ ಮಾಡಿದೆ.
ರಾಘವೇಂದ್ರ ಮಧ್ಯಸ್ಥರು ವಿಧಾತ್ರಿ ರೈತ ಉತ್ಪಾದನಾ ಕೇಂದ್ರ ಕೋಟ ಇದರ ನಿರ್ದೇಶಕರಾಗಿ, ಕೂಟ ಬ್ರಾಹ್ಮಣರ ಮಿತ್ರ ಮಂಡಳಿ ಬೆಂಗಳೂರು ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಯಶಸ್ವಿ ಕೃಷಿಕರಾಗಿದ್ದು ಸಾವಯವ ಕೃಷಿಗೆ ಮಹತ್ವಿಕೆ ನೀಡುತ್ತಾ ಬಂದಿದ್ದಾರೆ. ಸ್ವಂತ ಕೃಷಿ ಮೆಶಿನರಿಗಳನ್ನು ಹೊಂದಿರುವ ಇವರು ಪಾರಂಪಳ್ಳಿ ಪರಿಸರದ ಕೃಷಿಕರ ೪೨ ಎಕ್ರೆ ಜಾಗದ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಾ ಬಂದಿದ್ದಾರೆ.

ದಿನಕ್ಕೆ ೨೦೦೦ ಲೀ. ಜೀವಾಮೃತ ಉತ್ಪಾದನೆ ಮಾಡುತ್ತಾ ಕೃಷಿ ಬಳಕೆಗೆ ಉಪಯೋಗಿಸುತ್ತಾ ಬಂದಿದ್ದಾರೆ. ಉತ್ತಮ ಹೈನುಗಾರರಾಗಿಯೂ ಗುರುತಿಸಿ ಕೊಂಡಿದ್ದು ಸಾಲಿಗ್ರಾಮ ಹಾಲುತ್ಪಾದಕರ ಸಹಕಾರ ಸಂಘಕ್ಕೆ ಅತಿ ಹೆಚ್ಚು ಹಾಲು ಒದಗಿಸುತ್ತಾ ಬಂದಿದ್ದಾರೆ.

ಕೋಟ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್ ಹಂದೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರನ್ನಾಗಿ ಹಿರಿಯ ನಿರ್ದೇಶಕ ಗುಂಡ್ಮಿ ರವೀಂದ್ರ ಕಾಮತ್ ಅವರನ್ನು ಚುನಾವಣೆ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ನೂತನ ನಿರ್ದೇಶಕರಾಗಿ ರಾಘವೇಂದ್ರ ಮಧ್ಯಸ್ಥ (ರಘು ಮಧ್ಯಸ್ಥ) ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭ ಸಂಘದ ಅಧ್ಯಕ್ಷ ಡಾ|ಕೃಷ್ಣ ಕಾಂಚನ್ ಶುಭ ಹಾರೈಸಿದರು. ಮಾಜಿ ಅಧ್ಯಕ್ಷ/ಹಾಲಿ ನಿರ್ದೇಶಕ ತಿಮ್ಮ ಪೂಜಾರಿ, ಉಪಾಧ್ಯಕ್ಷ ರವೀಂದ್ರ ಕಾಮತ್, ನಿರ್ದೇಶಕರಾದ ಮಂಜುನಾಥ ಗಿಳಿಯಾರು, ಉದಯಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ, ರಂಜಿತ್ ಕುಮಾರ್, ಚಂದ್ರ ಪೂಜಾರಿ, ಅಜಿತ್ ದೇವಾಡಿಗ, ದಿನಕರ ಶೆಟ್ಟಿ, ಶೇಖರ ಮರಕಾಲ, ಶ್ರೀಮತಿ ರಶ್ಮಿಕಾ, ಶ್ರೀಮತಿ ವಸಂತಿ ಅಚ್ಚುತ ಪೂಜಾರಿ, ಶ್ರೀಮತಿ ಪ್ರೇಮ, ಕೃಷಿಕರಾದ ಭಾಸ್ಕರ ಶೆಟ್ಟಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಗೋಪಾಲ ಬಂಗೇರ ಇದ್ದರು.




